ಸಮಾಜದ ಅಭಿವೃದ್ಧಿಗೆ ಸಂಘಟನೆ ಮುಖ್ಯ

Organization is important for the development of society.
ರಬಕವಿ ಗಟ್ಟಗಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಜಂಗಮ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜಿ. ಎಸ್. ಅಮ್ಮಣಗಿಮಠ ಮಾತನಾಡಿದರು. ದಯಾನಂದ ಬಾಗಲಕೋಟಮಠ, ದಯಾನಂದ ಹಿರೇಮಠ, ಶಿವಾನಂದ ಮಠದ ಇದ್ದಾರೆ.
Published on

ರಬಕವಿ/ಬನಹಟ್ಟಿ : ಕೆಲಸದ ಒತ್ತಡದಿಂದ ಸಮಾಜದ ಮುಖಂಡರು ಮತ್ತು ಯುವಕರು ಸಂಘಟಿತರಾಗುತ್ತಿಲ್ಲ. ಆದರೆ, ಸಮಾಜದ ಅಭಿವೃದ್ಧಿಗೆ ಸಂಘಟನೆ ಅಗತ್ಯವಾಗಿದೆ ಎಂದು ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹಾಗೂ ನ್ಯಾಯವಾದಿ ಜಿ. ಎಸ್. ಅಮ್ಮಣಗಿಮಠ ಹೇಳಿದರು.

ಗಟ್ಟಗಿ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಸಂಘದ ವಾರ್ಷಿಕ ಸರ್ವ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಸೌಲಭ್ಯಗಳನ್ನು ಪಡೆಯಲು ನಾವು ಹೋರಾಡುವ ಅವಶ್ಯಕತೆ ಇರುವುದರಿಂದ ಸಂಘಟನೆ ಅವಶ್ಯವಾಗಿದೆ. ಮುಂಬರುವ ದಿನಗಳಲ್ಲಿ ಸಮಾಜದ ಯಾರ ಮನೆಯಲ್ಲಾದರೂ ದುಃಖದ ಸಂಗತಿಗಳು ಘಟಿಸಿದರೆ ಅವರ ಕುಟುಂಬದ ನೆರವಿಗೆ ಎಲ್ಲರೂ ಧಾವಿಸಬೇಕು ಎಂದರು.

ಜಿ.ಎಂ. ಅಮ್ಮಣಗಿಮಠ ಮಾತನಾಡಿ, ಇದೇ ತಿಂಗಳಲ್ಲಿ ಜರುಗುವ ರೇಣುಕಾಚಾರ್ಯ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದರು.

ರಮೇಶ ಪೂಜಾರಿ ವಾರ್ಷಿಕ ವರದಿ ಓದಿದರು. ದಯಾನಂದ ಬಾಗಲಕೋಟಮಠ, ದಯಾನಂದ ಹಿರೇಮಠ, ಶಿವಾನಂದ ಮಠದ, ಮಹಾದೇವಯ್ಯ ನಂದಯ್ಯಗೋಳ, ಸಂಜಯ ಅಮ್ಮಣಗಿಮಠ, ವಿವೇಕ ಹಿರೇಮಠ, ನಿಂಗಯ್ಯ ಕರಡಿ, ಭೀಮು ಮಠದ, ಗಂಗಯ್ಯ ಹಿರೇಮಠ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net