ಗೃಹ ಮಂಡಳಿ ನಿರ್ಧಾರಕ್ಕೆ ವಿರೋಧ

Untitled-1
ದೊಡ್ಡಬಳ್ಳಾಪುರದ ದೊಡ್ಡಬೆಳವಂಗಲದಲ್ಲಿ ರಾಜ್ಯ ಗೃಹ ಮಂಡಳಿಯ ಭೂಸ್ವಾಧಿನಕ್ಕೆ ರೈತರು ವಿರೋಧ ವ್ಯಕ್ತಪಡಿಸಿ ಸಭೆ ನಡೆಸಿದರು. ರೈತ ಪ್ರಾಂತ ಸಂದ ಪ್ರಧಾನ ಕಾರ್ಯದರ್ಶಿ ಯಶವಂತ್​, ಚಂದ್ರ ತೇಜಸ್ವಿ, ಪ್ರಭಾರ, ಜಿಲ್ಲಾ ಮುಖಂಡರಾದ ರಾಮಕೃಷ್ಣಯ್ಯ, ವಿಜಕುಮಾರ್​ ಇದ್ದರು.
Published on

ದೊಡ್ಡಬಳ್ಳಾಪುರ : ಕರ್ನಾಟಕ ಗೃಹ ಮಂಡಳಿಯು ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ದೊಡ್ಡಹೆಜ್ಜಾಜಿ, ವೆಂಕಟೇಶಪುರ, ಕಾರೇಪುರ, ಐಯ್ಯನಹಳ್ಳಿ, ಕಸಾಟ್ಟ ಗ್ರಾಮಗಳ 2,760 ಎಕರೆ ಭೂಮಿ ಸ್ವಾಧಿನಕ್ಕೆ ಮುಂದಾಗಿರುವುದು ಖಂಡನೀಯ ಎಂದು ರೈತ ಮುಖಂಡ ರಾಮಕೃಷ್ಣಯ್ಯ ಆಕ್ರೋಶ ವ್ಯಕ್ತಪಡಿಸಿದರು. ಚಿಕ್ಕಬೆಳವಂಗಲದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಭೂಸ್ವಾಧಿನ ಪ್ರಕ್ರಿಯೆ ಬಗ್ಗೆ ಗ್ರಾಮ ಸಭೆ ನಡೆಸದೆ, ರೈತರ ಅಭಿಪ್ರಾಯ ಕೇಳದೇ ಏಕಮುಖವಾಗಿ ಭೂ&ಸ್ವಾಧಿನಕ್ಕೆ ಹೊರಟಿರುವ ಗೃಹ ಮಂಡಳಿ ಮತ್ತು ಸರ್ಕಾರದ ರೈತ ವಿರೋಧಿ ನಿಲುವನ್ನು ಖಂಡಿಸುತ್ತೇವೆ ಎಂದರು.

ಜಮೀನುಗಳಲ್ಲಿ ಬಹು ಕಾಲದಿಂದಲೂ ಕೃಷಿ ಮಾಡುತ್ತಾ ಜೀವನ ಸಾಗಿಸುತ್ತಿದ್ದು, ಭೂಮಿ ನಮ್ಮ ಬದುಕಿಗೆ ಆಧಾರವಾಗಿದೆ. ಹಿರಿಯರು ನಮಗೆ ನೀಡಿದ ಭೂಮಿಯನ್ನು ನಾವುಗಳು ಮುಂದಿನ ಪೀಳಿಗೆಗೆ ದಾಟಿಸುವ ಜವಾಬ್ದಾರಿ ಇದೆ. ಅಲ್ಲದೇ ನಮ್ಮ ಪೂರ್ವಿಕರ ಸಮಾಧಿಗಳು ಜಮೀನುಗಳಲ್ಲಿದ್ದು, ನಾವು ಈ ನೆಲವನ್ನು ಪವಿತ್ರವೆಂದು ಪೂಜಿಸುತ್ತಿದ್ದೇವೆ. ಮಾರಾಟ ಮಾಡುವ ಇಲ್ಲವೆ ಬೇರೆ ಕಾರಣಗಳಿಗೆ ಪರಭಾರೆ ಮಾಡುವ ಉದ್ದೇಶ ನಮಗಿಲ್ಲ ಎಂದು ಹೇಳಿದರು. ಸ್ಥಳಿಯ ಮುಖಂಡ ಉಗ್ರಪ್ಪ ಮಾತನಾಡಿ, 200ಕ್ಕೂ ಹೆಚ್ಚು ಎಕರೆಯಲ್ಲಿ ಅಡಕೆ ತೋಟಗಳಿವೆ, ಅಲ್ಲದೆ ನೂರಾರು ಎಕರೆಯಲ್ಲಿ ತರಕಾರಿ ಬೆಳೆಯಲಾಗುತ್ತಿದೆ. ಈ ಗ್ರಾಮಗಳ ಎಲ್ಲ ಕುಟುಂಬಗಳು ಪಶುಸಂಗೋಪನೆ ಮಾಡುತ್ತಿದ್ದು, ದೊಡ್ಡ ಪ್ರಮಾಣದಲ್ಲಿ ಹಾಲು ಉತ್ಪಾದನೆಯಾಗುತ್ತಿದೆ. ಸಾಮಾಜಿಕ&ಆರ್ಥಿಕ ಪರಿಣಾಮಗಳ ಕುರಿತು ಯಾವುದೇ ಅಧ್ಯಯನ ನಡೆಸದೆ, ಫಲವತ್ತಾದ ಕೃಷಿ ಭೂಮಿಯನ್ನು ಹೇಗೆ ಸ್ವಾಧಿನ ಮಾಡಿಕೊಳ್ಳುತ್ತಿರಾ. ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳ ಕುರಿತು ಭೂಸ್ವಾಧಿನ ಮಾಡಿ ಸಾವಿರಾರು ರೈತ ಕುಟುಂಬಗಳನ್ನು ಒಕ್ಕಲೆಬ್ಬಿಸಿ ಬೀದಿಗೆ ತಳ್ಳುವುದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ರಾಮೇಗೌಡ ಮಾತನಾಡಿ, ಗೃಹ ಮಂಡಳಿಯು 50:50 ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ಜಾಗವನ್ನು ನೀಡುವುದಾಗಿ ರೈತರನ್ನು ಆಕರ್ಷಿಸುವ ಮಾತುಗಳನ್ನಾಡುತ್ತಿದೆ. ಇಂತಹ ಹಲವು ವಿಧವಾದ ಪರಿಹಾರಗಳನ್ನು ರೈತರ ಮುಂದಿಟ್ಟು ಭೂ&ಸ್ವಾಧಿನ ಮಾಡಿದ ಉದಾಹರಣೆಗಳು ನಂತರದ ರೈತರ ಪರಿಸ್ಥಿತಿ ನಮ್ಮ ಕಣ್ಣೆದುರಿಗಿದೆ. ಅಂತಹ ಪರಿಸ್ಥಿತಿಗೆ ತಳ್ಳಲ್ಪಡಲು ನಾವು ಸಿದ್ಧರಿಲ್ಲ. ನಮ್ಮ ಭೂಮಿ ಹೊರತು ನಮಗೆ ಬೇರೇನು ಬೇಡ ಎಂದು ತಿಳಿಸಲು ಒಗ್ಗಟ್ಟಿನಿಂದ ಮುಂದಾಗಿದ್ದೇವೆ. ಒಂದು ವೇಳೆ ಭೂ&ಸ್ವಾಧಿನಕ್ಕೆ ಮುಂದಾದರೆ ತೀವ್ರ ಹೋರಾಟಕ್ಕೆ ಇಳಿಯುತ್ತೇವೆ ಎಂದು ಎಚ್ಚರಿಕೆ ನೀಡಿದರು. ಮುಖಂಡರಾದ ನರಸಿಂಹಯ್ಯ, ರಾಮಕೃಷ್ಣಯ್ಯ, ಧಮೇಂರ್ದ್ರ, ಕೃಷ್ಣಮೂರ್ತಿ, ವಾಸುದೇವಮೂರ್ತಿ, ತಿರುಮಲೇಗೌಡ, ರಂಗನಾಥ ಸ್ವಾಮಿ, ನಂಜುಂಡೇಗೌಡ, ಕೃಷ್ಣಸ್ವಾಮಿ, ಚಿಕ್ಕಣ್ಣ, ಗಿರೀಶ, ಮೂರ್ತಿ, ಚಿಕ್ಕೇಗೌಡ, ಅಂಜನ್​ ಕುಮಾರ್​, ಶಂಕರ ಆಚಾರ್​, ಚಿಕ್ಕ ವೀರಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net