ವಿದ್ಯುತ್ ದರ ಏರಿಕೆ ಪ್ರಸ್ತಾವಕ್ಕೆ ವಿರೋಧ

Published on

ಮೈಸೂರು: ವಿದ್ಯುತ್ ದರ ಏರಿಕೆ ಮಾಡಬೇಕೆಂಬ ಪ್ರಸ್ತಾವನೆ ಕುರಿತಂತೆ ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗ ಹಾಗೂ ಸೆಸ್ಕ್ ಹಮ್ಮಿಕೊಂಡಿದ್ದ ಬಳಕೆದಾರರ ಅಹವಾಲು ಆಲಿಕೆ ಸಭೆಯಲ್ಲಿ ದರ ಏರಿಕೆಗೆ ನಗರ ಕೈಗಾರಿಕೆಗಳ ಸಂಘ, ಕೆಐಎಡಿಬಿ ಕೈಗಾರಿಕಾ ಪ್ರದೇಶ ಉತ್ಪಾದಕರ ಸಂಘಗಳು ವಿರೋಧ ವ್ಯಕ್ತಪಡಿಸಿವೆ ಎಂದು ಸಂಘದ ಅಧ್ಯಕ್ಷ ಕೆ.ಬಿ.ಲಿಂಗರಾಜು ತಿಳಿಸಿದರು.

ಆಯೋಗವೇ ನೀಡಿದ ಮಾಹಿತಿಯಂತೆ ನಿಗಮ ನಷ್ಟದಲ್ಲಿಲ್ಲ. ಆದರೆ, ಆಗುತ್ತಿರುವ ನಷ್ಟವನ್ನು ಹೇಗೆ ಸರಿದೂಗಿಸಬಹುದೆಂಬ ಸಲಹೆ ಸೂಚನೆ ನೀಡಲಾಯಿತು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪಂಚಾಯಿತಿಗಳ ವಿದ್ಯುತ್ ಬಾಕಿ ಮೊತ್ತದ ಮನ್ನಾ, ಕಡಿಮೆ ದರದಲ್ಲಿ ಹೊರಗಿನಿಂದ ವಿದ್ಯುತ್ ಹೇಗೆ ಖರೀದಿಸಬಹುದು, ಗ್ರಾಹಕರು ಬಾಕಿ ಉಳಿಸಿಕೊಂಡಿರುವ ಹಣವನ್ನು ದಕ್ಷತೆಯಿಂದ ವಸೂಲಿ ಮಾಡುವುದು, ಕೆಲವೊಂದು ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ವಿದ್ಯುತ್ ಪೂರೈಸುವುದರಿಂದ ಆಗುತ್ತಿರುವ ನಷ್ಟ ಮೊದಲಾದ ವಿವರ ನೀಡಿ, ಕ್ರಮ ಕೈಗೊಳ್ಳುವಂತೆ ಕೋರಲಾಯಿತು. ಇನ್ನು ಆಯೋಗ ಸಹ ತಮ್ಮ ಸಲಹೆಗಳು ಸರಿ ಇವೆ ಎಂದು ಒಪ್ಪಿದೆ ಎಂದು ತಿಳಿಸಿದರು. ಸಂಘದ ಪದಾಧಿಕಾರಿಗಳಾದ ಕೆ.ರಾಘವೇಂದ್ರ ಪ್ರಭು, ಎ.ಜಿ.ಅಶೋಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net