ಅಕ್ಕಿ ಬದಲಿಗೆ ಹಣ ನೀಡುವ ಕ್ರಮಕ್ಕೆ ವಿರೋಧ

Opposition to the move of giving money instead of rice
ಹುನಗುಂದ ತಾಲೂಕು ಪಡಿತರ ವಿತರಕರ ಸಂಘದ ವತಿಯಿಂದ ಶಿರಸ್ತೆದಾರ ಈಶ್ವರ ಗಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು. ಮುತ್ತಪ್ಪ ಕುದರಿಮನಿ, ರಾಘು ವಂದಿಗನೂರ, ಪ್ರಕಾಶ್ ನಾಗನಗೌಡರ, ಪರಸಪ್ಪ ಗಂಗೂರ, ಶರಣಪ್ಪ ಬಾದವಾಡಗಿ ಇದ್ದರು.
Published on

ಹುನಗುಂದ: ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಉಳಿದ 5 ಕೆಜಿ ಬದಲಿಗೆ ಹಣ ನೀಡುತ್ತಿರುವುದನ್ನು ವಿರೋಧಿಸಿ ತಾಲೂಕು ಪಡಿತರ ವಿತರಕರ ಸಂಘದಿಂದ ಶಿರಸ್ತೇದಾರ ಈಶ್ವರ ಗಡ್ಡಿ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷ ಗಂಗಾಧರ ಗೌಡರ ಮಾತನಾಡಿ, ರಾಜ್ಯ ಸರ್ಕಾರ ಪಡಿತರ ಅಕ್ಕಿ ಕೊರತೆಯಿರುವ ಕಾರಣ 5 ಕೆಜಿ ಬದಲಿಗೆ ಹಣ ಸಂದಾಯ ಮಾಡುವ ನಿರ್ಧಾರ ಕೈಗೊಂಡಿದ್ದು, ಇದರಿಂದ ನಮ್ಮ ಪಡಿತರ ವಿತರಕರು ಜೀವನ ನಡೆಸುವುದು ತುಂಬ ಕಷ್ಟಕರವಾಗಿದೆ. ಏಕೆಂದರೆ ಪ್ರತಿ ಕ್ವಿಂಟಾಲದಿಂದ ಬರುವ ಕಮಿಷನ್ ಮೊದಲೇ ಕಡಿಮೆಯಿದ್ದು, ಈಗ ಸರ್ಕಾರದ ಆದೇಶದಿಂದ ಮತ್ತಷ್ಟು ತೊಂದರಯಾಗಲಿದೆ. ಸರ್ಕಾರ ಅಕ್ಕಿ ಬದಲು ಹಣ ಸಂದಾಯ ಮಾಡುವ ಬದಲಿಗೆ ರೈತರು ಬೆಳೆದಿರುವ ತೊಗರಿ, ಹೆಸರು ಕಾಳು, ಬೆಲ್ಲ, ಸಕ್ಕರೆ, ಸಿರಿಧಾನ್ಯ, ಉಪ್ಪು ವಿತರಿಸಿದರೆ ರಾಜ್ಯದಲ್ಲಿರುವ ಸಕ್ಕರೆ ಕಾರ್ಖಾನೆಗಳು ಹಾಗೂ ರೈತರಿಗೂ ಅನುಕೂಲವಾಗುತ್ತದೆ. ಹೀಗಾಗಿ ಪ್ರತಿ ತಿಂಗಳು ಶೇ.10 ರಷ್ಟು ಪಡಿತರ ಚೀಟಿದಾರರು ವಿವಿಧ ಕಾರಣದಿಂದ ಆಹಾರ ಪದಾರ್ಥ ಪಡೆಯುತ್ತಿಲ್ಲ. ಒಂದು ವೇಳೆ ಚಾಲ್ತಿಯಲ್ಲಿರುವ ಎಲ್ಲ ಪಡಿತರದಾರರಿಗೆ ಹಣ ನೀಡಿದಲ್ಲಿ ಸರ್ಕಾರಕ್ಕೆ 60 ರಿಂದ 70 ಕೋಟಿ ರೂ. ನಷ್ಟವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದಾರೆ.

ಮುತ್ತಪ್ಪ ಕುದರಿಮನಿ, ರಾಘು ವಂದಿಗನೂರ, ಪ್ರಕಾಶ್ ನಾಗನಗೌಡರ, ಪರಸಪ್ಪ ಗಂಗೂರ, ಶರಣಪ್ಪ ಬಾದವಾಡಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net