ಗೂಡ್‌ಶೆಡ್ ಸ್ಥಳಾಂತರಕ್ಕೆ ಆದೇಶ- ಬಾಬುರಾವ್

BABU RAO
BABU RAO
Published on

ರಾಯಚೂರು ನಗರದ ಕೇಂದ್ರ ರೈಲ್ವೆ ನಿಲ್ದಾಣದಲ್ಲಿರುವ ಗುಡ್ ಶೆಡ್ ಸ್ಥಳಾಂತರಕ್ಕೆ ಬಹುದಿನ ಬೇಡಿಕೆ ಈಡೇರಿದ್ದು, ದಕ್ಷಿಣ ಮಧ್ಯೆ ರೈಲ್ವೆ ವಿಭಾಗದಿಂದ ಸ್ಥಳಾಂತರ ಗೊಳಿಸಲು ಆದೇಶ ಹೊರಡಿಸಿದೆಂದು ರೈಲ್ವೆ ಬೋರ್ಡ್ ಮಾಜಿ ಸದಸ್ಯ ಬಾಬುರಾವ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 15 ವರ್ಷಗಳಿಂದ ಗೂಡ್‌ಶೆಟ್ ಯರಮರಸ್‌ಗೆ ಸ್ಥಳಾಂತರಿಸಲು ನಾನು ಸೇರಿ ಅನೇಕ ಸಂಘಟನೆಗಳು ಬೇಡಿಕೆ ಸಲ್ಲಿಸಲಾಗಿತ್ತು. ಹಿಂದಿನ ಸಂಸದ ರಾಜಾ ಅಮರೇಶ್ವರ ನಾಯಕ ಅನೇಕ ಬಾರಿ ಪತ್ರ ಬರೆದು ಆಗ್ರಹಿಸಿದ್ದರು. ಕೊನೆಗೂ ಸ್ಥಳಾಂತರಕ್ಕೆ ಆದೇಶೀಸಲಾಗಿದೆ.

ಸಿಕಿಂದರ್‌ಬಾದ್‌ಗೆ 32 ಬಾರಿ ಭೇಟಿ ನೀಡಿ ಒತ್ತಾಯಿಸಿದ ಪರಿಣಾಮ ಸ್ಥಳಾಂತರವಾಗಿದೆ ಎಂದರು. ಅಲ್ಲದೇ ರೈಲು ನಿರ್ಮಾಣಕ್ಕೆ ಅನುದಾನ ದೊರೆತಿದ್ದು ಒಂದು ಕೀ.ಮಿ ರೈಲು ನಿಲ್ದಾಣ ವಿಸ್ತರಣೆಗೆ ಮನವಿ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಬಸವರಾಜ ನಾಯಕ ಅಸ್ಕಿಹಾಳ, ಸಿದ್ರಾಮ, ಈರಣ್ಣಗೌಡ , ತಾಯಪ್ಪ ಫಿರಂಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net