ಲೋಕಾಯುಕ್ತ ತನಿಖೆ ಸರಿಯಾಗಿ ನಡೆದಿದೆ ಎಂಬ ದೃಷ್ಟಿಯಲ್ಲಿ ಕೋರ್ಟ್ ಆದೇಶ ನೀಡಿದೆ. ಲೋಕಾಯುಕ್ತ ವರದಿ ಸರಿ ಇಲ್ಲ ಎಂದು ಹೇಳಲು ಆಗುವುದಿಲ್ಲ ಎನ್ನುವ ಅರ್ಥದಲ್ಲಿ ಕೋರ್ಟ್ ತೀರ್ಪು ನೀಡಿದೆ. ಇದು ಒಳ್ಳೆಯ ತೀರ್ಮಾನ. ಲೋಕಾಯುಕ್ತ ಸಂಸ್ಥೆಯ ತನಿಖೆಯ ಮೇಲೆ ನಂಬಿಕೆ ಇಡಬೇಕು. ಇಂತಹ ಸಂದರ್ಭದಲ್ಲಿ ಸಂಸ್ಥೆ ತನಿಖೆ ಮಾಡಿದ ಮೇಲೆ ವಿಶ್ವಾಸ ಬೇಕಲ್ಲವೇ ಎಂದರು.