ಅಂಗಾಂಗ ದಾನ ಸಾರ್ಥಕ ಕಾರ್ಯ…!

Organ donation is a worthy cause...!
ವಿಜಯಪುರದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಕಿಡ್ನಿ ದಿನಾಚರಣೆ ಅಂಗವಾಗಿ ವಿಶೇಷ ಸಂವಾದ ಕಾರ್ಯಕ್ರಮ ನಡೆಯಿತು. ಡಾ. ನವೀನ ಪಟ್ಟಣಶೆಟ್ಟಿ, ಡಾ. ರಾಕೇಶ ಪಾಟೀಲ ಮತ್ತಿತರರಿದ್ದಾರೆ.
Published on

ವಿಜಯಪುರ: ಸತ್ತಂತೆ ಬದುಕುವುದಕ್ಕಿಂತ ಸತ್ತ ಮೇಲೇ ಬದುಕುವುದು ನಿಜವಾದ ಬದುಕಾಗಿದ್ದು, ಆ ಕಾರ್ಯವಾಗಬೇಕಾದರೇ ನಾವೆಲ್ಲರೂ ಅಂಗಾಂಗ ದಾನ ಮಾಡುವ ಮೂಲಕ ಸತ್ತ ಮೇಲೆ ಮಣ್ಣಾಗುವ ಶರೀರದಲ್ಲಿನ ಸಾಯುವ ಅಂಚಿನಲ್ಲಿರುವ ಜೀವಗಳಿಗೆ ಬದುಕು ನೀಡಬಹುದಾಗಿದೆ ಎಂದು ಮೂತ್ರಪಿಂಡಗಳ ಕಸಿ ತಜ್ಞ ಡಾ. ನವೀನ ಪಟ್ಟಣಶೆಟ್ಟಿ ಹೇಳಿದರು.

ನಗರದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಗುರುವಾರ ನಡೆದ ವಿಶ್ವ ಕಿಡ್ನಿ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಹುಟ್ಟಿದ ಪ್ರತಿಯೊಬ್ಬ ಮನುಷ್ಯ ಸಾಯಲೇ ಬೇಕು ಎನ್ನುವುದು ನಿಸರ್ಗದ ನಿಯಮವಾಗಿದೆ. ಆದರೆ ಸತ್ತ ಮೇಲೆ ಮತ್ತೊಮ್ಮೆ ಬದುಕಿ ಉಳಿಯಬೇಕಾದರೆ ಅದಕ್ಕಿರುವ ಏಕೈಕ ಮಾರ್ಗವೆಂದರೆ ಅದು ಅಂಗಾಂಗ ದಾನ.

ಕೆಲವು ಸಂದರ್ಭಗಳಲ್ಲಿ ಸಂಭವಿಸುವ ಮೃತ್ಯುವಿನಿಂದ ವ್ಯಕ್ತಿಯು ನಮ್ಮನ್ನು ಅಗಲಿ ಹೋಗುತ್ತಾರೆ. ಆದರೆ ಅವರಿಗೆ ತಮ್ಮ ದೇಹದ ಭಾಗಗಳಿಂದ ಇನ್ನೊಬ್ಬರ ಜೀವವನ್ನು ಉಳಿಸಬಹುದು ಎನ್ನುವುದರ ಕುರಿತು ಮನದಟ್ಟು ಮಾಡಿಕೊಟ್ಟರೆ ಸಾವುಗಳು ಕೂಡ ಸಾರ್ಥಕತೆ ಪಡೆದುಕೊಳ್ಳುತ್ತವೆ ಎಂದರು.

ಮೂತ್ರ ಪಿಂಡಗಳ ವೈಫಲ್ಯದಿಂದ ಸಾವನ್ನಪ್ಪುವುದನ್ನು ತಡೆಯುವುದಕ್ಕೆ ಎರಡು ಮಾರ್ಗಗಳಿದ್ದು, ಒಂದು ಹತ್ತಿರದ ರಕ್ತ ಸಂಬಂಧಿಗಳು ಸ್ವಯಂಪ್ರೇರಿತವಾಗಿ ತಮ್ಮ ಮನೆಯಲ್ಲಿ ಕಿಡ್ನಿ ವೈಫಲ್ಯದಿಂದ ಬಳಲುವ ವ್ಯಕ್ತಿಗೆ ಕಿಡ್ನಿ ದಾನ ಮಾಡಬಹುದು. ಇನ್ನೊಂದು ಸರ್ಕಾರ ನಿಯಮಿಸಿದ ಕೇಂದ್ರದಡಿಯಲ್ಲಿ ಅಪಘಾತ ಹಾಗೂ ಅಸಹಜ ಸಾವುಗಳಿಂದ ಮೃತ ವ್ಯಕ್ತಿಯ ಆಸೆಯಂತೆ ಅಥವಾ ಅವರ ಸಂಬಂಧಿಕರ ಒಪ್ಪಿಗೆಯಂತೆ ಸಿಗುವ ಕಿಡ್ನಿಗಳಿಂದ ಕಿಡ್ನಿ ವೈಫಲ್ಯಕ್ಕೊಳಗಾದ ರೋಗಿಗಳ ಬದುಕನ್ನು ಬದಲಿಸಬಹುದು ಎಂದರು.

ಜೆಎಸ್‌ಎಸ್ ಆಸ್ಪತ್ರೆಯ ಕಿಡ್ನಿ ಕಸಿ ತಜ್ಞ ಡಾ. ರಾಕೇಶ ಪಾಟೀಲ ಮಾತನಾಡಿ, ಮೊದಲು ಕಿಡ್ನಿ ಕಸಿ ಮಾಡಿಸಿಕೊಳ್ಳುವುದು ಎಂದರೆ ಬೇರೆ ಬೇರೆ ನಗರಗಳಿಗೆ ತೆರಳಿ ದುಬಾರಿ ಹಣ ಭರಿಸಬೇಕಾಗಿತ್ತು. ಆದರೆ, ಇಂದು ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ಟ್ರಾನ್ಸಪ್ಲಾಂಟ್ ಮಾಡಲಾಗುತ್ತಿದೆ.

ಗಾಗಲೇ ಎರಡು ಯಶಸ್ವಿ ಟ್ರಾನ್ಸ್‌ಪ್ಲಾಂಟ ಮಾಡಲಾಗಿದೆ ಎಂದರು.

ಕಾರ್ಯಕ್ರಮವಲ್ಲಿ ನೂರಾರು ಡಯಾಲಿಸಿಸ್ ರೋಗಿಗಳು ಪಾಲ್ಗೊಂಡು ತಮ್ಮ ಅನುಭವವನ್ನು ಹಂಚಿಕೊಂಡರು. ಎರಡು ಯಶಸ್ವಿ ಕಿಡ್ನಿ ಟ್ರಾನ್ಸಪ್ಲಾಂಟ್‌ನಲ್ಲಿ ಭಾಗವಹಿಸಿದ ಸಿಬ್ಬಂದಿಗೆ ಸತ್ಕರಿಸಲಾಯಿತು. ಆಸ್ಪತ್ರೆಯ ವೈದ್ಯರು, ಸಿಬ್ಬಂದಿವರ್ಗ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net