ಡಿ.9ರಿಂದ ಸಿರಿಧಾನ್ಯ, ಸಾವಯವ ಕೃಷಿ ಮೇಳ: ಆರ್ಟ್ ಆಫ್​​ ಲಿವಿಂಗ್ ಕೇಂದ್ರದಲ್ಲಿ ಆಯೋಜನೆ

millets
Published on

ಬೆಂಗಳೂರು: ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷದ ಹಿನ್ನೆಲೆಯಲ್ಲಿ ಆರ್ಟ್ ಆಫ್​ ಲಿವಿಂಗ್ ಸಂಸ್ಥೆಯ ವತಿಯಿಂದ ಈ ತಿಂಗಳ 9ರಿಂದ 11ರ ವರೆಗೆ ಮೂರು ದಿನ ಜಾಗತಿಕ ಮಟ್ಟದ ‘ಸಿರಿಧಾನ್ಯ, ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿ ಆಧಾರಿತ ಕೃಷಿ ಮೇಳ ಹಾಗೂ ವಿಚಾರ ಸಂಕಿರಣ’ವನ್ನು ಆಯೋಜಿಸಲಾಗಿದೆ.

ಬೆಂಗಳೂರು ಕೃಷಿ ವಿವಿ ಹಾಗೂ ಆರ್ಟ್ ಆಫ್​ ಲಿವಿಂಗ್ ಸಂಸ್ಥೆ ತನ್ನ ಆವರಣದಲ್ಲಿ ಸಂಘಟಿಸಿರುವ ಈ ಕೃಷಿ ಮೇಳದಲ್ಲಿ ವಿವಿಧ ದೇಶಗಳ ಕೃಷಿ ವಿಜ್ಞಾನಿಗಳು ಸಾವಯವ ಪರಿಣಿತರು, ಸಂಶೋಧನಾ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ವಿಚಾರ ಸಂಕಿರಣದಲ್ಲಿ ಪ್ರಮುಖ ವಿಜ್ಞಾನಿಗಳು ಸಾವಯವ ಹಾಗೂ ಸಿರಿಧಾನ್ಯಗಳ ಕುರಿತಾದ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಇದಲ್ಲದೆ ಬಿಸಿನೆಸ್ ಟು ಬಿಸಿನೆಸ್ (ಬಿ2ಬಿ) ಹಾಗೂ ಬಿಸಿನೆಸ್ ಟು ಕನ್ಸೂಮರ್ಸ್ (ಬಿ2ಸಿ) ಮಧ್ಯೆ ಒಡಂಬಡಿಕೆಗೂ ಅವಕಾಶ ಇರುತ್ತದೆ. ರೈತರ ಉತ್ಪಾದಕರ ಕಂಪನಿಗಳು (ಎಫ್​ಪಿಒ) ಹಾಗೂ ಆಹಾರ ಸಂಸ್ಕರಣೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳು ಕೂಡ ತಮ್ಮ ಹೊಸ ಉತ್ಪನ್ನಗಳನ್ನು ಪ್ರದರ್ಶಿಸಲಿವೆ.

ಕರ್ನಾಟಕ ಸಹಿತ ದೇಶದ ಪ್ರಮುಖ ರಾಜ್ಯಗಳಿಂದ ಸಿರಿಧಾನ್ಯ ಬೆಳೆಯುವ ರೈತರು ಹಾಗೂ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಇದಲ್ಲದೆ ಕೃಷಿ ಉತ್ಪನ್ನಗಳ ರ್ತು ಹಾಗೂ ದೇಸಿ ಮಾರಾಟ ಕಂಪನಿಗಳು ತಮ್ಮ ಪದಾರ್ಥಗಳನ್ನು ಸಾರ್ವಜನಿಕರಿಗೆ ಮುಟ್ಟಿಸಲು ಪ್ರದರ್ಶಿನಿ ಕೂಡ ಏರ್ಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net