ಕೊಡಗಿನಲ್ಲಿ ಗುರುವಾರ ಆರೆಂಜ್ ಅಲರ್ಟ್

Orange alert in Kodagu on Thursday
Published on

ಮಡಿಕೇರಿ:

ಜಿಲ್ಲೆಯಲ್ಲಿ ಬುಧವಾರ ಮಧ್ಯಾಹ್ನ ತನಕ ಮಳೆಯ ಪ್ರಮಾಣ ಕಡಿಮೆ ಇದ್ದಂತೆ ಕಂಡುಬAದರೂ ನಂತರ ಬಹುತೇಕ ಕಡೆಗಳಲ್ಲಿ ಮತ್ತೆ ಬಿರುಸಾಗಿದೆ. ಗುರುವಾರ ಬೆಳಗ್ಗೆ 8.30ರ ತನಕ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ತ್ರಿವೇಣಿ ಸಂಗಮ ಕ್ಷೇತ್ರ ಭಾಗಮಂಡಲದಲ್ಲಿ ಸಂಜೆ ವೇಳೆಗೆ ಭಾರಿ ಮಳೆಯಾಗಿದೆ. ಭಾಗಮಂಡಲ-ನಾಪೋಕ್ಲು ರಸ್ತೆ ಮೇಲೆ ಬೆಳಗ್ಗೆ ಸುಮಾರು ಅರ್ಧ ಅಡಿಯಷ್ಟು ಮಾತ್ರ ನೀರಿತ್ತು. ಆದರೆ ಸಂಜೆ ವಾಹನ ಓಡಾಟಕ್ಕೆ ಅಡ್ಡಿಯಾಗವಷ್ಟು ಪ್ರಮಾಣದಲ್ಲಿ ನೀರಿನ ಮಟ್ಟ ಏರಿಕೆ ಆಗಿದೆ. ತ್ರಿವೇಣಿ ಸಂಗಮದ ಉದ್ಯಾನ ಮತ್ತೆ ನೀರಿನಲ್ಲಿ ಮುಳುಗುವಂತಾಗಿದೆ.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲೂ ಬೆಳಗ್ಗೆ ಆಹ್ಲಾದಕರ ವಾತಾವರಣ ಇತ್ತಾದರೂ ಮಧ್ಯಾಹ್ನ ನಂತರ ಮತ್ತೆ ಮಳೆಯ ವಾತಾವರಣಕ್ಕೆ ಬದಲಾಯಿತು. ನದಿಗಳಲ್ಲಿ ಪ್ರವಾಹದ ಸ್ಥಿತಿ ಮುಂದುವರಿದಿದೆಯಾದರೂ ಮಂಗಳವಾರಕ್ಕೆ ಹೋಲಿಸಿದರೆ ಸ್ವಲ್ಪ ಕಡಿಮೆ ಇದೆ. ನಾಪೋಕ್ಲು, ಚೆರಿಯಪರಂಬು, ನೆಲ್ಲಿಹುದಿಕೇರಿ, ಸಿದ್ದಾಪುರ, ಕರಡಿಗೋಡು ಹಾಗೂ ಕುಶಾಲನಗರ ಭಾಗದ ನದಿ ಪಾತ್ರದ ಜನವಸತಿ ಪ್ರದೇಶಗಳಲ್ಲಿ ನೀರಿನ ಮಟ್ಟ ಸ್ವಲ್ಪ ಇಳಿಕೆ ಆಗಿದೆ. ಕುಶಾಲನಗರ ಸಾಯಿ ಬಡಾವಣೆಯಲ್ಲಿ ಮಂಗಳವಾರ ರಾತ್ರಿ ಒಂದೇ ಸಮನೇ ನೀರು ಏರುತ್ತಿದ್ದ ಕಾರಣ ಆತಂಕದ ಪರಿಸ್ಥಿತಿ ನಿರ್ಮಾಣ ಆಗಿತ್ತು. ಹೆಚ್ಚಿನ ಮನೆಗಳಿಂದ ನಡುರಾತ್ರಿಯಲ್ಲಿ ಸಾಮಾನು ಸರಂಜಾಮುಗಳನ್ನು ಬೇರೆಡೆಗೆ ಸಾಗಿಸುತ್ತಿದ್ದ ದೃಶ್ಯ ಕಂಡುಬAತು.

ಹಾರAಗಿ ಜಲಾನಯನ ಪ್ರದೇಶದಲ್ಲಿ ಮಳೆಯ ಅಬ್ಬರ ಸ್ವಲ್ಪ ಇಳಿಕೆ ಆಗಿದೆ. ಅಣೆಕಟ್ಟೆಗೆ 9,098 ಕ್ಯೂಸೆಕ್ ನೀರಿನ ಒಳಹರಿವು ಇದ್ದು, ನದಿಗೆ 19,250 ಕ್ಯೂಸೆಕ್ ಮತ್ತು ನಾಲೆಗೆ 125 ಕ್ಯೂಸೆಕ್ ನೀರು ಬಿಡಲಾಗುತ್ತಿದೆ.
ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡAತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 60.87 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 4.44 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 2173.93 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 1175.46 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ 101.60 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 77.65 ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ 42.07 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ 45.85 ಮಿ.ಮೀ. ಹಾಗೂ ಕುಶಾಲನಗರ ತಾಲೂಕಿನಲ್ಲಿ 37.20 ಮಿ.ಮೀ. ಸರಾಸರಿ ಮಳೆಯಾಗಿದೆ.

ಮಡಿಕೇರಿ ಕಸಬಾ 79, ನಾಪೋಕ್ಲು 78.40, ಸಂಪಾಜೆ 109, ಭಾಗಮಂಡಲ 140, ವಿರಾಜಪೇಟೆ 93.80, ಅಮ್ಮತ್ತಿ 61.50, ಹುದಿಕೇರಿ 55.40, ಶ್ರೀಮಂಗಲ 41.60, ಪೊನ್ನಂಪೇಟೆ 50.20, ಬಾಳೆಲೆ 21.09, ಸೋಮವಾರಪೇಟೆ ಕಸಬಾ 36.40, ಶನಿವಾರಸಂತೆ 50, ಶಾಂತಳ್ಳಿ 61, ಕೊಡ್ಲಿಪೇಟೆ 36, ಕುಶಾಲನಗರ 27.40, ಹಾಗೂ ಸುಂಟಿಕೊಪ್ಪ ಹೋಬಳಿಯಲ್ಲಿ 47 ಮಿ.ಮೀ. ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net