ಅಂಗಾಂಗ ದಾನ ಶ್ರೇಷ್ಠ ದಾನ

13 ckm 3
ಚಿಕ್ಕಮಗಳೂರಿನ ವೈದ್ಯಕೀಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿಶ್ವ ಅಂಗಾAಗ ದಾನ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಎಚ್.ಡಿ.ತಮ್ಮಯ್ಯ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ರೂಬಿನ್ ಮೊಸೆಸ್, ಡಾ.ಹರೀಶ್, ಡಾ.ಸಿ.ಮೋಹನ್‌ಕುಮಾರ್, ಡಾ. ಡಿ.ಎಲ್.ವಿಜಯಕುಮಾರ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ರಕ್ತದಾನ, ವಿದ್ಯಾದಾನ, ನೇತ್ರದಾನ, ಅನ್ನದಾನ ಇವುಗಳಿಗೆ ಹಿಂದೆ ಮಹತ್ವ ಇತ್ತು. ಈಗ ಅಂಗಾಂಗ ದಾನ ಶ್ರೇಷ್ಠವಾಗಿದೆ ಎಂದು ಶಾಸಕ ಎಚ್.ಡಿ ತಮ್ಮಯ್ಯ ಅಭಿಪ್ರಾಯಪಟ್ಟರು.

ನಗರದ ತೇಗೂರು ಸಮೀಪದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸಹನಾ ಜೆ.ರೂಬಿನ್ ಸಮಾಜ ಸೇವಾ ಟ್ರಸ್ಟ್, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಅಂಗಾAಗ ದಾನ ದಿನಾಚರಣೆ-೨೦೨೪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಟ್ರಸ್ಟ್ನ ಲಾಂಛನ ಬಿಡುಗಡೆ ಮಾಡಿ ಮಾತನಾಡಿದರು.
ಮತ್ತೊಬ್ಬರ ಬಾಳಲ್ಲಿ ಬೆಳಕು ಕಾಣಬೇಕೆಂಬ ದೃಷ್ಟಿಯಿಂದ ನೇತ್ರದಾನವನ್ನು ಪ್ರಾರಂಭ ಮಾಡಲಾಯಿತು. ಸಮಾಜದಲ್ಲಿ ಈಗ ಮೌಢ್ಯತೆಯಿಂದ ಜನರು ಹೊರಬಂದು ಮೃತದೇಹ ಮಣ್ಣು ಅಥವಾ ಬೆಂಕಿಗೆ ಆಹುತಿ ಆಗುತ್ತದೆ ಎಂಬುದನ್ನು ಅರಿತು ಪ್ರತಿಯೊಬ್ಬರೂ ಅಂಗಾAಗ ದಾನಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಅಂಗಾAಗ ಕಸಿ ಮಾಡಿ, ಬೆಂಗಳೂರಿಗೆ ಕಳುಹಿಸಿಕೊಟ್ಟ ಸರ್ಕಾರಿ ಜಿಲ್ಲಾಸ್ಪತ್ರೆ ನಮ್ಮದು ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಮೃತ ಸಹನಾ ಸಹನೆ ತುಂಬಿದ ಮಹಿಳೆಯಾಗಿ ಕೋವಿಡ್ ಸಂದರ್ಭದಲ್ಲಿ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಸಮಾಜದಲ್ಲಿ ಜನಸೇವೆ ಮಾಡಿದ ಇವರಿಗೆ ಭಗವಂತ ಆಯಸ್ಸು ನೀಡಲಿಲ್ಲ ಎಂದು ವಿಷಾಧಿಸಿದರು.
ಇಂತಹ ಸಮಾಜ ಸೇವಕಿಯ ಹೆಸರಿನಲ್ಲಿ ಟ್ರಸ್ಟ್ ಒಂದನ್ನು ರಚಿಸಿ ಕುಟುಂಬಸ್ತರು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸ್ಪಂದಿಸುತ್ತಿರುವುದು ಶ್ಲಾಘನೀಯ. ಇಂದು ನಾವು ಬದುಕಿz್ದೆÃವೆ, ನಿಧನರಾದ ಬಳಿಕ ನಮ್ಮ ದೇಹದ ಅಂಗಾAಗ ದಾನದಿಂದ ನಾಲ್ಕು ಜನರ ಬದುಕಿಗೆ ಉಪಯೋಗವಾದರೆ ಅದಕ್ಕಿಂತ ಶ್ರೇಷ್ಠವಾದುದು ಇನ್ನಾವುದೂ ಇಲ್ಲ ಎಂದು ತಿಳಿಸಿದರು.
ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳು ಮುಂದೆ ವೈದ್ಯರಾದ ಬಳಿಕ ಅಂಗಾAಗ ದಾನ ಮಾಡುವಂತೆ ನಾಗರಿಕರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.
ವೈದ್ಯಕೀಯ ಕಾಲೇಜಿಗೆ ಅಗತ್ಯವಾಗಿ ಬೇಕಾಗಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರದೊಂದಿಗೆ ಚರ್ಚಿಸಿ ಇವುಗಳನ್ನು ಈಡೇರಿಸಲು ಬದ್ಧವಾಗಿರುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹನಾ ಜೆ.ರೂಬಿನ್ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ರೂಬಿನ್ ಮೊಸಸ್ ವಹಿಸಿದ್ದರು. ತೇಗೂರಿನ ಬಿವೈವಿ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ. ಹರೀಶ್, ಜಿಲ್ಲಾ ಸರ್ಜನ್ ಮತ್ತು ವೈದ್ಯಕೀಯ ಅಧೀಕ್ಷಕ ಡಾ. ಸಿ.ಮೋಹನ್ ಕುಮಾರ್, ಕೆಪಿಎಂಇಎ ಅಧ್ಯಕ್ಷ ಡಾ. ಡಿ.ಎಲ್ ವಿಜಯ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net