ಸುತ್ತೂರು: ರೈತರು/ರೈತ ಮಹಿಳೆಯರು ಹಾಗೂ ಯುವಕರಲ್ಲಿ ಸಾವಯವ ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಮಂತ್ರಾಲಯದ ಬೆಂಗಳೂರಿನ ಪ್ರಾದೇಶಿಕ ಸಾವಯವ ಮತ್ತು ನೈಸರ್ಗಿಕ ಕೇಂದ್ರದ ಸಹಯೋಗದೊಂದಿಗೆ ಸುತ್ತೂರಿನ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ನ.15 ರಿಂದ ಡಿ.5 ರವರೆಗೆ (21 ದಿನಗಳು) ಸಾವಯವ ವಸತಿಸಹಿತ ಕೃಷಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ತರಬೇತಿಯಲ್ಲಿ ರೈತರು, ರೈತ ಮಹಿಳೆಯರು, ರೈತ ಉತ್ಪಾದಕ ಸಂಘದ ಸದಸ್ಯರು ಹಾಗೂ ಯುವ ರೈತರು ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರನ್ನು ಅಥವಾ ಮೊ. 9380199128ಕ್ಕೆ ಸಂಪರ್ಕಿಸಲು ಕೋರಿದೆ.