ಅಂಗಾಂಗ ದಾನ 8 ರೋಗಿಗಳಿಗೆ ಜೀವದಾನ

12 Dwd 7
Published on

ಧಾರವಾಡ: ಅಂಗಾಂಗಗಳನ್ನು ದಾನ ಮಾಡುವ ಮೂಲಕ ಹಲವು ಅರ್ಹ ರೋಗಿಗಳಿಗೆ ಜೀವ ತುಂಬಬಹುದು. ಅಂಗಾಂಗಗಳನ್ನು ದಾನ ಮಾಡುವ ಮಾನವೀಯತೆ ಮತ್ತು ಸಹಾನುಭೂತಿ ಸಮಾಜದಲ್ಲಿ ಇನ್ನೂ ಜೀವಂತವಾಗಿದೆ ಎಂದು ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ನಿರಂಜನ್ ಕುಮಾರ ಹೇಳಿದರು.
ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ‘ಭಾರತದ ಅಂಗಾಂಗ ದಾನ ದಿನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಸುಮನಾ ಕೆ.ಆರ್. ಮಾತನಾಡಿ, ಕುಟುಂಬದ ಬೆಂಬಲದೊಂದಿಗೆ ಒಬ್ಬ ವ್ಯಕ್ತಿಯ ಅಂಗಾಂಗಳು 7ರಿಂದ 8 ಜೀವಗಳನ್ನು ಉಳಿಸಬಹುದು. ವೈದ್ಯರು ಶ್ರದ್ಧೆ, ನಿಷ್ಠೆ ಹಾಗೂ ಕರ್ತವ್ಯ ಪ್ರಜ್ಞೆಯಿಂದ ಅಂಗಾಂಗ ಕಸಿ ಮಾಡಬೇಕು. ಭಾರತಕ್ಕೆ ಹೆಚ್ಚಿನ ಅಂಗಾಂಗ ದಾನಿಗಳ ಅವಶ್ಯಕತೆ ಇದೆ ಎಂದು ಪ್ರಧಾನಮಂತ್ರಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೇಳಿರುವುದನ್ನು ಸ್ಮರಿಸಿದರು.
ಕಾರ್ಯನಿರ್ವಾಹಕ ನಿರ್ದೇಶಕಿ ಪದ್ಮಲತಾ ನಿರಂಜನ್, ಸಹ ಉಪ ಕುಲಪತಿ ಡಾ. ಎಸ್.ಕೆ. ಜೋಶಿ, ಹಣಕಾಸು ಅಧಿಕಾರಿ ವಿ.ಜಿ. ಪ್ರಭು, ಆಡಳಿತ ನಿರ್ದೇಶಕ ಸಾಕೇತ ಶೆಟ್ಟಿ, ಇತರರಿದ್ದರು.
ಅಂಗಾಂಗಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದು ಸಮಾಜಕ್ಕೆ ನೀಡಿದ ಕೊಡುಗೆಯ ಸ್ಮರಣಾರ್ಥ 13 ದಾನಿಗಳ ಭಾವಚಿತ್ರವನ್ನು ಅನಾವರಣಗೊಳಿಸಿ ಅವರ ಸವಿನೆನಪಿಗಾಗಿ ಸಸಿಗಳನ್ನು ನೆಡಲಾಯಿತು.
ಉಪ ವೈದ್ಯಕೀಯ ಅಧೀಕ್ಷಕ ಡಾ. ಮಖ್ದೂಮ ಕಿಲ್ಲೇದಾರ ಸ್ವಾಗತಿಸಿದರು. ಡಾ. ಮಂಜುನಾಥ ಶೇಪುರ್ ಪರಿಚಯಿಸಿದರು. ಡಾ. ಶಿಲ್ಪಾ ಹಕ್ಕಿ ನಿರೂಪಿಸಿದರು. ಡಾ. ಮಂಜುನಾಥ ಆರ್. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net