

ಮಂಡ್ಯ: 76ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಳವಳ್ಳಿ ತಾಲೂಕು ಯುವಕ ಮಿತ್ರರು ಹಲವು ಸಂಘಟನೆಯೊಂದಿಗೆ ಸೇರಿ 2023 ಜನರಿಂದ ರಕ್ತದಾನ ಮಾಡಿಸುವ ಗುರಿ ನಿಗದಿಪಡಿಸಿಕೊಂಡಿದ್ದಾರೆ. ಅದರಂತೆ ಜಾಗೃತಿ ಮೂಡಿಸುತ್ತಿದ್ದಾರೆ.
ಆ.15ರಂದು ಮಳವಳ್ಳಿ ಪಟ್ಟಣದ ರೋಟರಿ ಶಾಲೆಯಲ್ಲಿ ಶಿಬಿರ ಆಯೋಜಿಸಲಾಗಿದೆ. ಈ ಸಂಬಂಧ ಗಮನಸೆಳೆಯುವ ಫೋಸ್ಟರ್ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದಾರೆ. ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವವರಿಗಾಗಿ ರಕ್ತದಾನ, ಹೆರಿಗೆ ಸಮಯದಲ್ಲಿ ತಾಯಂದಿರಿಗಾಗಿ ರಕ್ತದಾನ, ಕ್ಯಾನ್ಸರ್ ರೋಗಿಗಳಿಗಾಗಿ ರಕ್ತದಾನ, ರಸ್ತೆ ಅಪಘಾತದ ಗಾಯಾಳುಗಳಿಗಾಗಿ ರಕ್ತದಾನ ಎನ್ನುವ ಘೋಷವಾಕ್ಯದೊಂದಿಗೆ ಶಿಬಿರ ಮಾಡಲಾಗುತ್ತಿದೆ.
ರಕ್ತದಾನಿಗಳು ಜೀವ ರಕ್ಷಕರು, ರಕ್ತದಾನ ಸಾಮಾಜಿಕ ಜವಾಬ್ದಾರಿ, ನಿಮ್ಮ ರಕ್ತ ಒಂದು ಜೀವ ಉಳಿಸಬಹುದು, ನಿಮ್ಮ ಐದು ನಿಮಿಷದ ಸಮಯ ಇನ್ನೊಬ್ಬರ ಜೀವಿತ ಅವಧಿಯಾಗಿದೆ ಎನ್ನುವ ವಾಕ್ಯಗಳು ಗಮನಸೆಳೆಯುತ್ತಿವೆ.