

ಕಂಪ್ಲಿ: ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಸರ್ವಾಂಗೀಣ ಪ್ರಗತಿ ಸಾಧಿಸಬೇಕು ಎಂದು ಬಣಜಿಗ ಸಂಘದ ಜಿಲ್ಲಾಧ್ಯಕ್ಷ ಕೋರಿ ವಿರೂಪಾಕ್ಷಪ್ಪ ಹೇಳಿದರು.
ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಬಣಜಿಗ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ಬಣಜಿಗ ಸಿರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಘದ ತಾಲೂಕು ಅಧ್ಯಕ್ಷ ಪ್ರಸಾದ್ ಗಡಾದ್ ಮಾತನಾಡಿ, ಸಂಘಟನೆಯಿಂದ ಸಮಾಜದ ಅಭಿವೃದ್ಧಿ ಸಾಧ್ಯ.
ಸಂಘಟನೆಗೆ ಯುವ ಘಟಕ ಆರಂಭಿಸಲಾಗುವುದು. ಈಗಾಗಲೇ ಮಹಿಳಾ ಘಟಕ ಸ್ಥಾಪಿಸಿದ್ದು, ಸಬಲೀಕರಣ ಸಂಘಟನೆಗೆ ಆದ್ಯತೆ ನೀಡಿದೆ. ಉನ್ನತ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು ಎಂದರು. ಬಣಜಿಗ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದ ಪ್ರಮುಖರಿಗೆ ಬಣಜಿಗ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ತಾಲೂಕು ಮಹಿಳಾ ಅಧ್ಯಕ್ಷೆ ಚೈತ್ರಾ ಗಡಾದ್, ಪ್ರಮುಖರಾದ ಎಸ್.ಎಸ್.ಎಂ.ಚನ್ನಬಸವರಾಜ, ಬಾಳೇಕಾಯಿ ಚನ್ನಬಸವರಾಜ, ಬಿ.ಶಿವಾನಂದ, ಮುರುಗೇಂದ್ರ ಮರ್ತೂರು, ಜಗದೀಶ ಅವರಾದಿ, ಬೆಳಗಲ್ ಮಲ್ಲಿಕಾರ್ಜುನ, ಅಕ್ಕಿ ಬಸವರಾಜ ಇತರಿದ್ದರು.