ತಾಯಿ, ಮಗುವಿನ ಆಸ್ಪತ್ರೆ ವಿಸ್ತರಣೆಗೆ ಆದೇಶ

Order to expand mother and child hospital
ಮುಧೋಳ ತಾಲೂಕು ಆಸ್ಪತ್ರೆಯ ಆರೋಗ್ಯ ಘಟಕವನ್ನು ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು. ಮಾಜಿ ಶಾಸಕ ಆನಂದ ನ್ಯಾಮಗೌಡ, ಅಶೋಕ ಕಿವಡಿ, ರಾಘು ಮೊಕಾಸಿ, ಸದುಗೌಡ ಪಾಟೀಲ, ಸುನಂದಾ ತೇಲಿ, ಹನುಮಂತ ತಿಮ್ಮಾಪೂರ, ಸಂಗಪ್ಪ ಇಮ್ಮನ್ನವರ, ಭೀಮಪ್ಪ ಮೆಟಗುಡ್ಡ ಮತ್ತಿತರರಿದ್ದಾರೆ.
Published on

ಮುಧೋಳ: ನಗರದ ತಾಯಿ ಹಾಗೂ ಮಗುವಿನ ಆಸ್ಪತ್ರೆಯನ್ನು ನೂರು ಹಾಸಿಗೆಗೆ ವಿಸ್ತರಿಸಲು ಆದೇಶಿಸಲಾಗಿದ್ದು, ಶೀಘ್ರದಲ್ಲಿ ಟೆಂಡರ್ ಕರೆಯಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ನಗರದ ತಾಲೂಕು ಆಸ್ಪತ್ರೆಯ ಆರೋಗ್ಯ ಘಟಕವನ್ನು ಉದ್ಘಾಟಿಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಥಣಿ, ಮುಧೋಳ ಆಸ್ಪತ್ರೆಗೆ ಶಂಕುಸ್ಥಾಪನೆ ಮಾಡಲಾಗುವುದು. ಆಸ್ಪತ್ರೆಗೆ ಬೇಕಾದ ಸೌಲಭ್ಯ, ಕಾಯಂ ವೈದ್ಯರು ಹಾಗೂ ಸಿಬ್ಬಂದಿ ನೇಮಕಾತಿ ಬಗ್ಗೆ ಸಿಎಂ ಸಿದ್ದರಾಮಯ್ಯ ಜತೆ ಮಾತುಕತೆ ನಡೆಸಿದ್ದೇನೆ. ಬಜೆಟ್ ಪೂರ್ವದಲ್ಲಿಯೇ ಎಲ್ಲವನ್ನೂ ನಿಭಾಯಿಸಲು ಸಿಎಂ ಸೂಚನೆ ನೀಡಿದ್ದಾರೆ. ಗುತ್ತಿಗೆ ಆಧಾರದ ಮೇಲೆ 28 ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದರು.

ಮಾಜಿ ಶಾಸಕ ಆನಂದ ನ್ಯಾಮಗೌಡ, ಅಶೋಕ ಕಿವಡಿ, ರಾಘು ಮೊಕಾಸಿ, ಸದುಗೌಡ ಪಾಟೀಲ, ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ಹನುಮಂತ ತಿಮ್ಮಾಪೂರ, ಸಂಗಪ್ಪ ಇಮ್ಮನ್ನವರ, ಭೀಮಪ್ಪ ಮೆಟಗುಡ್ಡ, ಪರಮಾನಂದ ಕುಟ್ರಟ್ಟಿ, ನಗರಸಭೆ ಉಪಾಧ್ಯಕ್ಷ ಮೈಬೂಬ ಬಾಗವಾನ, ಡಿಎಚ್‌ಒ ಡಾ. ಮಂಜುನಾಥ ಡಿ.ಎನ್., ಡಾ. ವೆಂಕಟೇಶ ಮಲಘಾಣ, ಮುಖ್ಯ ವೈದ್ಯಾಧಿಕಾರಿ ಡಾ. ಅಶೋಕ ಸೂರ್ಯವಂಶಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net