ನೂತನ ಕಾನೂನು ಜಾರಿಗೆ ವಿರೋಧ

ಮದ್ದೂರು ಪಟ್ಟಣದ ಕೊಲ್ಲಿ ವೃತ್ತದಲ್ಲಿ ಗುರುವಾರ ಸರಕು ಸಾಗಣೆ ವಾಹನಗಳ ಮಾಲೀಕರು, ಚಾಲಕರು ಬೆಂಗಳೂರು, ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಪಿ.ಸಂದರ್ಶ, ಗೊರವನಹಳ್ಳಿ ಮಧು, ಮದ್ದೂರು ತಾಲೂಕು ಸರಕು ಸಾಗಣೆ ವಾಹನ ಮಾಲೀಕರ ಸಂಘದ ಪದಾಧಿಕಾರಿಗಳಾದ ರವಿ, ನಂಜುಂಡಸ್ವಾಮಿ, ರಾಜೇಶ್, ಸ್ವಾಮಿ, ಕಾಂತರಾಜು ಮತ್ತಿತರರಿದ್ದರು.
ಮದ್ದೂರು ಪಟ್ಟಣದ ಕೊಲ್ಲಿ ವೃತ್ತದಲ್ಲಿ ಗುರುವಾರ ಸರಕು ಸಾಗಣೆ ವಾಹನಗಳ ಮಾಲೀಕರು, ಚಾಲಕರು ಬೆಂಗಳೂರು, ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಪಿ.ಸಂದರ್ಶ, ಗೊರವನಹಳ್ಳಿ ಮಧು, ಮದ್ದೂರು ತಾಲೂಕು ಸರಕು ಸಾಗಣೆ ವಾಹನ ಮಾಲೀಕರ ಸಂಘದ ಪದಾಧಿಕಾರಿಗಳಾದ ರವಿ, ನಂಜುಂಡಸ್ವಾಮಿ, ರಾಜೇಶ್, ಸ್ವಾಮಿ, ಕಾಂತರಾಜು ಮತ್ತಿತರರಿದ್ದರು.
Published on

ಮದ್ದೂರು: ಹಿಟ್ ಅಂಡ್ ಪ್ರಕರಣದಡಿ ಚಾಲಕರಿಗೆ 10 ವರ್ಷ ಜೈಲು 7 ಲಕ್ಷ ರೂ. ದಂಡ ವಿಧಿಸಿಸುವ ಕಾನೂನು ಜಾರಿಗೆ ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಸರಕು ಸಾಗಣೆ ವಾಹನಗಳ ಚಾಲಕರು ಹಾಗೂ ಮಾಲೀಕರು ಗುರುವಾರ ಪಟ್ಟಣದ ಕೊಲ್ಲಿ ವೃತ್ತದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ತಾಲೂಕು ಸರಕು ಸಾಗಣೆ ವಾಹನ ಮಾಲೀಕರ ಸಂಘ ಮತ್ತು ಗೂಡ್ಸ್ ಆಟೋ ಚಾಲಕರು ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರ ತರಲು ಹೊರಟಿರುವ ಕಾನೂನು ಚಾಲಕರಿಗೆ ಮಾರಕವಾಗಲಿದ್ದು, ಕೂಡಲೇ ಇದನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.

ಹೆದ್ದಾರಿಯಲ್ಲಿ ಸರಕು ವಾಹನಗಳನ್ನು ತಡೆದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮದ್ದೂರು ತಾಲೂಕು ಸರಕು ಸಾಗಣೆ ವಾಹನ ಮಾಲೀಕರ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ಮಾತನಾಡಿ, ಹಿಡ್ ಅಂಡ್ ರನ್ ಪ್ರಕರಣಗಳಲ್ಲಿ ಚಾಲಕರಿಗೆ 10 ವರ್ಷ ಜೈಲು 7 ಲಕ್ಷ ರೂ. ದಂಡದ ವಿಧಿಸುವ ನೂತನ ಕಾನೂನು ಜಾರಿಗೆ ತರಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮ ಸರಿಯಲ್ಲ. ಬಹುತೇಕ ಚಾಲಕರು ಜೀವನ ನಿರ್ವಹಣೆಗೆ ಪರದಾಡುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ನೂತನ ಕಾನೂನು ಬದುಕಿಗೆ ಮಾರಕವಾಗಲಿದೆ. ಇದನ್ನು ಅರಿತು ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ನೂತನ ಕಾನೂನನ್ನು ಕೈ ಬಿಡಬೇಕು ಇಲ್ಲಿದಿದ್ದರೆ ತೀವ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯ ನೇತೃತ್ವವನ್ನು ಮುಖಂಡರಾದ ಪಿ.ಸಂದರ್ಶ, ಗೊರವನಹಳ್ಳಿ ಮಧು, ಮದ್ದೂರು ತಾಲೂಕು ಸರಕು ಸಾಗಣೆ ವಾಹನ ಮಾಲೀಕರ ಸಂಘದ ಪದಾಧಿಕಾರಿಗಳಾದ ರವಿ, ನಂಜುಂಡಸ್ವಾಮಿ, ರಾಜೇಶ್, ಸ್ವಾಮಿ, ಕಾಂತರಾಜು, ವೆಂಕಟೇಶ್, ರಾಮಣ್ಣ, ಶೇಖರ್, ಪ್ರದೀಪ್, ನಾಗೇಶ್, ಕೋಡಿಹಳ್ಳಿ ಶಂಕರ್, ವಿನಯ್, ಶಂಕರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net