ಎನ್ನೆಸ್ಸೆಸ್ ಶಿಬಿರ ಆಯೋಜಿಸಿ

ತಾವರಗೇರಾ ಪದವಿ ಕಾಲೇಜಿನ ವಿದ್ಯಾರ್ಥಿಗಳು ಎನ್ನೆಸ್ಸೆಸ್ ಶಿಬಿರ ಆಯೋಜಿಸುವಂತೆ ಒತ್ತಾಯಿಸಿ ಪ್ರಾಚಾರ್ಯೆ ಟಿ.ಅರುಣಾ ಕುಮಾರಿಗೆ ಮಂಗಳವಾರ ಮನವಿ ಸಲ್ಲಿಸಿದರು. ವಿದ್ಯಾರ್ಥಿಗಳಾದ ಕಾರ್ತಿಕ, ಪ್ರಶಾಂತ, ನಿಂಗಪ್ಪ ಇತರರಿದ್ದರು.
ತಾವರಗೇರಾ ಪದವಿ ಕಾಲೇಜಿನ ವಿದ್ಯಾರ್ಥಿಗಳು ಎನ್ನೆಸ್ಸೆಸ್ ಶಿಬಿರ ಆಯೋಜಿಸುವಂತೆ ಒತ್ತಾಯಿಸಿ ಪ್ರಾಚಾರ್ಯೆ ಟಿ.ಅರುಣಾ ಕುಮಾರಿಗೆ ಮಂಗಳವಾರ ಮನವಿ ಸಲ್ಲಿಸಿದರು. ವಿದ್ಯಾರ್ಥಿಗಳಾದ ಕಾರ್ತಿಕ, ಪ್ರಶಾಂತ, ನಿಂಗಪ್ಪ ಇತರರಿದ್ದರು.
Published on

ತಾವರಗೇರಾ: ಕೊಪ್ಪಳ ವಿವಿ ವ್ಯಾಪ್ತಿಗೆ ಬರುವ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ಬಿಎ, ಬಿಕಾಂ ವಿದ್ಯಾರ್ಥಿಗಳು 2024-25ನೇ ಸಾಲಿನ ಎನ್ನೆಸ್ಸೆಸ್ ಶಿಬಿರ ಆಯೋಜಿಸುವಂತೆ ಒತ್ತಾಯಿಸಿ ಪ್ರಾಚಾರ್ಯೆ ಟಿ.ಅರುಣಾ ಕುಮಾರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ವಿದ್ಯಾರ್ಥಿ ಕಾರ್ತಿಕ್ ಮಾತನಾಡಿ, 2023-24ನೇ ಸಾಲಿನಲ್ಲಿ ವಿವಿಯಿಂದ ಎನ್ನೆಸ್ಸೆಸ್ ಶಿಬಿರ ಆಯೋಜಿಸಿಲ್ಲ. ಆದ್ದರಿಂದ ಈ ವರ್ಷ ಶಿಬಿರ ಆಯೋಜಿಸಲು ಈಗಾಗಲೇ ಪ್ರಾಚಾರ್ಯರಿಗೆ ಮನವಿ ಸಲ್ಲಿಸಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು. ಪ್ರಾಚಾರ್ಯೆ ಟಿ.ಅರುಣಾ ಕುಮಾರಿ ಮಾತನಾಡಿ, ಈಗಾಗಲೇ ವಿವಿಗೆ ಮನವಿ ಸಲ್ಲಿಸಿದ್ದು, ಅನುಮತಿ ನೀಡಿದ ತಕ್ಷಣ ಶಿಬಿರ ಆಯೋಜಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net