ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ

oppo_0
oppo_0
Published on


ಗೊರೇಬಾಳ: ಇಂದಿನ ಆಹಾರ ಪದ್ಧತಿಯಿಂದ ಜನರಿಗೆ ರಕ್ತದೊತ್ತಡ, ಶುಗರ್, ಹೃದಯ ಸಮಸ್ಯೆ, ಕ್ಯಾನ್ಸರ್ ಕಾಯಿಲೆಗಳು ಬರುತ್ತಿದ್ದು, ಪ್ರತಿಯೊಬ್ಬರೂ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆಗೆ ಒಳಪಡುವುದು ಅಗತ್ಯವಾಗಿದೆ. ನಿರ್ಲಕ್ಷ್ಯ ವಹಿಸಿದರೆ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ ಎಂದು ಮಾಜಿ ಶಾಸಕ ವೆಂಕಟರಾವ ನಾಡಗೌಡ ಹೇಳಿದರು.

ಗೊರೇಬಾಳ ಕ್ಯಾಂಪಿನ ಗುರು ಮರುಳಸಿದ್ದೇಶ್ವರ ಮಠದಲ್ಲಿ ಆಯೋಜಿಸಿದ್ದ ಮೊಣಕಾಲು ಮಂಡಿ ಚಿಪ್ಪು ಮತ್ತು ಚಪ್ಪೆ ಆರೋಗ್ಯ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಭಾನುವಾರ ಮಾತನಾಡಿದರು. ವ್ಯವಸಾಯದಲ್ಲಿ ರಾಸಾಯನಿಕ ಬಳಕೆ ಹೆಚ್ಚಾಗಿದ್ದು, ಇದರಿಂದ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತಿದೆ. ರೈತರು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಲ್ಲಿ ರೋಗಗಳು ಹತೋಟಿಗೆ ಬರಬಹುದು ಎಂದರು.

ಡಾ.ಸಂಜೀವ ಎಂ.ಮುದ್ರಿ ಮಾತನಾಡಿ, ಜನರ ಸೇವೆ ಉದ್ದೇಶ ಹಾಗೂ ಮರುಳಸಿದ್ದೇಶ್ವರ ಮಠದ ಸಿದ್ದಯ್ಯ ತಾತ ವರ ಆಶಯದಂತೆ ಆರೋಗ್ಯ ಶಿಬಿರ ಆಯೋಜಿಸಲಾಗಿದೆ ಎಂದರು. ಮರುಳಸಿದ್ದೇಶ್ವರ ಮಠದ ಸಿದ್ದಯ್ಯ ತಾತ, ಗೊರೇಬಾಳ ಕ್ಯಾಂಪಿನ ಡಾ.ಕೆ.ವಿ.ಹೂಗಾರ, ಕಾರಟಗಿ ತಲೆಖಾನ್ ಮಠದ ವೀರಭದ್ರಯ್ಯ ಸ್ವಾಮೀಜಿ, ಡಾ.ಕೊಟ್ರೇಶ ಇದ್ದರು. ಪ್ರಮುಖರಾದ ಎಂ.ರಂಗನಗೌಡ, ಮಳಿಗಿ ಶೇಖರಗೌಡ, ಎಂ.ಪಾಲಾಕ್ಷಯ್ಯ ಸ್ವಾಮಿ ಗೊರೇಬಾಳ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net