

ಕಿನ್ನಿಗೋಳಿ: ಸಮಾಜಮುಖಿ ಚಿಂತನೆ ಮೂಲಕ ನಡೆದರೆ ಯಾವುದೇ ಸಂಘಟನೆ ಬಲಯುತವಾಗುತ್ತದೆ ಎಂದು ಸುರತ್ಕಲ್ ಕುಲಾಲ ಸಂಘದ ಅಧ್ಯಕ್ಷ ಗಂಗಾಧರ ಬಂಜನ್ ಹೇಳಿದರು.
ಎಸ್. ಕೋಡಿ ಕುಲಾಲ ಸಂಘದಲ್ಲಿ ತೋಕೂರು ಕುಲಾಲ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ಚೈತ್ರಾ, ರಜತ್ ಎಂ.ಬಂಗೇರ, ಪ್ರತೀಕ್ಷಾ ಆರ್.ಗುಜರನ್, ತನಿಷ್ಕ್ ಮೂಲ್ಯ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆಗೈದ ಸೃಜನ್ ಜಿ.ಮೂಲ್ಯ, ವಿಶಾನ್ ಎಲ್.ಕುಲಾಲ್, ಮಾಸನ ಅವರನ್ನು ಗೌರವಿಸಲಾಯಿತು. ಕರಾಟೆಯಲ್ಲಿ ರಾಜ್ಯಮಟ್ಟದಲ್ಲಿ ಸಾಧನೆಗೈದ ತನ್ಮಯಿ ಅವರನ್ನು ಗೌರವಿಸಲಾಯಿತು.
ಸಂಘದ ಅಧ್ಯಕ್ಷ ಶ್ರೀಧರ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಸುಂದರ ಸಾಲ್ಯಾನ್, ಚಂದು ಮೂಲ್ಯ, ಗೋಪಾಲ ಬಂಜನ್ ಕೊಡೆತ್ತೂರು, ಗೋಪಾಲ ಶಿಮಂತೂರು, ಶಿವಾನಂದ, ಆಶಾ ಗಿರಿಯಪ್ಪ, ಮಹಿಳಾ ವಿಭಾಗದ ಅಧ್ಯಕ್ಷೆ ದಿವ್ಯಾ ಶೇಖರ್ ಮತ್ತಿತರರು ಉಪಸ್ಥಿತರಿದ್ದರು. ಲಕ್ಷಣ್ ಬಿಬಿ ಕಾರ್ಯಕ್ರಮ ನಿರೂಪಿಸಿದರು.