20 ಹಳ್ಳಿಗಳ ಸೇರ್ಪಡೆಗೆ ವಿರೋಧ

Opposition to the inclusion of 20 villages
ಹುನಗುಂದ ಪಟ್ಟಣದ ಗಚ್ಚಿನಮಠದಲ್ಲ್ಲಿ ನಾಗರೀಕ ಸೇವಾ ಸುಧಾರಣಾ ವೇದಿಕೆಯಿಂದ ಕರೆದ ಸಭೆಯಲ್ಲಿ ವೇದ ಮೂರ್ತಿ ಮಹಾಂತಯ್ಯ ಗಚ್ಚಿನಮಠ ಅಧ್ಯಕ್ಷತೆವಹಿಸಿ ಮಾತನಾಡಿದರು, ವ್ಹಿ.ಆರ್. ಜನಾದ್ರಿ, ಸಂಗಣ್ಣ ಅವಾರಿ, ಶೇಖರಪ್ಪ ಬಾದವಾಡಗಿ ಇದ್ದರು.
Published on

ಹುನಗುಂದ: ಹುನಗುಂದ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಅಮೀನಗಡ, ಕಮತಗಿ ಸೇರಿದಂತೆ 20 ಹಳ್ಳಿಗಳನ್ನು ಬಾಗಲಕೋಟೆ ಅಥವಾ ಗುಳೇದಗುಡ್ಡ ತಾಲೂಕಿಗೆ ಸೇರ್ಪಡೆ ಮಾಡುತ್ತಿರುವುದು ಇದು ರಾಜಕೀಯ ಷಡ್ಯಂತ್ರರಗಿದೆ. ಎಂದು ವೇದ ಮೂರ್ತಿ ಮಹಾಂತಯ್ಯ ಗಚ್ಚಿನಮಠ ಆಕ್ರೋಷ ವ್ಯಕ್ತಪಡಿಸಿದರು.

ಪಟ್ಟಣದ ಗಚ್ಚಿನಮಠದಲ್ಲಿ ಬಾಗಲಕೋಟೆ-ಗುಳೇದಗುಡ್ಡಕ್ಕೆ ತಾಲೂಕಿಗೆ ಸೇರ್ಪಡೆ ಮಾಡುತ್ತಿರುವ ಹಿನ್ನೆಯಲ್ಲಿ ನಾಗರೀಕ ಸೇವಾ ಸುಧಾರಣಾ ವೇದಿಕೆಯಿಂದ ಕರೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ರಾಜಕೀಯ ವ್ಯಕ್ತಿಗಳಸ್ವಾರ್ಥ ಹಿತಾಸಕ್ತಿಯಿಂದ ತಾಲೂಕಿನ ಅಸ್ತಿತ್ವ ಹೋಗುತ್ತದೆ. ಈಗಾಗಲೇ ಹುನಗುಂದ ತಾಲೂಕಿನ 156 ಹಳ್ಳಿಗಳಲ್ಲಿ ಅರ್ಧಕ್ಕೂ ಹೆಚ್ಚಿನ ಹಳ್ಳಿಗಳು ಇಳಕಲ್ ತಾಲೂಕಿಗೆ ಹೋಗಿವೆ. ಅದರಲ್ಲಿ ಮತ್ತೇ ಹುನಗುಂದ ತಾಲೂಕಿನ 20 ಹಳ್ಳಿಗಳು ಬಾಗಲಕೋಟ ಗುಳೇದಗುಡ್ಡ ತಾಲೂಕಿಗೆ ಸೇರ್ಪಡೆ ಗೊಂಡರೆ. ಹುನಗುಂದ ತಾಲೂಕಿನ ಸಂಪೂರ್ಣ ಅಸ್ತಿತ್ವ ಹೋಗುತ್ತದೆ. .ಆದ್ದರಿಂದ ನಮ್ಮ ತಾಲೂಕಿಗೆ ಹಳ್ಳಿ ಬೇರೆ ತಾಲೂಕಿಗೆ ಹೊಗದಂತೆ ತಾಲೂಕಿನ ಜನತೆಯು ಜಾಗತಿ ವಹಿಸಬೇಕೆಂದು ತಿಳಸಿದರು.

ನಾಗರಕ ಸೇವಾ ಸುಧಾರಣೆಯ ಸಮಿತಿಯ ಸದಸ್ಯ ಜಿ.ಬಿ.ಕಂಬಾಳಿಮಠ ಮಾತನಾಡಿ ಬಾಗಲಕೋಟೆ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅಮೀನಗಡ ಸೇರಿ 20 ಹಳ್ಳಿಗಳನ್ನು ಬಾಗಲಕೋಟೆ ಅಥವಾ ಗುಳೇದಗುಡ್ಡ ತಾಲೂಕಿಗೆ ಸೇರ್ಪಡಿಸುವಂತೆ ಕಂದಾಯ ಸಚಿವರಿಗೆ ಪತ್ರ ನೀಡಿದ್ದು. ಅಮೀನಗಡದಿಂದ ಹುನಗುಂದ ಕೇವಲ 11 ಕಿ.ಮೀ. ದೂರದಲ್ಲಿದೆ. ಬಾಗಲಕೋಟೆ 42 ಕಿ.ಮೀ. ದೂರವಾಗುತ್ತದೆ. ಗುಳೇದಗುಡ್ಡವೂ 23 ಕಿ.ಮೀ. ದೂರದಲ್ಲಿರುವುದರಿಂದ ಹುನಗುಂದ ತಾಲೂಕಿನಲ್ಲಿಯೇ ಮುಂದುವರೆಸಬೇಕು. ಇಲ್ಲವಾದರೆ ಅಮೀನಗಡ ತಾಲೂಕನ್ನಾಗಿ ಮಾಡಿರಿ ಎಂದು ಅಭಿಪ್ರಾಯ ತಿಳಿಸುತ್ತಿದ್ದಾರೆ. ಕಂದಾಯ ಇಲಾಖೆಯ ನಿರ್ಧಾರವನ್ನು ತೆಗೆದುಕೊಳ್ಳವ ಮೊದಲು ಶಾಸಕರು ಗಟ್ಟಿತನ ಹಿಡಿದು ಯಾವುದೇ ಹಳ್ಳಿಗಳನ್ನು ಬೇರೆ ತಾಲೂಕಿಗೆ ಬಿಟ್ಟುಕೊಡಬಾರದು ಎಂದು ಒತ್ತಾಯಿಸಿದರು.

ಮಹಾಂತೇಶ ಹಳ್ಳೂರ ಮಾತನಾಡಿ ಬಾಗಲಕೋಟೆಯ ಶಾಸಕ ಎಚ್.ವೈ.ಮೇಟಿ ಅವರು ಹುನಗುಂದ ತಾಲೂಕಿನ ಹಳ್ಳಿಗಳನ್ನು ಬಾಗಲಕೋಟೆ ಮತ್ತು ಗುಳೇದಗುಡ್ಡ ತಾಲೂಕಕ್ಕೆ ಸೇರಿಸಿ ಎಂದು ಸರ್ಕಾರಕ್ಕೆ ಪತ್ರ ಬರೆದು ಎಂದು ಕೋರಿದ್ದಿರುವುದು ಹುನಗುಂದ ನಾಗರೀಕರು ತೀವ್ರವಾಗಿ ಖಂಡಸುತ್ತೇವೆ. ಅಖಂಡ ಕರ್ನಾಟಕದಲ್ಲಿ ಹುನಗುಂದ ತಾಲೂಕು ಅತೀ ಹೆಚ್ಚಿನ ಹಳ್ಳಿಗಳನ್ನು ಪಡೆದ ತಾಲೂಕಾಗಿತ್ತು ಅದು ಈಗ ಛಿದ್ರವಾಗಿ ಕೇವಲ 80 ಹಳ್ಳಿಗಳನ್ನು ಉಳಿಸಿಕೊಂಡರು. ಮತ್ತೇ 20 ಹಳ್ಳಿಗಳನ್ನು ಕಸಿದುಕೊಳ್ಳುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಆದ್ದರಿಂದ ಹುನಗುಂದ ಪಟ್ಟಣದ ಜನರು ಪಕ್ಷಬೇಧ ಮರೆತು ಶಾಸಕರ ಬಳಿ ಹೋಗಿ ಹುನಗುಂದ ತಾಲೂಕಿನ ಗ್ರಾಮಗಳನ್ನು ಬೇರೆ ತಾಲೂಕಿಗೆ ಸೇರಿಸುವುದು ಬೇಡ ಎಂದು ಶಾಸಕರು ಗಟ್ಟಿಯಾಗಿ ನಿಂತರೆ ಯಾರು ನಮ್ಮ ತಾಲೂಕಿನ ಸಮೀಪ ಬರುವುದಿಲ್ಲ ಎಂದು ಸಭೆಯಲ್ಲಿ ಜನರಿಗೆ ತಿಳಿಸಿದರು..

ನಾಗರಕ ಸೇವಾ ಸುಧಾರಣೆಯ ವ್ಹಿ.ಆರ್. ಜನಾದ್ರಿ, ಸಂಗಣ್ಣ ಅವಾರಿ, ಶೇಖರಪ್ಪ ಬಾದವಾಡಗಿ, ಎಂ.ಎಸ್.ಮಠ, ಅರುಣೋದಯ ದುದ್ಗಿ, ಪ್ರಭು ಇದ್ದಲಗಿ, ಪುರಸಭೆ ಸದಸ್ಯರಾದ ಸಾಂತಪ್ಪ ಹೊಸಮನಿ, ಸಂಜೀವ ಜೋಷಿ ,ಕಷ್ಣಾ ಜಾಲೀಹಾಳ,ವಿಜಯಮಹಾಂತೇಶ ಮಲಗಿಹಾಳ, ಗಿರಿಮಲ್ಲಪ್ಪ ಹಳಪೇಟಿ ಸೇರಿದಂತೆ ಇತರರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net