ಬೇಡಿಕೆ ಈಡೇರುವವರೆಗೆ ಸಂಘಟನೆ ಕಾರ್ಯ

h24- Panchamasali Mela
Published on

ಹುಬ್ಬಳ್ಳಿ: ಪಂಚಮಸಾಲಿ ಸಮಾಜವನ್ನು 2ಎ ಹಾಗೂ ಲಿಂಗಾಯತ ಎಲ್ಲ ಒಳಪಂಗಡಗಳನ್ನು ಸರ್ಕಾರವು ಒಬಿಸಿ ಮೀಸಲಾತಿಗೆ ಒಳಪಡಿಸುವಂತೆ ಒತ್ತಾಯಿಸಿ ಆರಂಭವಾಗಿರುವ ಪ್ರತಿಜ್ಞಾ ಪಂಚಾಯತ್ ಅಭಿಯಾನ ಹಾಗೂ ಜಾಗೃತ ಸಭೆಯು ಭಾನುವಾರ ಇಲ್ಲಿಯ ವಿದ್ಯಾನಗರದಲ್ಲಿ

ನಡೆಯಿತು.

ಈ ಹಿನ್ನೆಲೆಯಲ್ಲಿ ವಿದ್ಯಾನಗರದ ಶ್ರೀ ರಂಭಾಪುರಿ ಸಮುದಾಯ ಭವನದಿಂದ ಏರ್ಪಡಿಸಿದ್ದ ಕುಂಭಮೇಳದಲ್ಲಿ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು. ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಮಹಾಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಕುಂಭಮೇಳಕ್ಕೆ ಚಾಲನೆ ನೀಡಿದರು.

ಸಮಾಜದ ನೂರಾರು ಜನರು ಪಾಲ್ಗೊಂಡು ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಪರ ಘೋಷಣೆ ಕೂಗಿದರು. ವಿವಿಧ ವಾದ್ಯಮೇಳಗಳೊಂದಿಗೆ ಕುಂಭಮೇಳವು ಕಲ್ಯಾಣನಗರದ ರಂಗಮಂದಿರ ತಲುಪಿತು. ನಂತರ ಅಲ್ಲಿ ಜಾಗೃತ ಸಭೆ ನಡೆಯಿತು.

ಸಂಘಟನೆ ಚುರುಕು: ಸಭೆಯಲ್ಲಿ ಮಾತನಾಡಿದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿಯವರು, ಸಮಾಜಕ್ಕೆ ಮೀಸಲಾತಿ ನೀಡುವ ಬಗ್ಗೆ ಸರ್ಕಾರ ಈಗಾಗಲೇ ಭರವಸೆ ನೀಡಿತ್ತು. ಆದರೆ, ಇದುವರೆಗೂ ಬೇಡಿಕೆ ಈಡೇರಿಲ್ಲ. ಇದೀಗ ಮತ್ತೆ

ಆಗಸ್ಟ್​ವರೆಗೆ ಸರ್ಕಾರ ಕಾಲಾವಕಾಶ ತೆಗೆದುಕೊಂಡಿದೆ. ಇದಕ್ಕಾಗಿ ಸಮಾಜ ಸಂಘಟನೆಗೆ ಹೆಚ್ಚು ಒತ್ತು ನೀಡಲಾಗಿದೆ ಎಂದರು.

ಪಂಚಮಸಾಲಿ ಸಮಾಜದ ಧಾರವಾಡ ಜಿಲ್ಲಾಧ್ಯಕ್ಷ ನಿಂಗಣ್ಣ ಕರಿಕಟ್ಟಿ, ಸ್ವಾಗತ ಕಮಿಟಿ ಕಾರ್ಯದರ್ಶಿ ವಿಜಯ ಕುಲಕರ್ಣಿ, ಎಪಿಎಂಸಿ ಮಾಜಿ ಅಧ್ಯಕ್ಷ ಜಗನ್ನಾಥಗೌಡ ಸಿದ್ದನಗೌಡ್ರ, ಉದ್ಯಮಿ ರಮೇಶ ಪಾಟೀಲ, ಹುಡಾ ಮಾಜಿ ಅಧ್ಯಕ್ಷ ಲಿಂಗರಾಜ ಪಾಟೀಲ ಅವರು ಮಾತನಾಡಿದರು. ಡಾ. ಎಚ್.ವಿ. ಬೆಳಗಲಿ, ಸುರೇಶ ಲಿಂಬಿಕಾಯಿ, ಜಿ.ಜಿ. ದ್ಯಾವನಗೌಡ್ರ, ಬಸವರಾಜ ಮನಗುಂಡಿ, ಶಿವಾನಂದ ಮಾಯಕಾರ, ರಾಜು ಕೋಟಗಿ, ಗಂಗಾಧರ ದೊಡ್ಡವಾಡ ಇತರರು ಪಾಲ್ಗೊಂಡಿದ್ದರು. ಭಾನುವಾರ ರಾತ್ರಿ ಉಣಕಲ್ಲನಲ್ಲಿಯೂ ಪಂಚಮಸಾಲಿ ಸಮಾಜದ ಸಂಘಟನಾ ಸಭೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net