ಶಿಕ್ಷಕಿಯಾಗಿ ಆಯ್ಕೆಯಾದ ಮಂಗಳಮುಖಿಗೆ ಆದೇಶ

27-11-Shiva-1
ರಾಯಚೂರಿನ ಡಿಡಿಪಿಐ ಕಚೇರಿಯಲ್ಲಿ ಶಿಕ್ಷಕಿಯಾಗಿ ನೇಮಕಗೊಂಡ ಮಂಗಳಮುಖಿ ಪೂಜಾಗೆ ಶುಕ್ರವಾರ ಕಚೇರಿ ವ್ಯವಸ್ಥಾಪಕ ಶಿವರಾಜ ನೇಮಕಾತಿ ಆದೇಶ ವಿತರಿಸಿದರು. ನೋಡಲ್ ಅಕಾರಿ ಮಹ್ಮದ್ ಮಕ್ಬೂಲ್ ಇದ್ದರು.
Published on

ರಾಯಚೂರು: ರಾಜ್ಯದಲ್ಲಿ ಪ್ರಥಮ ಬಾರಿಗೆ ಶಿಕ್ಷಕಿಯಾಗಿ ಆಯ್ಕೆಯಾದ ಮಂಗಳಮುಖಿ ಪೂಜಾಗೆ ಸ್ಥಳೀಯ ಡಿಡಿಪಿಐ ಕಚೇರಿಯಲ್ಲಿ ಶುಕ್ರವಾರ ನೇಮಕಾತಿ ಆದೇಶ ಪತ್ರವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ ವ್ಯವಸ್ಥಾಪಕ ಶಿವರಾಜ ವಿತರಿಸಿದರು.
ಮೂಲತಃ ಮಾನ್ವಿ ತಾಲೂಕಿನ ನೀರಮಾನ್ವಿ ಗ್ರಾಮದ ಅಶ್ವತ್ಥಾಮ ಲಿಂಗತ್ವ ಬದಲಿಸಿಕೊಂಡು ಪೂಜಾ ಹೆಸರಿಗೆ ಬದಲಾಗಿದ್ದ. ಶಿಕ್ಷಕಿಯಾಗಬೇಕು ಎನ್ನುವ ಕನಸಿನೊಂದಿಗೆ ಪದವಿ ಪೂರ್ಣಗೊಳಿಸಿ ಕಳೆದ ವರ್ಷ ನಡೆದ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿದ್ದಳು.
ನ್ಯಾಯಲಯದಲ್ಲಿನ ಪ್ರಕರಣದಿಂದ ನೇಮಕಾತಿ ಆದೇಶ ನೀಡಲು ವಿಳಂಬವಾಗಿತ್ತು. ಪ್ರಕರಣ ಇತ್ಯರ್ಥಗೊಂಡಿರುವ ಕಾರಣ ನೇಮಕಗೊಂಡ ಎಲ್ಲ ಶಿಕ್ಷಕರಿಗೆ ಇಲಾಖೆಯಿಂದ ಆದೇಶ ಪತ್ರ ನೀಡಲಾಗುತ್ತಿದೆ. ಪ್ರಸ್ತುತ ಪೂಜಾಗೆ ಡಿಡಿಪಿಐ ಕಚೇರಿಯಲ್ಲಿಯೇ ಕಾರ್ಯಭಾರ ನೀಡಲಾಗಿದ್ದು, ಶಿಕ್ಷಕರ ಖಾಲಿ ಹುದ್ದೆ ನೋಡಿ ವರ್ಗಾವಣೆ ಮಾಡಲಾಗುವುದು ಎಂದು ಇಲಾಖೆ ಮೂಲಗಳು ತಿಳಿಸಿವೆ.
ಈ ಸಂದರ್ಭದಲ್ಲಿ ಡಿಡಿಪಿಐ ಇಲಾಖೆ ನೋಡಲ್ ಅಕಾರಿ ಮಹ್ಮದ್ ಮಕ್ಬೂಲ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net