

ಎನ್.ಆರ್.ಪುರ: ಯಾವುದೇ ಸಮುದಾಯದ ವೃತ್ತಿ, ಸಂಸ್ಕಾರ, ಸಂಸ್ಕೃತಿಯ ಉಳಿವಿಗೆ ಸಂಘಟನೆ ಅವಶ್ಯಕ ಎಂದು ನ್ಯಾಯಾವಾದಿ ಕೆ.ಪಿ.ಸುರೇಶ್ ಕುಮಾರ್ ಹೇಳಿದರು.
ತಾಲೂಕು ಭಾವಸಾರ ಕ್ಷತ್ರಿಯ ಸಮಾಜದ ಸರ್ವ ಸದಸ್ಯರ ಸಭೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಹಿಂದೆ ಸತ್ಯ, ಧರ್ಮ ಮುಖ್ಯವಾಗಿತ್ತು. ಪ್ರಸ್ತುತ ದಿನಗಳಲ್ಲಿ ಸಮುದಾಯದ ಉಳಿವಿಗೆ ಸಂಘಟನೆ ಅವಶ್ಯಕ. ಭಾವಸಾರ ಕ್ಷತ್ರಿಯ ಸಮಾಜದವರು ಮೂಲತಃ ಕ್ಷತ್ರಿಯ ಸಮುದಾಯಕ್ಕೆ ಸೇರಿದರು. ಧರ್ಮ ಮತ್ತು ರಾಷ್ಟ್ರದ ಉಳಿವಿಗೆ ಹೋರಾಟ ಮಾಡಿದವರು ಎಂದರು.
ಪಾಕಿಸ್ತಾನದ ಕಜಕಿಸ್ತಾನದಲ್ಲಿರುವ ಹಿಗುಲಾಂಬಿಕೆ ದೇವಿ ಈ ಸಮುದಾಯದ ಕುಲದೇವತೆಯಾಗಿದ್ದು, ಇತಿಹಾಸದ ಪ್ರಕಾರ ಪರಶುರಾಮ ವಿಷ್ಣುವಿನ ಅವತಾರ ತಾಳಿ ಕ್ಷತ್ರಿಯ ಸಮುದಾಯವನ್ನು ನಾಶ ಮಾಡಲು ಹೊರಟಾಗ ಕ್ಷತ್ರಿಯ ಸಮಾಜ ಗುಜರಾತ್‌ನಲ್ಲಿದ್ದ ಸರ ಸಿಂಹ ಮತ್ತು ಭಾವಸಿಂಹ ಹಿಗುಲಾಂಬಿಕೆ ದೇವಿಗೆ ಮೊರೆ ಹೋದಾಗ ದೇವಿ ಈ ಪಂಗಡದ ಸಮುದಾಯದ ರಕ್ಷಣೆಗೆ ಮಾಡಿದ್ದರು. ಇವರಿಂದ ಭಾವಸಾರ ಕ್ಷತ್ರಿಯ ಎಂಬ ಹೆಸರು ಸಮುದಾಯಕ್ಕೆ ಬಂದಿತು. ಮೂಲತಃ ಗುಜರಾತ್‌ನಲ್ಲಿದ್ದ ಈ ಸಮುದಾಯವರು ವಿದೇಶಿಯರ ದಾಳಿಯಿಂದ ತಮ್ಮ ಧರ್ಮ ಉಳಿಸಿಕೊಳ್ಳಲು ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಮತ್ತಿತರ ಪ್ರದೇಶಗಳಿಗೆ ವಲಸೆ ಬಂದರು ಎಂದು ತಿಳಿಸಿದರು.
ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ವೆಂಕಟೇಶ್ ದೋಯಿಜೋಡೆ ಮಾತನಾಡಿದ ಅವರು, ಸಂಘದ ಎಲ್ಲ ಪದಾಧಿಕಾರಿಗಳು ಮತ್ತು ಸದಸ್ಯರ ಸಹಕಾರದಿಂದ ಸಂಘಕ್ಕೆ ಸ್ವಂತ ನಿವೇಶನ ಖರೀದಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸಮುದಾಯ ಭವನ ಮತ್ತು ದೇವಸ್ಥಾನ ನಿರ್ಮಿಸಲಾಗುವುದು. ಎಲ್ಲರೂ ಹೆಚ್ಚಿನ ಸಹಕಾರ ನೀಡಬೇಕು ಎಂದರು.
ಗೋಪಾಲ್‌ರಾವ್ ಕಾಕಡೆ ಸ್ಮರಣಾರ್ಥ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಯಲ್ಲಿ ಹೆಚ್ಚು ಅಂಕಪಡೆದ ರೋಹನ್, ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಜಯಕಿಶನ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಕಾರ್ಯದರ್ಶಿ ಜಿ.ಆರ್.ಜ್ಞಾನೇಶ್, ಉಪಾಧ್ಯಕ್ಷ ಗೋಪಾಲರಾವ್, ಖಜಾಂಚಿ ಡಿ.ಜಿ.ಶ್ರೀನಿವಾಸ್, ಮಹಿಳಾ ಸಮಾಜದ ಅಧ್ಯಕ್ಷೆ ಮಮತಾ ನಾಗರಾಜ್, ರಶ್ಮಿ, ಹಿಂಗುಲಾಂಬಿಕಾ ಸಂಘದ ನಯನ, ಸರಸ್ಪತಿ, ಪ್ರಶಾಂತ್ ಇದ್ದರು.