ಸೆ.೧ ರಂದು ಆರೆಂಜ್ ಅರ್ಲಟ್

rain
Published on

ಮಡಿಕೇರಿ: ಜಿಲ್ಲೆಯಲ್ಲಿ ಮಳೆ ಬೀಳುವ ಸಾಧ್ಯತೆ ಇರುವ ಹಿನ್ನೆಲೆ ಆ.೩೧ ರಿಂದ ಸೆ.೧ರ ಬೆಳಗ್ಗೆ ೮.೩೦ ಗಂಟೆಯವರೆಗೆ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.


ಜಿಲ್ಲೆಯಲ್ಲಿ ವಿವಿಧೆಡೆ ಭಾನುವಾರ ಸಾಧಾರಣ ಮಳೆಯಾಗಿದೆ. ಮಡಿಕೇರಿ ನಗರದ ಸುತ್ತಮುತ್ತ ಸೇರಿದಂತೆ ಸಂಪಾಜೆ, ಮದೆನಾಡು, ತಾಳತ್ತಮನೆ, ಬೋಯಿಕೇರಿ, ಉಡೋತ್‌ಮೊಟ್ಟೆ ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗಿದೆ. ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೧೧.೩೭ ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೨೯.೮೩ ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ ೧.೭೫ ಮಿ.ಮೀ, ಪೊನ್ನಂಪೇಟೆ ತಾಲೂಕಿನಲ್ಲಿ ಸರಾಸರಿ ೩.೮೩ ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೯.೫೫ ಮಿ.ಮೀ, ಕುಶಾಲನಗರ ತಾಲೂಕಿನಲ್ಲಿ ಸರಾಸರಿ ೧೧.೯೦ ಮಿ.ಮೀ. ಮಳೆಯಾಗಿದೆ.


ಜಿಲ್ಲೆಯ ಹೋಬಳಿವಾರುಗಳಾದ ಮಡಿಕೇರಿ ಕಸಬಾ ೩೬.೪೦, ನಾಪೋಕ್ಲು ೯.೪೦, ಸಂಪಾಜೆ ೩೨.೫೦, ಭಾಗಮಂಡಲ ೪೧, ವಿರಾಜಪೇಟೆ ೨, ಅಮ್ಮತ್ತಿ ೧.೫೦, ಹುದಿಕೇರಿ ೧.೫೦, ಶ್ರೀಮಂಗಲ ೭.೮೦, ಪೊನ್ನಂಪೇಟೆ ೧, ಬಾಳೆಲೆ ೫, ಸೋಮವಾರಪೇಟೆ ೭.೬೦, ಶನಿವಾರಸಂತೆ ೬, ಶಾಂತಳ್ಳಿ ೧೬.೪೦, ಕೊಡ್ಲಿಪೇಟೆ ೮.೨೦, ಕುಶಾಲನಗರ ೦.೮೦, ಸುಂಟಿಕೊಪ್ಪ ೨೩ ಮಿ.ಮೀ.ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net