

ಗುಂಡ್ಲುಪೇಟೆ : ಬ್ರಾಹ್ಮಣ ಸಮುದಾಯದ ಅಸ್ತಿತ್ವ ಉಳಿಸಿಕೊಳ್ಳಲು ಎಲ್ಲರೂ ಸಂಘಟಿತರಾಗಬೇಕಾದ ಅಗತ್ಯವಿದೆ ಎಂದು ಬ್ರಾಹ್ಮಣ ಮಹಾಸಭಾದ ತಾಲೂಕು ಅಧ್ಯಕ್ಷ ಕೆ.ವಿ.ಗೋಪಾಲಕೃಷ್ಣ ಹೇಳಿದರು.
ಪಟ್ಟಣದ ಕೋಟೆ ವಿಜಯ ನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಬ್ರಾಹ್ಮಣ ಸಂಘದ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬ್ರಾಹ್ಮಣ ಸಮುದಾಯದ ಬೆಳವಣಿಗೆಗೆ / ಸಂಘಟನೆಗೆ ಸ್ಪಂದಿಸುವ ಮೂಲಕ ಜನಾಂಗದ ಶ್ರಯೋಭಿವೃದ್ದಿಗೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತ ಬರುತ್ತಿದೆ. ಸಂಘಟನೆ ಇದ್ದರೇ ಮಾತ್ರ ನಮ್ಮ ಸಮುದಾಯಕ್ಕೆ ಬರಬೇಕಾದ ಸರ್ಕಾರಿ ಸವಲತ್ತುಗಳನ್ನು ಪಡೆಯಲು ಸಾಧ್ಯ ಪ್ರತಿಯೊಬ್ಬರು ಜಿಲ್ಲಾ ಸಂಘದ ಸದಸ್ಯತ್ವ ವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಜಿ.ಎಂ.ಹೆಗಡೆ, ತಾಲೂಕು ಸಂಘದ ಕಾರ್ಯನಿರ್ವಾಹಕಾಧಿಕಾರಿ ರಮೇಶ್, ಉಪಾಧ್ಯಕ್ಷ ರವಿಕಾಂತ್, ಮಂಜುನಾಥ್, ಪಿ.ಎಸ್.ಶ್ರೀನಿವಾಸಮೂರ್ತಿ, ಬಾಲಸುಬ್ರಹ್ಮಣ್ಯಂ, ನಾಗರಾಜಶರ್ಮನ್, ಎನ್.ರಾಜೇಶ್ ಭಟ್ಟ, ನಾಗೇಂದ್ರ, ಬಾಲು, ಉಮೇಶ್, ರಘು, ಶಂಕರನಾರಾಯಣ ಜೋಯಿಸ್ ಸೇರಿದಂತೆ ಹಲವರು ಹಾಜರಿದ್ದರು.