ಆರ್ಡರ್ ಪಡೆದು ವಸ್ತು ಪೂರೈಸಿ

27MNL1-Web
ಮುನವಳ್ಳಿ ಪಟ್ಟಣದ ಪೊಲೀಸ್ ಹೊರ ಠಾಣೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಕರೊನಾ ಜಾಗೃತಿ ಸಭೆಯಲ್ಲಿ ಸಿಪಿಐ ಎಂ.ಐ.ನಡುವಿನಮನಿ ಮಾತನಾಡಿದರು. ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾಣಿ, ತಹಸೀಲ್ದಾರ್ ಪ್ರಶಾಂತ ಪಾಟೀಲ ಹಾಗೂ ಸಾರ್ವಜನಿಕರು ಇದ್ದರು.
Published on

ಮುನವಳ್ಳಿ: ಪಟ್ಟಣದ ಪೊಲೀಸ್ ಹೊರ ಠಾಣೆಯಲ್ಲಿ ಶುಕ್ರವಾರ ಕರೊನಾ ವೈರಸ್ ತಡೆಗೆ ಜಾಗೃತಿ ಹಾಗೂ ಹಾಲು, ತರಕಾರಿ, ಕಿರಾಣಿ ಮಾರಾಟಗಾರರ ಸಭೆ ಜರುಗಿತು.

ಸಿಪಿಐ ಎಂ.ಐ.ನಡುವಿನಮನಿ ಮಾತನಾಡಿ, ಹಾಲು, ತರಕಾರಿ ಮಾರಾಟಗಾರರು ಮನೆ ಮನೆಗೆ ಹೋಗಿ ಸರಬರಾಜು ಮಾಡಬೇಕು. ಕಿರಾಣಿ ಅಂಗಡಿಯವರು ಫೋನ್ ಮೂಲಕ ಆರ್ಡರ್ ತೆಗೆದುಕೊಂಡು ಗ್ರಾಹಕರ ಮನೆಗೆ ಸರಬರಾಜು ಮಾಡಬೇಕು. ಜೀವನಾವಶ್ಯಕ ವಸ್ತುಗಳನ್ನು ಮಾರಾಟ ಮಾಡುವವರು ಮಾಸ್ಕ್ ಧರಿಸಿ ಬಂದವರಿಗೆ ಮಾತ್ರ ವಸ್ತುಗಳನ್ನು ನೀಡಬೇಕು. ಹೊರಗಡೆ ಬಂದಾಗ ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದರು.

ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾಣಿ ಮಾತನಾಡಿ, ಹೊರರಾಜ್ಯ ಅಥವಾ ಪರಸ್ಥಳಗಳಿಂದ ಯಾರಾದರೂ ನಿಮ್ಮ ಮನೆಗೆ ಬಂದರೆ ಮೊದಲು ಪುರಸಭೆಗೆ ಮಾಹಿತಿ ನೀಡಿ ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮನೆಯಿಂದ ಯಾರೂ ಹೊರಬರದೆ ಸಹಕಾರ ನೀಡಬೇಕು ಎಂದರು. ತಹಸೀಲ್ದಾರ್ ಪ್ರಶಾಂತ ಪಾಟೀಲ ಮಾತನಾಡಿ, ಜೀವನಾವಶ್ಯಕ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದು ಕಂಡುಬಂದರೆ ಅಂತಹ ಅಂಗಡಿಗಳನ್ನು ಸೀಸ್ ಮಾಡಲಾಗುವುದು ಎಂದರು. ಸಿಇಒ ಯಶವಂತಕುಮಾರ, ಉಪತಹಸೀಲ್ದಾರ್ ಎಂ.ವಿ.ಗುಂಡಪ್ಪಗೋಳ, ರವಿ ಬಾಗಲಕೋಟ, ಅನಿಲ ಗಿಡ್ನಂದಿ, ಮನೋಹರ ಅಜಮನಿ, ಎ.ಎಸ್.ಐ. ಹಿರೇಹೊಳಿ, ರಮೇಶ ಗೋಮಾಡಿ, ವಿಜಯಕುಮಾರ ವನಕುದ್ರಿ, ಚಂದ್ರು ಜಂಬ್ರಿ, ಸೋಮಶೇಖರ ಯಲಿಗಾರ, ಜಿ.ಜಿ.ಗಂಗಣ್ಣವರ, ಈರಣ್ಣ ಮಠಪತಿ, ಪುರಸಭೆ ಸದಸ್ಯ ಮೀರಾಸಾಬ ವಟ್ನಾಳ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net