ಪ್ರಭಾರ ಮೇಲ್ವಿಚಾರಕಿ ನಿಯೋಜನೆಗೆ ವಿರೋಧ

Lingsugur Memeo
ಲಿಂಗಸುಗೂರು ಎಸಿ ಕಚೇರಿ ಗ್ರೇಡ್-2 ತಹಸೀಲ್ದಾರ್ ನಾಗರಾಜಗೆ ದಸಂಸ ತಾಲೂಕು ಘಟಕದ ಮುಖಂಡರು ಮಂಗಳವಾರ ಮನವಿ ಸಲ್ಲಿಸಿದರು. ಸಮಿತಿ ತಾಲೂಕು ಅಧ್ಯಕ್ಷ ಚನ್ನಬಸವ ಕುಂಟಿ, ಉಪಾಧ್ಯಕ್ಷ ನಾಗರಾಜು, ಶಿವಕುಮಾರ, ಸಂಗಪ್ಪ ಇದ್ದರು.
Published on

ಲಿಂಗಸುಗೂರು: ಪಟ್ಟಣದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಅಡುಗೆ ಸಿಬ್ಬಂದಿ ಪ್ರಭಾರ ಮೇಲ್ವಿಚಾರಕಿಯನ್ನು ಮೂಲ ಹುದ್ದೆಗೆ ವರ್ಗಾಯಿಸಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಚಂದ್ರಕಾಂತ ಕಾದ್ರೋಳ್ಳಿ ಬಣ) ತಾಲೂಕು ಗಟಕ ಮಂಗಳವಾರ ಎಸಿ ಕಚೇರಿ ಗ್ರೇಡ್-2 ತಹಸೀಲ್ದಾರ್ ನಾಗರಾಜಗೆ ಮನವಿ ಸಲ್ಲಿಸಿದರು.

ಮಸ್ಕಿಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಅಡುಗೆ ಕೆಲಸಗಾರರಾಗಿದ್ದ ಸುಧಾ ಚನ್ನಬಸಪ್ಪ ಅವರನ್ನು ಪಟ್ಟಣದ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ ಅಡುಗೆದಾರರ ಪ್ರಭಾರ ಮೇಲ್ವಿಚಾರಕಿಯನ್ನಾಗಿ ನಿಯೋಜನೆ ಮಾಡಲಾಗಿದೆ.

ಅಡುಗೆದಾರರ ಮೇಲ್ವಿಚಾರಕರಾಗಿ ಕೆಲಸ ಮಾಡಲು ಕನಿಷ್ಠ ಬಿ.ಇಡಿ ಅಥವಾ ಡಿ.ಇಡಿ ವಿದ್ಯಾರ್ಹತೆ ಇರಬೇಕೆಂಬ ನಿಯಮವಿದೆ. ಆದರೆ, ಸುಧಾ ಅವರು ಅಷ್ಟು ಓದಿಲ್ಲ. ಕೂಡಲೇ ಪ್ರಭಾರ ಹುದ್ದೆ ರದ್ದುಗೊಳಿಸಿ ಮೂಲ ಹುದ್ದೆಗೆ ವರ್ಗಾಯಿಸಬೇಕೆಂದು ಒತ್ತಾಯಿಸಿದರು. ಸಮಿತಿ ತಾಲೂಕು ಅಧ್ಯಕ್ಷ ಚನ್ನಬಸವ ಕುಂಟಿ, ಉಪಾಧ್ಯಕ್ಷ ನಾಗರಾಜು, ಶಿವಕುಮಾರ, ಸಂಗಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net