ನರೇಗಾ ಕ್ರೀಡಾಕೂಟ ಆಯೋಜನೆ ಶ್ಲಾಘನೀಯ

21 nrp 1
Published on

ಎನ್.ಆರ್.ಪುರ: ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ರೈತರು, ಕಾರ್ಮಿಕರಿಗೆ ಸರ್ಕಾರ ಕ್ರೀಡಾಕೂಟ ಏರ್ಪಡಿಸಿರುವುದು ಶ್ಲಾಘನೀಯ ಎಂದು ಕಾನೂರು ಗ್ರಾಪಂ ಅಧ್ಯಕ್ಷ ರತ್ನಾಕರ್ ಹೇಳಿದರು.

ಕಾನೂರು ಗ್ರಾಪಂ ಆವರಣದಲ್ಲಿ ನರೇಗಾ ದಿನಾಚರಣೆ ಅಂಗವಾಗಿ ನರೇಗಾ ಯೋಜನೆ ಉದ್ಯೋಗಿಗಳಿಗೆ ವಿವಿಧ ಕ್ರೀಡೆ, ವೈದ್ಯಕೀಯ ತಪಾಸಣೆ ಹಾಗೂ ಸಂಜೀವಿನಿ ಒಕ್ಕೂಟದ ಸದಸ್ಯರು ಏರ್ಪಡಿಸಿದ್ದ ಮಾಸಿಕ ಸಂತೆ ಉದ್ಘಾಟಿಸಿ ಮಾತನಾಡಿ, ಕಾನೂರು ಗ್ರಾಪಂ ಪಿಡಿಒ ಶ್ರೀನೀವಾಸ್ ಮಾತನಾಡಿ, ರಾಜ, ಮಹಾರಾಜರ ಕಾಲದಿಂದಲೂ ಕ್ರೀಡೆಗೆ ಮಹತ್ವ ನೀಡಲಾಗಿತ್ತು. ದಸರಾ ಕಾರ್ಯಕ್ರಮದಲ್ಲೂ ಕ್ರೀಡೆ ಏರ್ಪಡಿಸಲಾಗುತ್ತದೆ. ಸರ್ಕಾರ ನರೇಗ ಯೋಜನೆ ಉದ್ಯೋಗಿಗಳಿಗೆ ಕ್ರೀಡೆ ನಡೆಸಬೇಕು ಎಂಬ ಆದೇಶ ನೀಡಿದೆ. ಸದಾ ಒತ್ತಡದಿಂದ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಕ್ರೀಡೆ ಏರ್ಪಡಿಸಲಾಗಿದೆ ಎಂದರು.

ನರೇಗ ಯೋಜನೆಯಡಿ 100 ದಿನ ಕೆಲಸ ಮಾಡಿದ ವಿಜಯಕುಮಾರ್ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾಕೂಟದಲ್ಲಿ ಗೆದ್ದವರಿಗೆ ಬಹುಮಾನ ನೀಡಲಾಯಿತು. ನರೇಗಾ ಯೋಜನೆ ಉದ್ಯೋಗಿಗಳಿಗೆ ವೈದ್ಯಕೀಯ ತಪಾಸಣೆ ಮಾಡಲಾಯಿತು.

ಗ್ರಾಪಂ ಸದಸ್ಯ ವಿಜಯಕುಮಾರ್, ಎನ್‌ಆರ್‌ಎಲ್‌ಎಂ ಯೋಜನೆಯ ತಾಲೂಕು ವ್ಯವಸ್ಥಾಪಕ ಸುಬ್ರಹ್ಮಣ್ಯ, ಸಂಜೀವಿನಿ ಸ್ವ ಸಹಾಯ ಸಂಘದ ಒಕ್ಕೂಟದ ಅಧ್ಯಕ್ಷೆ ಪ್ರತಿಮಾ ಹೆಬ್ಬಾರ್,ಕಾರ್ಯದರ್ಶಿ ಶೀಬಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net