ನದಿ ಜೋಡಣೆ ಯೋಜನೆಗೆ ವಿರೋಧ

Opposition to river linking project
ಯಲ್ಲಾಪುರದ ಹುಲ್ಲೋರಮನೆಯ ಗಜಾನನ ಮಾರುತಿ ದೇವಸ್ಥಾನದ ಸಭಾಭವನದಲ್ಲಿ ಎಲ್ಎಸ್‌ಎಂಪಿ ಸೊಸೈಟಿಯ 75 ನೇ ವಾರ್ಷಿಕ ಸರ್ವಸಾಧಾರಣ ಸಭೆ ನಡೆಯಿತು. ಅಧ್ಯಕ್ಷ ನಾಗರಾಜ ಕವಡಿಕೆರೆ, ಉಪಾಧ್ಯಕ್ಷ ಟಿ.ಆರ್.ಹೆಗಡೆ, ನಿರ್ದೇಶಕರಾದ ತಿಮ್ಮಣ್ಣ ಘಟ್ಟಿ, ಸುಬ್ಬಣ್ಣ ದಾನ್ಯಾನಕೊಪ್ಪ, ನರಸಿಂಹ ಕೋಣೆಮನೆ, ಆರ್.ಎಸ್. ಭಟ್ಟ ಇತರರಿದ್ದರು.
Published on

 ಯಲ್ಲಾಪುರ: ಪಟ್ಟಣದ ಹುಲ್ಲೋರಮನೆಯ ಗಜಾನನ ಮಾರುತಿ ದೇವಸ್ಥಾನದ ಸಭಾಭವನದಲ್ಲಿ ಎಲ್ಎಸ್‌ಎಂಪಿ ಸೊಸೈಟಿಯ 75 ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಬೇಡ್ತಿ-ವರದಾ ನದಿ ಜೋಡಣೆ ಯೋಜನೆಯನ್ನು ವಿರೋಧಿಸಿ ನಿರ್ಣಯ ಕೈಗೊಳ್ಳಲಾಯಿತು.

ಯೋಜನೆ ಅನುಷ್ಠಾನದಿಂದ 2000 ಎಕರೆ ಅರಣ್ಯನಾಶ, ರೈತರ ಜಮೀನು, ಬೆಟ್ಟ ನಾಶವಾಗಲಿದೆ ಎಂದು ತಜ್ಞರು ವರದಿ ನೀಡಿದ್ದಾರೆ. ಯೋಜನೆಯು ಪಶ್ಚಿಮ ಘಟ್ಟಕ್ಕೆ ಮಾರಕವಾಗಲಿದೆ. ಹಾಗಾಗಿ ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಬಿಡಬೇಕೆಂದು ಸಭೆಯಲ್ಲಿ ಆಗ್ರಹಿಸಲಾಯಿತು.

ಎಲ್ಎಸ್‌ಎಂಪಿ ಸೊಸೈಟಿ ಅಧ್ಯಕ್ಷ ನಾಗರಾಜ ಕವಡಿಕೆರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ವರ್ಷದಿಂದ ವರ್ಷಕ್ಕೆ ಪ್ರಗತಿ ಕಾಣುತ್ತಿದ್ದು, ಎಲ್ಲ ಸದಸ್ಯರ ಸಹಕಾರ ಪ್ರೋತ್ಸಾಹವೇ ಇದಕ್ಕೆ ಕಾರಣ ಎಂದರು.

ಸಂಘದ ಪ್ರಗತಿ ಕುರಿತಂತೆ ಸದಸ್ಯರು ಸಲಹೆ-ಸೂಚನೆಗಳನ್ನು ನೀಡಿದರು. ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ಯುಕೆ ಸೌಹಾರ್ದ ಸಹಕಾರಿಯ ಅಧ್ಯಕ್ಷ ಪ್ರಮೋದ ಹೆಗಡೆ, ಹಿರಿಯ ಪತ್ರಕರ್ತ ಹರಿಪ್ರಕಾಶ ಕೋಣೆಮನೆ ಮಾತನಾಡಿದರು.

ಟಿಎಂಎಸ್ ನಿರ್ದೇಶಕ ವೆಂಕಟರಮಣ ಭಟ್ಟ ಕಿರಕುಂಭತ್ತಿ, ಉಪಾಧ್ಯಕ್ಷ ಟಿ.ಆರ್. ಹೆಗಡೆ, ನಿರ್ದೇಶಕರಾದ ಟಿ.ಆರ್. ಹೆಗಡೆ, ಆರ್.ಎಸ್ ಭಟ್ಟ, ನರಸಿಂಹ ಕೋಣೆಮನೆ, ತಿಮ್ಮಣ್ಣ ಘಟ್ಟಿ, ಸುಬ್ರಾಯ ಭಟ್ಟ ದಾನ್ಯಾನಕೊಪ್ಪ, ಅಪ್ಪು ಆಚಾರಿ, ಗಾಬ್ರಿಯಲ್ ಫರ್ನಾಂಡೀಸ್, ಹನುಮಂತ ಕೊರವರ್, ಎಂ.ಎನ್. ಭಟ್ಟ, ಶ್ಯಾಮಲಾ ಹೆಗಡೆ, ಪ್ರಭಾ ಭಾಗ್ವತ, ಶಕುಂತಲಾ ಸಿದ್ದಿ, ಗೋಪಾಲಕೃಷ್ಣ ಭಟ್ಟ ಬಾಳೆಗದ್ದೆ, ಮಹಾಬಲೇಶ್ವರ ಭಟ್ಟ ಮಾಲದಮನೆ, ರಾಘವೇಂದ್ರ ಭಟ್ಟ ಕಬ್ಬಿನಗದ್ದೆ, ಗಣಪತಿ ಭಟ್ಟ ಕವಡಿಕೆರೆ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಾಹಕ ಎಂ.ಎಸ್. ಹೆಗಡೆ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net