

ಮಡಿಕೇರಿ:
ನಂಜನಗೂಡಿನ ರಸಬಾಳೆ, ತಂದಿಹೆ ಕೊಡಗಿನ ಕಿತ್ತಳೆ, ಬೀದರ ಜಿಲ್ಲೆಯ ಸೀಬೆಯ ಹಣ್ಣು ಬೆಂಗಳೂರಿನ ಸೇಬಿನ ಹಣ್ಣು... ಹೀಗೆ ರಾಜ್ಯದ ಪ್ರಮುಖ ಹಣ್ಣುಗಳಲ್ಲಿ ಸ್ಥಾನ ಪಡೆದುಕೊಂಡಿರುವ ವಿಶ್ವ ವಿಖ್ಯಾತಿಯ ಕೊಡಗಿನ ಕಿತ್ತಳೆ ತೆರೆಮರೆಗೆ ಸರಿಯುವ ಹಂತದಲ್ಲಿದೆ. ಒಂದೊಮ್ಮೆ ಜಿಲ್ಲೆಯಾದ್ಯಂತ ಕಾಫಿ ತೋಟಗಳಲ್ಲಿ ಉಪಬೆಳೆಯಾಗಿ ಕಿತ್ತಳೆ ಸ್ಥಾನ ಪಡೆದುಕೊಂಡಿತ್ತು. ಈ ಮೂಲಕ ಬೆಳೆಗಾರರು ಉತ್ತಮ ಆದಾಯವನ್ನೂ ಪಡೆದುಕೊಳ್ಳುತ್ತಿದ್ದರು. ಆದರೆ ರೋಗಬಾಧೆ ಕೊಡಗಿನ ಕಿತ್ತಳೆಗೆ ಮಾರಕವಾಗಿ ಪರಿಣಮಿಸಿದೆ.
ಈ ನಿಟ್ಟಿನಲ್ಲಿ ತೆರೆಮರೆಗೆ ಸರಿಯುತ್ತಿರುವ ವಿಶಿಷ್ಠ ಸ್ವಾಧದ ಕೊಡಗಿನ ಕಿತ್ತಳೆಗೆ ಪುನಶ್ಚೇತನ ಕೊಡುವ ಮಹತ್ವದ ಕಾರ್ಯ ಚೆಟ್ಟಳ್ಳಿಯಲ್ಲಿರುವ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ಮೂಲಕ ನಡೆಯುತ್ತಿದೆ. ‘ಹಳದಿಯಿಂದ ಹಸಿರು, ಹಸಿರಿನಿಂದ ಫಸಲು,’ ಎನ್ನುವ ಧ್ಯೇಯ ವಾಕ್ಯದೊಂದಿದೆ ಮೊದಲ ಹಂತದಲ್ಲಿ ಆಯ್ದ ೧೦೦ ಬೆಳೆಗಾರರಿಗೆ ಕಿತ್ತಳೆ ಕೃಷಿಗೆ ಸಂಬAಧಿಸಿದ ಕೃಷಿ ಪರಿಕರಗಳನ್ನು ವಿತರಣೆ ಮಾಡಲಾಗಿದ್ದು ಇನ್ನು ಮೂರು ವರ್ಷಗಳಲ್ಲಿ ಕೊಡಗಿನ ಕಿತ್ತಳೆ ಗತವೈಭವಕ್ಕೆ ಮರಳುವ ವಿಶ್ವಾಸ ಹೊಂದಲಾಗಿದೆ.
ರಾಷ್ಟಿçÃಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಕಾರದೊಂದಿದೆ ‘ಕೂರ್ಗ್ ಮ್ಯಾಂಡರಿನ್’ ಪುನಶ್ಚೇತನ ಯೋಜನೆ ಅಡಿಯಲ್ಲಿ ಈ ಕಾರ್ಯ ಅನುಷ್ಠಾನಕ್ಕೆ ಬಂದಿದೆ. ೨.೩೭ ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, ೩ ವರ್ಷ ಕಾಲ ಚಾಲ್ತಿಯಲ್ಲಿ ಇರುತ್ತದೆ.
ಕಿತ್ತಳೆ ಪುನಶ್ಚೇತನ ಯೋಜನೆಗೆ ಮೊದಲ ವರ್ಷ ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಒಳಗೊಂಡAತೆ ೧೦೦ ರೈತರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದರಲ್ಲಿ ಕೊಡಗಿನ ರೈತರಿಗೆ ಆದ್ಯತೆ ಕೊಡಲಾಗಿದ್ದು ಶೇ.೬೦ ಅವಕಾಶ ಜಿಲ್ಲೆಗೆ ಮೀಸಲಿಡಲಾಗಿದೆ. ಈ ಯೋಜನೆಯಲ್ಲಿ ಆಯ್ಕೆ ಆಗಿರುವ ಕಿತ್ತಳೆ ಬೆಳೆಗಾರರಿಗೆ ನೇರವಾಗಿ ಯಾವುದೇ ಹಣಕಾಸಿನ ನೆರವು ಇಲ್ಲ. ಆದರೆ ಎಲ್ಲಾ ರೀತಿಯ ತಾಂತ್ರಿಕ ಸಹಕಾರ, ತರಬೇತಿ, ಉಪಕರಣಗಳು, ರಸಗೊಬ್ಬರ, ಜೈವಿಕ ಗೊಬ್ಬರ, ಔಷಧಿಗಳನ್ನು ಉಚಿತವಾಗಿ ಕೊಡಲಾಗುತ್ತಿದೆ.
ಸರ್ಕಾರ ಚೆಟ್ಟಳ್ಳಿಯಲ್ಲಿರುವ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ಮೂಲಕ ಈ ಯೋಜನೆ ಅನುಷ್ಠಾನಕ್ಕೆ ತರುತ್ತಿದ್ದು, ಎಷ್ಟರ ಮಟ್ಟಿಗೆ ಫಲ ನೀಡಲಿದೆ ಎನ್ನುವುದು ಬೆಳೆಗಾರರ ಸ್ಪಂದನೆಯನ್ನು ಅವಲಂಭಿಸಿದೆ. ಒಟ್ಟಾರೆಯಾಗಿ ಈ ಯೋಜನೆ ಬಗ್ಗೆ ವಿಜಯವಾಣಿ ಓದುಗರು ಲೌಡ್ ಸ್ಪೀಕರ್‌ನಲ್ಲಿ ಅಭಿಪ್ರಾಯ ಹಂಚಿಕೊAಡಿದ್ದಾರೆ.
ಕೊಡಗಿನ ಕಿತ್ತಳೆ ಎಂದರೆ ಅದಕ್ಕೆ ಅದರದ್ದೇ ಆದ ವಿಶೇಷತೆ ಇದೆ. ಇತ್ತೀಚಿನ ದಿನಗಳಲ್ಲಿ ಇದು ನಶಿಸಿ ಹೋಗಿತ್ತು. ಈಗ ಮತ್ತೆ ಕೊಡಗಿನ ಕಿತ್ತಳೆ ಪುನಶ್ಚೇತನಕ್ಕೆ ಮುಂದಾಗಿರುವುದು ಶ್ಲಾಘನೀಯ. ಕೊಡಗಿನ ಕಿತ್ತಳೆ ಮತ್ತೆ ವಿಶ್ವಪ್ರಸಿದ್ಧಿ ಪಡೆಯಲಿ. ರೋಗ ನಿರೋಧಕ ಮತ್ತು ಹವಾಮಾನ ವೈಪರೀತ್ಯವನ್ನು ತಡೆಯಬಲ್ಲ ತಳಿಗಳ ಅಭಿವೃದ್ಧಿ ಆಗಲಿ.
ಯೋಗಿತಾ ಬಂಗಾರಕೋಡಿ, ಗೋಣಿಕೊಪ್ಪಲು
ಕೆಲವು ವರ್ಷಗಳಿಂದ ಈಚೆಗೆ ವಿವಿಧ ರೀತಿಯ ರೋಗಗಳಿಂದ ಕಿತ್ತಳೆ ಬೆಳೆಯುವ ಪ್ರದೇಶ ಗಣನೀಯವಾಗಿ ಕಡಿಮೆಯಾಗುತ್ತಾ ಬಂದಿದೆ. ಕೊಡಗಿನ ಕಿತ್ತಳೆ ನಶಿಸಿಹೋಗುವಂಥ ಹಂತ ತಲುಪಿದ ಸಂದರ್ಭ ದಲ್ಲಿ ಚೆಟ್ಟಳ್ಳಿಯ ತೋಟಗಾರಿಕಾ ಬೆಳೆಗಳ ಪ್ರಾಯೋಗಿಕ ಕೇಂದ್ರ ಕಿತ್ತಳೆಯ ಪುನಶ್ಚೇತನ ಕಾರ್ಯಕ್ರಮ ಶುರುಮಾಡಿರುವುದು ಶ್ಲಾಘನೀಯ. ಕೊಡಗಿನಲ್ಲಿ ಕಿತ್ತಳೆ ಬೆಳೆ ಮತ್ತೊಮ್ಮೆ ತನ್ನ ವೈಭವ ಮೆರೆಯಲಿ.
ಎಲ್.ಆರ್. ರಾಘವೇಂದ್ರ, ವಿರಾಜಪೇಟೆ
ಕೊಡಗಿನ ಕಿತ್ತಳೆ ರೋಗಭಾಧೆಯಿಂದ ನಶಿಸಿ ವರ್ಷಗಳೇ ಕಳೆದಿವೆ. ಕಿತ್ತಳೆ ಪುನಶ್ಚೇತನಕಕ್ಕೆ ಈ ತನಕ ಪರಿಣಾಮಕಾರಿ ಯೋಜನೆ ರೂಪಿಸದಿರುವುದು ದುರಂತವೇ ಸರಿ. ಇದೀಗ ಈ ನಿಟ್ಟಿನಲ್ಲಿ ಪ್ರಯತ್ನ ನಡೆದಿರುವುದು ಸ್ವಾಗತಾರ್ಹ. ಕಿತ್ತಳೆ ಬೆಳೆಗಾರರಿಗೆ ಸಹಾಯಧನ ಮತ್ತು ಇನ್ನಿತರ ಸೌಲಭ್ಯ ನೀಡಿದರೆ ಕಿತ್ತಳೆ ಬೆಳೆಯಲು ಆಸಕ್ತಿ ಮೂಡಬಹುದು.
ವೈ.ಎಸ್. ಸತೀಶ್, ಕೃಷಿಕ, ಯಡೂರು ಗ್ರಾಮ
ಕೊಡಗಿನಲ್ಲೇ ಈಚೆಗೆ ಅಪರೂಪ ಆಗುತ್ತಿರುವ ಕೊಡಗಿನ ಕಿತ್ತಳೆ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ಮುಂದಡಿ ಇಟ್ಟಿರುವುದು ಉತ್ತಮ ಬೆಳವಣಿಗೆ. ಅದರಲ್ಲೂ ಕೊಡಗಿನಲ್ಲಿ ಈ ಹಿಂದೆ ಬೆಳೆಯುತಿದ್ದ ಕಿತ್ತಳೆ ತಳಿಗಳಿಗೆ ಜೀವ ತುಂಬಬೇಕು. ಕೊಡಗಿನ ಕಿತ್ತಳೆಗೆ ವಿಶೇಷ ಸ್ಥಾನ ಮಾನವಿದೆ. ಇತ್ತೀಚಿನ ದಿನಗಳಲ್ಲಿ ಕೊಡಗಿನಲ್ಲಿ ಬೇರೆ ಭಾಗದ ಕಿತ್ತಳೆ ತಂದು ಮಾರುಕಟ್ಟೆಗಳಲ್ಲಿ ಕೊಡಗಿನ ಕಿತ್ತಳೆ ಎಂದು ಮಾರಾಟ ಮಾಡುತ್ತಿರುವುದು ದುರಂತ.
ಭುವನೇಶ್ವರಿ ಹರೀಶ್, ಕಾಫಿ ಬೆಳೆಗಾರರು, ಶನಿವಾರಸಂತೆ
ಕೊಡಗಿನ ಕಿತ್ತಳೆಗೆ ಅದರದ್ದೇ ಆದ ಮಾರುಕಟ್ಟೆ ಈ ಹಿಂದಿನಿAದಲೂ ಇತ್ತು. ಆದರೆ ಇತ್ತೀಚಿಗೆ ಕೊಡಗಿನ ಕಿತ್ತಳೆ ಮಾಯವಾಗಿದೆ, ಕಾಫಿ ತೋಟದೊಳಗೆ ಕಿತ್ತಳೆ ನೋಡುವುದೇ ಒಂದು ಸಂಭ್ರಮವಾಗುತಿತ್ತು. ನಂತರ ಕೊಡಗಿನಲ್ಲಿ ಬೇರೆ ರಾಜ್ಯದ ತಳಿಯೊಂದನ್ನು ಪರಿಚಯಿಸಿದರು. ಅದು ಸಹ ಅಷ್ಟೊಂದು ಉತ್ತಮವಾಗಿರಲಿಲ್ಲ. ಕೊಡಗಿನಲ್ಲಿ ಈ ಹಿಂದೆ ಬೆಳೆಯುತಿದ್ದ ಕಿತ್ತಳೆ ತಳಿಯನ್ನೇ ಕೊಡಗಿಗೆ ಮತ್ತೆ ಪರಿಚಯಿಸಿದರೆ ಒಳ್ಳೆಯದು.
ಕೇಶವ ಮೂರ್ತಿ, ಕಾಫಿ ಬೆಳೆಗರಾರು, ಶನಿವಾರಸಂತೆ
ಒAದು ಕಾಲದಲ್ಲಿ ಕೊಡಗು ಜಿಲ್ಲೆಗೆ ಕೀರ್ತಿ ತಂದ ಕಿತ್ತಳೆ ಹಣ್ಣು ಪುನಶ್ಚೇತನಕ್ಕೆ ಕೇಂದ್ರ ಸರ್ಕಾರವೇ ಮುಂದಾಗಿರುವುದು ತುಂಬಾ ಹರ್ಷದ ಸಂಗತಿ. ಇದರಿಂದ ಮುಂದಿನ ಪೀಳಿಗೆಗೆ ಮರೆತೇ ಹೋಗಿರುವ ನಮ್ಮ ಕಿತ್ತಳೆಯ ರುಚಿ ಪರಿಚಯಿಸಿದಂತಾಗುತ್ತದೆ. ಜಿಲ್ಲೆಯ ರೈತರಿಗೆ ಹಾಗೂ ಬೆಳೆಗಾರರಿಗೆ ಸೂಕ್ತ ಮಾರ್ಗದರ್ಶನ ನೀಡಿದರೆ ಮಾತ್ರ ಈ ಪ್ರಕ್ರಿಯೆ ಫಲಪ್ರದವಾಗಲಿದೆ..
ಬೀನಾ ಅರವಿಂದ್, ಕಾಫಿ ಬೆಳೆಗಾರರು, ಶನಿವಾರಸಂತೆ
ಕೊಡಗಿನ ಕಿತ್ತಳೆ ವಿಶ್ವವಿಖ್ಯಾತಿ ಪಡೆದಿದೆ. ಆದರೆ ಸಿದ್ದಾಪುರ ಸುತ್ತ ಮುತ್ತ ಗ್ರಾಮಗಳ ತೋಟಗಳಲ್ಲಿ ಮಂಗಗಳ ಕಾಟದಿಂದ ಕಿತ್ತಳೆ ಬೆಳೆಯುವ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮುಂದಿನ ದಿನಗಳಲ್ಲಿ ಕಾಡುಪ್ರಾಣಿಗಳ ಹಾವಳಿಯಿಂದ ತೋಟಗಳಲ್ಲಿ ಕಿತ್ತಳೆ ಬೆಳೆಯುವುದು ಅಸಾಧ್ಯ.
ಉಮೇಶ್, ಮಾಲ್ದಾರೆ ಗ್ರಾಮ
ಕೊಡಗಿನಲ್ಲಿ ಅಪರೂಪವಾಗುತ್ತಿರುವ ಕಿತ್ತಳೆ ಬೆಳೆಯ ಪುನಶ್ಚೇತನಕ್ಕೆ ಕೇಂದ್ರ ಸÀರ್ಕಾರ ಕೈಗೊಂಡಿರುವ ನಿರ್ಧಾರ ಉತ್ತಮವಾಗಿದೆ. ಈ ಹಿಂದೆ ಕೊಡಗಿನಲ್ಲಿ ಬೆಳೆಯುತ್ತಿದ್ದ ಕಿತ್ತಳೆಯನ್ನೇ ಮತ್ತೆ ಬೆಳೆಯಲು ಪ್ರೋತ್ಸಾಹ ನೀಡಿದ್ದೇ ಆದಲ್ಲಿ ಉತ್ತಮ ಮಾರುಕಟ್ಟೆ ಮತ್ತು ಫಲ ಕೊಡುವ ನಿರೀಕ್ಷೆ ಇದೆ.
ಪಟ್ಟಡ ಹೇಮಂತ್ ಕುಮಾರ್, ಮದೆ ಗ್ರಾಮ
ಕೊಡಗಿನ ವಿಶಿಷ್ಟ ಸ್ವಾಧ ಮತ್ತು ಗುಣದ ಕಿತ್ತಳೆ ಬೇರೆ ಎಲ್ಲಿ ಕೂಡ ಬೆಳೆಯಲು ಸಾಧ್ಯವೇ ಇಲ್ಲ. ಭೌಗೋಳಿಕ ಸೂಚಕದ ಮಾನ್ಯತೆ ಹೊಂದಿರುವ ಕೊಡಗಿನ ಕಿತ್ತಳೆಗೆ ಮತ್ತೆ ಗತ ವೈಭವ ಮರಳಬೇಕಿದೆ. ಈ ನಿಟ್ಟಿನಲ್ಲಿ ೨.೩೭ ಕೋಟಿ ರೂ. ಮೊತ್ತದ ಯೋಜನೆ ಅನುಷ್ಠಾನಕ್ಕೆ ಬಂದಿದೆ. ಪಶ್ಚಿಮಘಟ್ಟದ ರೈತರ ಆದಾಯ ಹೆಚ್ಚಿಸುವ ಮೂಲಕ ಅವರ ಸಾಮಾಜಿಕ ಜೀವನ ಉತ್ತಮಪಡಿಸುವದು ಈ ಯೋಜನೆಯ ಉದ್ದೇಶಗಳಲ್ಲಿ ಸೇರಿದೆ.
ಡಾ. ಬಿ.ಎಂ. ಮುರಳೀಧರ್, ಹಣ್ಣು ವಿಜ್ಞಾನಿ, ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕಾ ಕೇಂದ್ರ, ಚೆಟ್ಟಳ್ಳಿ