ವಕ್ಪ್ ತಿದ್ದುಪಡಿ ಮಸೂದೆಗೆ ವಿರೋಧ : ಉಪ ವಿಭಾಗಾಧಿಕಾರಿ ಮಹ್ಮದ್ ಖಿಜರ್ ಅವರಿಗೆ ಮನವಿ

waqf kanunu
Published on

ಅಕ್ಕಿಆಲೂರ: ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ವಕ್ಪ್ ತಿದ್ದುಪಡಿ ಮಸೂದೆ ವಿರೋಧಿಸಿ ಪಟ್ಟಣದ ಅಂಜುಮನ್ ಎ ಇಸ್ಲಾಂ ಸುನ್ನಿ ಹನಫಿ ಸಂಸ್ಥೆಯಿಂದ ಸವಣೂರ ಉಪ ವಿಭಾಗಾಧಿಕಾರಿ ಮಹ್ಮದ್ ಖಿಜರ್ ಅವರಿಗೆ ಮನವಿ ಸಲ್ಲಿಸಲಾಯಿತು.

ವಕ್ಪ್ ಎಂಬುದು ಇಸ್ಲಾಂ ಧರ್ಮದ ವಿಶಿಷ್ಟವಾದ ದತ್ತಿ ವ್ಯವಸ್ಥೆ. ಈ ಮಸೂದೆಯನ್ನು ಸಂಸತ್ ಅಧಿವೇಶನದಲ್ಲಿ ಮಂಡಿಸಿ, ಜಂಟಿ ಸದನ ಸಮಿತಿಗೆ ಒಪ್ಪಿಸಲಾಗಿದೆ. ಈ ಮಸೂದೆಯು ಅಸಂವಿಧಾನಿಕವಾಗಿ ಅಲ್ಪಸಂಖ್ಯಾತ ಸಮುದಾಯದ ವಿರೋಧಿ ಹಾಗೂ ವಿಭಜನಾಕಾರಿಯಾಗಿದೆ. ಮುಸ್ಲಿಂ ಧರ್ಮದ ಧಾರ್ವಿುಕ, ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ವಕ್ಪ್​ಗೆ ಬಹಳ ಮುಖ್ಯವಾದ ಪಾತ್ರವಿದೆ. ಇವು ಮುಸ್ಲಿಮರ ಧಾರ್ವಿುಕ ಹಾಗೂ ದತ್ತಿ ಉದ್ದೇಶಕ್ಕಾಗಿ ನೀಡಿರುವ ಆಸ್ತಿಗಳಾಗಿದ್ದು, ತಿದ್ದುಪಡಿ ಮಸೂದೆ ಮೂಲಕ ಕೇಂದ್ರ ಸರ್ಕಾರ ಈ ಆಸ್ತಿಗಳ ವ್ಯವಸ್ಥಾಪನೆಯಲ್ಲಿ ಅನಗತ್ಯ ರಾಜಕಾರಣ ಮಾಡಲು ಪ್ರಯತ್ನಿಸುತ್ತಿದೆ. ಒಂದು ವೇಳೆ ಮಸೂದೆಯಲ್ಲಿರುವ ತಿದ್ದುಪಡಿಗಳು ಕಾನೂನಾಗಿ ರೂಪ ಪಡೆದು ಜಾರಿಗೆ ಬಂದಲ್ಲಿ, ವಕ್ಪ್ ಮಂಡಳಿಗಳಿಗೆ ಬಹುತೇಕ ಅಧಿಕಾರ ಇಲ್ಲದಂತಾಗುತ್ತದೆ. ಆದ್ದರಿಂದ ಅಲ್ಪಸಂಖ್ಯಾತ ಮುಸ್ಲಿಂ ಧರ್ಮದ ಹಿತಾಸಕ್ತಿಗೆ ವಿರುದ್ಧವಾಗಿರುವ ವಕ್ಪ್ ಕಾನೂನನ್ನು ಯಾವುದೇ ಕಾರಣಕ್ಕೂ ತಿದ್ದುಪಡಿ ಮಾಡಬಾರದು ಎಂದು ಲೋಕಸಭೆಯ ಜಂಟಿ ಸದನ ಸಮಿತಿ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.

ಅಂಜುಮನ್ ಸಂಸ್ಥೆ ಅಧ್ಯಕ್ಷ ಮೆಹಬೂಬ ಅಲಿ ಬ್ಯಾಡಗಿ, ಕಾರ್ಯದರ್ಶಿ ಯಾಸೀರ ಅರಾಫತ್ ಮಕಾನದಾರ, ನಿರ್ದೇಶಕರಾದ ಇಮ್ತಿಯಾಜ ಸಿಲಾರ, ಅಲ್ತಾಫ್ ಅತ್ತಾರ, ಸುಲೇಮಾನ ಶೇಖ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net