ಭೂಮಿಯ ಸಮೀಪಕ್ಕೆ ಸ್ವಾನ್ ಧೂಮಕೇತು !

dooma
Published on

ಉಡುಪಿ: ಸ್ವಾನ್ ಹೆಸರಿನ ಧೂಮಕೇತು ಸೂರ್ಯನ ಸುತ್ತಲೂ ಸುತ್ತುತ್ತಾ ಭೂಮಿಯ ಸಮೀಪಕ್ಕೆ ಬರುತ್ತಿದ್ದು, ಸೂರ್ಯೋದಯದ ಮುಂಚೆ ಈ ಧೂಮಕೇತುವನ್ನು ಕಣ್ತುಂಬಿಕೊಳ್ಳುವ ಅವಕಾಶವಿದೆ ಎಂದು ಪೂರ್ಣಪ್ರಜ್ಞ ಕಾಲೇಜು ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಅತುಲ್ ಭಟ್ ತಿಳಿಸಿದ್ದಾರೆ.

ಉದ್ದ ಬಾಲದ ಹ್ಯಾಲಿ ಹೆಸರಿನ ಧೂಮಕೇತು ಒಮ್ಮೆ ನೋಡಲು ಸಿಗುವ ಸಾಧ್ಯತೆ 2061ಕ್ಕೆ ಮಿಲೇನಿಯಲ್ ಪೀಳಿಗೆಯು ಈ ಧೂಮಕೇತು ಕಣ್ತುಂಬಿಕೊಳ್ಳಲು ಇನ್ನೂ 40 ವರ್ಷಗಳೇ ಕಾಯಬೇಕು. ಆದರೆ ಹ್ಯಾಲಿ ಧೂಮಕೇತು ಕಾಣಿಸಿಕೊಳ್ಳುವ ಮೊದಲೇ ಇನ್ನೊಂದು ಧೂಮಕೇತುವನ್ನು ನೋಡುವ ಅವಕಾಶ ಒದಗಿ ಬಂದಿದೆ. ಸ್ವಾನ್ ಧೂಮಕೇತು ಪ್ರತಿದಿನ ಬೆಳಿಗ್ಗೆ ನಮಗೆ ದರ್ಶನ ಕೊಡಲಿದೆ. ಸೋಲಾರ್ ಹೆಲಿಯೊಸ್ಪಿಯರ್ ಅಬ್ಸರ್ವರ್‌ನ ಸ್ವಾನ್ ಕ್ಯಾಮರಾ ಗಮನಿಸಿದಂತೆ ಈ ಧೂಮಕೇತು ಸೂರ್ಯನ ಸುತ್ತುತ್ತಾ ಭೂಮಿಯ ಸಮೀಪಕ್ಕೆ ಬರುತ್ತಿದ್ದು, ಪ್ರತಿದಿನ ಬೆಳಗ್ಗೆ ಪ್ರಕಾಶಮಾನವಾಗುತ್ತಿದೆ. ಸ್ವಾನ್ ಧೂಮಕೇತು ಸೂರ್ಯನ ಅತಿ ಸಮೀಪಕ್ಕೆ ಮೇ 28ರಂದು ಬರಲಿದೆ. ಆದರೆ ಈ ಧೂಮಕೇತು ಹ್ಯಾಲಿ ಧೂಮಕೇತುವಿನಂತಲ್ಲ. ಇದು ಈ ವರ್ಷ ಬಿಟ್ಟರೆ ಇನ್ನು ಕಾಣಸಿಗುವುದು ಲಕ್ಷಾಂತರ ವರ್ಷಗಳನ್ನು ಬಿಟ್ಟು ಎನ್ನುತ್ತಾರೆ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಅತುಲ್ ಭಟ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net