ಪುತ್ತೂರು: ಬೆಟ್ಟಂಪಾಡಿ ರೆಂಜ ಬಳಿಯಲ್ಲಿ ಅಕ್ರಮ ಕೂಟ ಸೇರಿಕೊಂಡು ಖಲಂದರ್ ಶಾಫಿ ಎಂಬುವರಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ೮ ಮಂದಿ ತಪ್ಪಿತಸ್ಥರೆಂದು ಹೆಚ್ಚುವರಿ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಽಶ ದೇವರಾಜ್ ವೈ ಎಚ್. ತೀರ್ಪಿತ್ತಿದ್ದಾರೆ.
೨೦೧೯ರಲ್ಲಿ ನಡೆದ ಪ್ರಕರಣದಲ್ಲಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಸಫ್ರಾಜ್, ನೌಶದ್, ಸಿದ್ದಿಕ್ ಅನ್ಸಾರ್, ಅಬ್ದುಲ್ ಮಜೀದ್, ಅಹಮ್ಮದ್ ರೈಸ್, ಅಬ್ದುಲ್ ಸತ್ತರ್, ಕಮರುದ್ದೀನ್, ಶಮೀರ್ ಅವರ ಮೇಲಿನ ಆರೋಪ ಸಾಭೀತಾಗಿದ್ದು, ಆರೋಪಿಗಳು ತಪ್ಪಿತಸ್ಕರೆಂದು ತೀರ್ಪು ಪ್ರಕಟಿಸಿದ್ದಾರೆ. ಸಹಾಯಕ ಸರ್ಕಾರಿ ಅಭಿಯೋಜಕಿ ಚೇತನಾ ದೇವಿ ವಾದಿಸಿದ್ದರು.