

ಕನಕಗಿರಿ: ಹಡಪದ ಸಮಾಜದ ಎಲ್ಲರೂ ಒಗ್ಗೂಡಿ ನಡೆದಾಗ ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ ಎಂದು ಪಪಂ ಮಾಜಿ ಸದಸ್ಯ, ಕಾಂಗ್ರೆಸ್ ವಕ್ತಾರ ಶರಣಪ್ಪ ಭತ್ತದ್ ಹೇಳಿದರು.
ಇದನ್ನೂ ಓದಿ:ಪದಾಧಿಕಾರಿಗಳ ಪದಗ್ರಹಣ ನಾಳೆ
ಪಟ್ಟಣದ ಎಪಿಎಂಸಿ ಶ್ರಮಿಕರ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನಗರ ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಡಪದ ಸಮಾಜ ಕ್ಷೌರಿಕ ವೃತ್ತಿಯನ್ನೇ ಅವಲಂಬಿಸಿದ್ದು, ಹಿಂದುಳಿದ ಸಮಾಜವಾಗಿದೆ. 12ನೇ ಶತಮಾನದಲ್ಲಿದ್ದ ಮೂಢ ನಂಬಿಕೆಗಳನ್ನು ತೊಡೆದುಹಾಕಲು ಬಸವಣ್ಣನವರು ಮೊದಲು ಕಂಡಿದ್ದು, ಅಪ್ಪಣ ಅವರನ್ನು. ಆದರೆ, ಸಮಾಜದವರು ಎಲ್ಲ ಕ್ಷೇತ್ರಗಳಲ್ಲಿಯೂ ಹಿಂದುಳಿದಿದ್ದಾರೆ. ಆದ್ದರಿಂದ ಎಲ್ಲರೂ ಶಿಕ್ಷಣವಂತರಾಗಬೇಕು. ಜತೆಗೆ ಸಂಘಟಿತರಾದರೆ ಬೆಳೆಯಲು ಸಾಧ್ಯ ಎಂದು ತಿಳಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ ಮಾತನಾಡಿ, ಜಾಗತೀಕರಣದಲ್ಲಿ ಸರ್ವ ಸಮಾಜಗಳ ಏಳಿಗೆಗೆ ಶಿಕ್ಷಣವೇ ಬುನಾದಿ. ಶಿಕ್ಷಣಕ್ಕಿರುವ ಶಕ್ತಿ ಬೇರಾವುದಕ್ಕಿಲ್ಲ ಎಂದರು.
ಸಮಾಜದ ನಗರ ಘಟಕದ ಅಧ್ಯಕ್ಷ ಬಸವರಾಜ ಹಡಪದ, ಉಪಾಧ್ಯಕ್ಷ ಪಂಪಾಪತಿ ಹಡಪದ, ಕಾರ್ಯದರ್ಶಿ ಸತೀಶ, ಖಜಾಂಚಿ ಚನ್ನಬಸವ, ಪ್ರಮುಖರಾದ ಲಿಂಗಪ್ಪ ಹಡಪದ, ಮಲ್ಲಿಕಾರ್ಜುನ, ಹೊನ್ನೂರು ಚಳ್ಳಮರದ, ಶಿವಕುಮಾರ ಕಾರಟಗಿ, ಹನುಮಂತಪ್ಪ ಹನುಮಸಾಗರ, ರಾಮಣ್ಣ ಕುಕನೂರು, ಮಹಾದೇವಪ್ಪ, ವಿರೂಪಣ್ಣ, ಚಂದ್ರಪ್ಪ, ಸುರೇಶ, ಮಲ್ಲಪ್ಪ ಹಡಪದ ಇತರರಿದ್ದರು.