ಒಪಿಎಸ್ ಜಾರಿಗೆ ಮೊದಲ ಆದ್ಯತೆ

8ckd1
Published on

ಚಿಕ್ಕೋಡಿ: ರಾಜ್ಯ ಸರ್ಕಾರಿ ನೌಕರರು ನನ್ನ ಮೇಲೆ ವಿಶ್ವಾಸವಿಟ್ಟು ಎರಡನೇ ಅವಧಿಗೆ ಆಯ್ಕೆಮಾಡಿದ್ದಾರೆ. ಅವರಿಗೆ ಋಣಿಯಾಗಿದ್ದೇನೆ. ಎನ್‌ಪಿಎಸ್‌ನ್ನು ಒಪಿಎಸ್ ಮಾಡುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಎ.ಕುಂಬಾರ ಹೇಳಿದರು.

ಇಲ್ಲಿನ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಎರಡನೇ ಬಾರಿಗೆ ಆಯ್ಕೆಯಾದ ಬಿ.ಎ.ಕುಂಬಾರ, ರಾಜ್ಯ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಎ.ಜಿ.ಬಸ್ತವಾಡ ಸೇರಿ ಆರೋಗ್ಯ ಇಲಾಖೆಯಡಿ ವಿವಿಧ ಹಂತದಲ್ಲಿ ಆಯ್ಕೆಯಾದ ಪದಾಧಿಕಾರಿಗಳಿಗೆ ಶನಿವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಚುನಾವಣೆ ರೂವಾರಿ ಎಡಿಎಚ್‌ಒ ಕಚೇರಿ ಅಧೀಕ್ಷಕ ನವೀನ ಗಂಗಾರೆಡ್ಡಿ, ಚಿಕ್ಕೋಡಿ ಆರೋಗ್ಯ ಇಲಾಖೆ ನೂತನ ನಿರ್ದೇಶಕ ಗಿರೀಶ ಕುಲಕರ್ಣಿ, ರಾಜು ದತ್ತವಾಡೆ, ರಾಜಶೇಖರ ಹಳೆಮನಿ, ರಮೇಶ ದೂಡಮನಿ, ಚನ್ನಮ್ಮ ಕೊಳಚಿ, ಕುಮಾರ ಚೌಗಲಾ, ನಿಪ್ಪಾಣಿ ತಾಲೂಕು ನೌಕರರ ಸಂಘದ ನಿರ್ದೇಶಕರಾದ ಉತ್ತಮಸಿಂಗ ರಜಪೂತ, ರಾಜಶೇಖರ ನಾಯಕ, ಸಿದ್ದು ಹಟ್ಯಾಗೋಳ, ಪುರಂದರ ಪೂಜಾರಿ ಅವರನ್ನು ಸತ್ಕರಿಸಲಾಯಿತು.

ತಾಲೂಕು ವೈದ್ಯಾಧಿಕಾರಿ ಡಾ.ಸುಕುಮಾರ ಭಾಗಾಯಿ, ಡಾ. ಶಾಂತಾರಾಮ ಬಾಗೇವಾಡಿ, ಡಾ. ಮಹೇಶ ಕುಂಬಾರ, ಡಾ. ಅನಿಲ ಸಲಗರೆ, ಚಿದಾನಂದ ಕಲಾದಗಿಮಠ, ಅನಿಲ ಅರಕೇರಿ, ಎಂ.ಎನ್.ಪಾಟೀಲ, ದಯಾನಂದ ತೇಗೂರ, ದೀಪಕ ಚಿನ್ನಾರಿ, ಮಹಾಂತೇಶ ಯಾದಗುಡೆ, ಎನ್.ಬಿ.ಬಡಿಗೇರ, ಮಹೇಶ ಪೇಟಕರ, ಡಾ.ಯಶೋಧ ಬಬಲಿ, ಡಾ.ರಾಜಕುಮರ ಮನಗುತ್ತಿ, ಸರೋಜನಿ ತಳವಾರ, ಸುಶಾಂತ ಯಾದವ, ಗಣೇಶ ಕುದನೂರೆ, ಪ್ರವೀನ ಪಾಟೀಲ, ಸುನೀಲ ಮಾಳಿ, ಮಾಳಪ್ಪ ಇಂಗಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net