ಸಾಧನೆಗೆ ಸಂಘಟನೆ ಮುಖ್ಯ

9srl1
ಶಿರಾಳಕೊಪ್ಪದಲ್ಲಿ ದೈವಜ್ಞ ಸಭಾಭವನವನ್ನು ಶಂಕರಬಾಬು ಉದ್ಘಾಟಿಸಿದರು. ಡಾ. ಶ್ರೀನಾಥ, ವಿಷ್ಣು ರಾಯ್ಕರ್, ರಾಘವೇಂದ್ರ, ರಾಜೇಶ್ ಇತರರಿದ್ದರು.
Published on

ಶಿರಾಳಕೊಪ್ಪ: ಇತರ ಸಮಾಜಗಳಂತೆಯೇ ದೈವಜ್ಞ ಸಮಾಜವೂ ಸಂಘಟಿತವಾಗಿ ಒಗ್ಗಟ್ಟಿನಿಂದ ಸೇವಾಕಾರ್ಯ ಮಾಡುವಂತಾಗಲು ಯುವಕರು ಮುಂದೆ ಬರಬೇಕು ಎಂದು ಮಕ್ಕಳ ತಜ್ಞ ಡಾ. ಶ್ರೀನಾಥ ತಿಳಿಸಿದರು.

ಪಟ್ಟಣದಲ್ಲಿ ಶನಿವಾರ ಏರ್ಪಡಿಸಿದ್ದ ದೈವಜ್ಞ ಸಮಾಜದ ಸಭಾಭವನ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ಸಾಮೂಹಿಕ ಸತ್ಯ ನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಏನಾದರೂ ಸಾಧಿಸಬೇಕು ಎಂದರೆ ಸಂಘಟನೆ ಮುಖ್ಯ. ನಾವೆಲ್ಲರೂ ಒಗ್ಗೂಡಿ ಸಮಾಜದ ಹಿತಕ್ಕಾಗಿ ಶ್ರಮಿಸೋಣ. ವಿವಿಧ ಶಿಬಿರಗಳನ್ನು ಆಯೋಜನೆ ಮಾಡೋಣ. ಇತರರಂತೆ ನಾವೂ ಸೇವಾಕಾರ್ಯದಲ್ಲಿ ತೊಡಗಿಸಿಕೊಳ್ಳೋಣ ಎಂದರು.
ಪ್ರಮುಖರಾದ ಜನ್ನು ಮಾಸ್ಟರ್ ಮಾತನಾಡಿ, ಕಳೆದ 17 ವಷರ್ಗಳಿಂದ ಸಮಾಜದ ಆಶ್ರಯದಲ್ಲಿ ಸತ್ಯನಾರಾಯಣ ಪೂಜೆ ನಡೆಸುತ್ತಿದ್ದೇವೆ. ಕೆಲವು ಸೇವಾಕಾರ್ಯ ಮಾಡುತ್ತಿದ್ದೆವು. ಆದರೆ ಕರೊನಾ ನಂತರ ಸೇವಾಕಾರ್ಯಗಳು ಕುಂಠಿತಗೊಂಡಿದ್ದವು. ಈಗ ಸಮಾಜದ ಎಲ್ಲರೂ ಸೇರಿ ಉತ್ತೇಜನ ಕೊಡುತ್ತಿರುವುದರಿಂದ ವಿವಿಧ ಕಾರ್ಯಕ್ರಮ ಮಾಡಲು ಸಹಕಾರಿ ಆಯಿತು ಎಂದು ಹೇಳಿದರು.
ಸಮಾಜದ ನಿವೃತ್ತ ಸರ್ಕಾರಿ ನೌಕರರು, ಅತಿಹೆಚ್ಚು ಅಂಕ ಪಡೆದ ಮಕ್ಕಳು, ವೈದ್ಯರಾದ ಡಾ. ಶ್ರೀನಾಥ, ಡಾ. ಗಣೇಶ್ ಅವರನ್ನು ಸನ್ಮಾನಿಸಲಾಯಿತು. ಸಮಾಜದ ಅಧ್ಯಕ್ಷ ಶಂಕರ್‌ಬಾಬು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ವಿಷ್ಣು ರಾಯ್ಕರ್, ಕಾರ್ಯದರ್ಶಿ ರಾಘವೇಂದ್ರ, ಖಜಾಂಚಿ ರಾಜೇಶ್, ಪ್ರಮುಖರಾದ ಪಾಂಡುರಂಗ ಜನ್ನು, ನಾಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net