ಸುವ್ಯಸ್ಥೆ ಆಡಳಿತಾಗಾರನ ವರ್ಗಾವಣೆ ಸಲ್ಲ

manavi
ಕೊಟ್ಟೂರು ತಾಲೂಕಿನ ಕಂದಗಲ್ಲು ಗ್ರಾಪಂ ಅಧ್ಯಕ್ಷರನ್ನು ವರ್ಗಾವಣೆ ಮಾಡುವುದನ್ನು ವಿರೋಧಿಸಿ ತಾಪಂ ಇಒ ರವಿಕುಮಾರಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು. ಉಪಾಧ್ಯಕ್ಷ ನಾಗಪ್ಪ, ಸದಸ್ಯರಾದ ರಾಜಪ್ಪ, ಶಿವಕುಮಾರ ಗೌಡ, ವಿಶ್ವನಾಥ ಇತರರಿದ್ದರು.
Published on

ಕೊಟ್ಟೂರು: ಕಂದಗಲ್ಲು ಗ್ರಾಮ ಪಂಚಾಯಿತಿ ಪಿಡಿಒ ಟಿ.ಮಾರುತಿ ಅವರನ್ನು ವರ್ಗಾಹಿಸಲು ಹುನ್ನಾರ ನಡೆದಿದ್ದು, ವರ್ಗಾವಣೆ ನಡೆಯದಂತೆ ತಡೆಯಬೇಕೆಂದು ಪಂಚಾಯಿತಿಯ ಸರ್ವಸದಸ್ಯರು ತಾಪಂ ಇಒ ರವಿ ಕುಮಾರ್‌ಗೆ ಮನವಿ ಸಲ್ಲಿಸಿದರು.

ಶಾಸಕ ನೇಮಿರಾಜ್ ನಾಯ್ಕ ಕೆಡಿಪಿ ಮೀಟಿಂಗ್‌ನಲ್ಲಿ ವರ್ಗಾವಣೆ ಮಾಡುವುದಾಗಿ ತಿಳಿಸಿರುವುದು ಸಮಂಜಸವಲ್ಲ. ಕೆಲ ಪಟ್ಟಭದ್ರಹಿತಾಸಕ್ತಿಗಳ ಮಾತಿಗೆ ಮಣಿದು, ಗ್ರಾಮಗಳ ಅಭಿವೃದ್ಧಿಗಾಗಿ ಜನರೊಂದಿಗೆ ಉತ್ತಮ ಒಡನಾಟ ವಿದ್ದು, ಅಭಿವೃದ್ಧಿ ಕಾರ್ಯಗಳು ವಿಳಂಬವಿಲ್ಲದೆ ಮಾಡುತ್ತಾರೆ.

ಪಿಡಿಒ ಟಿ.ಮಾರುತಿ ವಿರುದ್ಧದ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಗ್ರಾಪಂ ಅಭಿವೃದ್ಧಿಗೆ ಹಿನ್ನಡೆ ಹಾಗೂ ಕೆಟ್ಟ ಹೆಸರು ತರಲು ಹೀಗೆ ಮಾಡುತ್ತಿದ್ದಾರೆ.

ಜನರೊಂದಿಗೆ ಉತ್ತಮ ಒಡನಾಟ

ವಿನಾಕಾರಣ ಅಧಿಕಾರಿಗಳನ್ನು ವರ್ಗಾವಣೆ ಮಾಡಿದರೆ ಪಂಚಾಯಿತಿಗೆ ಬೇರೆ ಅಧಿಕಾರಿಗಳು ಬರಲು ಇಚ್ಚಿಸದಂತೆ ಮಾಡುವುದು ಇವರ ದುರುದ್ದೇಶವಾಗಿದೆ. ವರ್ಗಾವಣೆ ಮಾಡಿದರೆ ತಾಪಂ ಮುಂದೆ ಮುಷ್ಕರ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಗ್ರಾಪಂ ಅಧ್ಯಕ್ಷೆ ಕಸ್ತೂರಿಬಾಯಿ, ಉಪಾಧ್ಯಕ್ಷ ನಾಗಪ್ಪ, ಸದಸ್ಯರಾದ ಕೆ.ಶಿವಕುಮರಗೌಡ, ಎಚ್.ಎ.ರಾಜಣ್ಣ, ವಿಶ್ವನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net