ನಂತೂರು ಸಾವಯವ ಕೃಷಿ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟನೆ

mng--26 Nov savayava
Published on

ಮಂಗಳೂರು: ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ಇವರ ಆಶ್ರಯದಲ್ಲಿ ವಿಜಯ ಗ್ರಾಮೀಣ ಅಭಿವೃದ್ದಿ ಪ್ರತಿಷ್ಟಾನ ಮತ್ತು ಭಾರತಿ ಶಿಕ್ಷಣ ಸಂಸ್ಥೆಗಳು ಇವರ ಸಹಯೋಗದೊಂದಿಗೆ ಸಾವಯವ ಕೃಷಿ ಬಗ್ಗೆ ಒಂದು ಪ್ರಮಾಣೀಕೃತ ಸರಣಿ ತರಬೇತಿ (ಸರ್ಟಿಫಿಕೇಟ್ ಕೋರ್ಸ್) ಶ್ರೀ ಭಾರತಿ ವಿದ್ಯಾಸಂಸ್ಥೆ ಆವರಣದಲ್ಲಿ ಭಾನುವಾರ ಉದ್ಘಾಟನೆಗೊಂಡಿತು.


ಪ್ರಗತಿ ಪರ ಸಾವಯವ ಕೃಷಿಕೆ, ಸಾಧಕಿ ಅನಿತಾ ಬೆಟ್ಟಂಪಾಡಿ ಉದ್ಘಾಟಿಸಿ, ಪ್ರಸ್ತುತ ವಾತಾವರಣದಲ್ಲಿ ವಿಷ ಮುಕ್ತ ಆಹಾರ ಸೇವನೆಯ ಅನಿವಾರ್ಯತೆ ನಿಟ್ಟಿನಲ್ಲಿ ಸಾವಯವ ಬಳಗ ಕೈಗೊಳ್ಳುತ್ತಿರುವ ಚಟುವಟಿಕೆಗಳ ಬಗ್ಗೆ ಶ್ಲಾಘಿಸಿದರು.


ಈ ಸಂದರ್ಭ ಬಳಗ ಪ್ರಕಟಿಸಿದ್ದ ಬಳಗದ ಸದಸ್ಯೆ ಸರೋಜಾ ಪ್ರಕಾಶ್ ಅವರ ಲೇಖನ ‘ನಮ್ಮ ಕೈತೋಟ ನಮ್ಮ ಹೆಮ್ಮೆ’ ಎಂಬ ಮಾಹಿತಿ ಕೈಪಿಡಿಯನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಚಾರಿ ವಿಭಾಗ ಎಸಿಪಿ ಗೀತಾ ಕುಲಕರ್ಣಿ ಬಿಡುಗಡೆ ಮಾಡಿದರು. ಸಾವಯವ, ಕಲಬೆರಕೆ ರಹಿತ ಆಹಾರ ಸೇವನೆಯ ಅವಶ್ಯವಾಗಿದೆ. ಸಂಚಾರಿ ನಿಯಮ ಪಾಲನೆ ನಮ್ಮ ಸಂಚಾರ ಸುರಕ್ಷತೆಗೆ ಹೇಗೆ ಅಗತ್ಯವೋ ಅದೇ ರೀತಿ ನಮ್ಮ ಶಿಸ್ತು ಬದ್ದ ಜೀವನ ಶೈಲಿಯು ನಮ್ಮ ಆರೋಗ್ಯ ಪೂರ್ಣ ಜೀವನ ನಿರ್ವಹಣೆಗೆ ಪ್ರಾಮುಖ್ಯ ಎಂದರು.


ವಿಜಯ ಗ್ರಾಮೀಣ ಅಭಿವೃದ್ದಿ ಪ್ರತಿಷ್ಠಾನದ ಕಾರ್ಯದರ್ಶಿ ರಾಜೇಂದ್ರ ರೈ ತಮ್ಮ ಸಂಸ್ಥೆಯ ಕೃಷಿ ಪೂರಕ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಸಾವಯವ ಬಳಗದ ಕಾರ್ಯಕ್ರಮವನ್ನು ಪ್ರಶಂಸಿಸಿ ಈ ಸರಣಿ ಪ್ರಮಾಣೀಕೃತ ತರಬೇತಿ ಪಡೆದ ವ್ಯಕ್ತಿಗಳನ್ನು ತಮ್ಮ ಸಂಸ್ಥೆಯಲ್ಲಿ ಕೃಷಿಕರ ತರಬೇತಿದಾರರಾಗಿ ನಿಯುಕ್ತಿ ಮಾಡುವಲ್ಲಿ ಯೋಜನೆ ಹಾಕಲಾಗುವುದು ಎಂದರು.


ಇನ್ನೋರ್ವ ಅತಿಥಿ ಸುಮಾ ರಮೇಶ್ ರವರು ಭಾರತಿ ವಿದ್ಯಾ ಸಂಸ್ಥೆ ಇಂತಹ ಸಮಾಜ ಮುಖಿ ಕಾರ್ಯಕ್ರಮ ಕೆ ತಮ್ಮ ಸಹಯೋಗ ಸಹಕಾರ ನೀಡುವುದಾಗಿ ಹೇಳಿದರು.


ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ಇದರ ಅಧ್ಯಕ್ಷ ಜಿ.ಆರ್. ಪ್ರಸಾದ್ ಸ್ವಾಗತಿಸಿದರು. ಕಾರ್ಯದರ್ಶಿ ರತ್ನಾಕರ್ ಕುಳಾಯಿ ಪ್ರಸ್ತಾವಿಸಿದರು. ವಿಜಯ ಗ್ರಾಮೀಣ ಅಭಿವೃದ್ದಿ ಪ್ರತಿಷ್ಠಾನದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಚಿನ್ ಹೆಗ್ಡೆ ವಂದಿಸಿದರು. ಬಳಗದ ಸದಸ್ಯೆ ಮಾಯ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net