ಆದೇಶ ಉಲ್ಲಂಘಿಸಿ ಸಂತೆ ಮಾಡಿದ ಜನ

Market
Published on

ಪಾಲಬಾವಿ: ಕರೊನಾ ವೈರಸ್ ಭೀತಿಯಿಂದ ಭಾರತ ಸರ್ಕಾರ ದೇಶಾದ್ಯಂತ ಲಾಕ್‌ಡೌನ್ ಆದೇಶ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಪಾಲಬಾವಿಯಲ್ಲಿಯೂ ಸೋಮವಾರದ ಸಂತೆಯನ್ನು ರದ್ದುಪಡಿಸಲಾಗಿತ್ತು. ಆದರೂ ವ್ಯಾಪಾರಸ್ಥರು, ಗ್ರಾಹಕರು ಸಂತೆಯಲ್ಲಿ ಪಾಲ್ಗೊಂಡು ಸರ್ಕಾರದ ಆದೇಶ ಉಲ್ಲಂಘಿಸಿರುವ ಘಟನೆ ಸೋಮವಾರ ಜರುಗಿದೆ.

ಪಿಡಿಒ ಎಸ್.ಬಿ. ನಂದಗಾವ, ಕಾರ್ಯದರ್ಶಿ ವಿಠ್ಠಲ ಕಲಾಲ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಸ್ಥಳಕ್ಕಾಗಮಿಸಿ ಸಂತೆಯನ್ನು ಬಂದ್ ಮಾಡಿಸಿದರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕಾದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಹಾಗೂ ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷೃದಿಂದ ಸಂತೆ ಜರುಗಿದೆ. ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಗ್ರಾಮಸ್ಥ ಹುಲಿಯಪ್ಪ ತೇಗೂರ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net