ಸಂಘಟಿತರಾಗಿ ಆಚರಿಸಲು ವರ್ತಕರ ನಿರ್ಧಾರ

Published on

ಕಂಪ್ಲಿ: ಈ ಬಾರಿ ದೀಪಾವಳಿ ಅಮಾವಾಸ್ಯೆ ಎರಡು ದಿನ ಬಂದಿದ್ದರಿಂದ ದೀಪಾವಳಿ ಅಮಾವಾಸ್ಯೆ ಆಚರಣೆಯಲ್ಲಿ ಗೊಂದಲ ಉಂಟಾಗಬಾರದೆಂದು, ವರ್ತಕರೆಲ್ಲ ಸಂಘಟಿತರಾಗಿ ದೀಪಾವಳಿ ಆಚರಿಸುವಲ್ಲಿ ಮುಂದಾಗಲು ವರ್ತಕ ಸಂಘದವರು ನಿರ್ಧರಿಸಿದ್ದಾರೆ.

ಅ.31ರಂದು ಬೆಳಗ್ಗೆ 5.10ಕ್ಕೆ ನರಕ ಚತುರ್ದಶೀಯ ಆರತಿ ಪೂಜೆ, ಮಧ್ಯಾಹ್ನ 12ಗಂಟೆಯಿಂದ ಮಧ್ಯಾಹ್ನ 1.30ರತನಕ ಅಮಾವಾಸ್ಯೆ ನಿಮಿತ್ತ ಗಾದಿಪೂಜೆ, ಅ.31ರಂದು ರಾತ್ರಿ 8ಗಂಟೆಯಿಂದ 10.45ರತನಕ ಶ್ರೀ ಮಹಾಲಕ್ಷೀ ಪೂಜೆ ನೆರವೇರಿಸಬೇಕಿದೆ.

ಜೈನ ಸಮಾಜದವರಿಗೆ ಅ.31ರಂದು ಅಮಾವಾಸ್ಯೆ ನಿಮಿತ್ತ ಸಂಜೆ 6ಗಂಟೆಯಿಂದ ಸಂಜೆ 7.30ರತನಕ ಹಾಗೂ ರಾತ್ರಿ 10.30ರಿಂದ ರಾತ್ರಿ 12.30ರತನಕ ಮಹಾಲಕ್ಷ್ಮೀ ಸರಸ್ವತಿ ಪೂಜೆ ನೆರವೇರಿಸಲಿದ್ದಾರೆ. ನ.1ರಂದು ಉಸಿ ಅಮಾವಾಸ್ಯೆ ಆಚರಿಸಿ, ನ.2ರಂದು ಪಾಡ್ಯ ನಿಮಿತ್ತ ಬೆಳಗ್ಗೆ 4ರಿಂದ ಬೆಳಗ್ಗೆ 5.45ರತನಕ ಶ್ರೀ ಮಹಾಸರಸ್ವತಿ ಪೂಜೆ ನೆರವೇರಿಸುವಂತೆ ವರ್ತಕ ಸಂಘದ ಅಧ್ಯಕ್ಷ ಜಿ.ವಿ.ಸತ್ಯನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net