ಮತಾಂತರ ನಿಷೇಧ ಕಾನೂನು ಹಿಂಪಡೆಗೆ ವಿರೋಧ

HKR- Matantara
Published on

ಹಿರೇಕೆರೂರ: ಕಾಂಗ್ರೆಸ್ ಸರ್ಕಾರ ಈ ಹಿಂದೆ ಜಾರಿಯಲ್ಲಿದ್ದ ಮತಾಂತರ ನಿಷೇಧ ಕಾನೂನನ್ನು ಸಚಿವ ಸಂಪುಟದಲ್ಲಿ ಹಿಂಪಡೆಯಲು ತೀರ್ಮಾನಿಸಿರುವುದನ್ನು ವಿರೋಧಿಸಿ ವಿಶ್ವ ಹಿಂದು ಪರಿಷತ್ ತಾಲೂಕು ಘಟಕದಿಂದ ಗುರುವಾರ ಪಟ್ಟಣದ ತಹಸೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.


ಜಿಲ್ಲಾ ಬಜರಂಗದಳ ಸಂಚಾಲಕ ಅನಿಲ ಹಲವಾಗಿಲ ಮಾತನಾಡಿ, ಭಾರತ ದೇಶ ಹಿಂದು ರಾಷ್ಟ್ರವಾಗಿದ್ದು, ಇಲ್ಲಿ ಹಿಂದುಗಳೊಡನೆ ಅನ್ಯ ಧರ್ಮೀಯರು ಸಹಬಾಳ್ವೆ ಮಾಡಲು ಸಂವಿಧಾನ ಅವಕಾಶ ಕಲ್ಪಿಸಿಕೊಟ್ಟಿದೆ. ಹಿಂದುಗಳಿಗೆ ಆಸೆ- ಆಮಿಷ ತೋರಿಸಿ ಅಥವಾ ಹೆದರಿಸಿ ಬಲವಂತವಾಗಿ ಮತಾಂತರ ಮಾಡುವುದನ್ನು ನಾವು ಖಂಡಿಸುತ್ತೇವೆ ಎಂದರು.


ನಂತರ ತಹಸೀಲ್ದಾರ್ ಡಾ. ಪ್ರಭಾಕರಗೌಡ ಎಚ್., ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪದಾಧಿಕಾರಿಗಳಾದ ವಿನಾಯಕ್ ಕರ್ನೂಲ್, ಸಂತೋಷ ಬೆಳಗುತ್ತಿ, ಬಾಲಾಜಿ.ಆರ್.ಬಿ., ಶರತ್ ಕಾಯಕದ, ಶರತ್ ರಾಯ್ಕರ್, ಪ್ರವೀಣ ವಿ.ಟಿ., ಹರೀಶ ಬಣಕಾರ, ಮಲ್ಲಿಕಾರ್ಜುನ, ರಾಕೇಶ, ಭರತ್ ಹಿರೇಕೆರೂರ, ಚಂದನ್ ತಿಪ್ಪಶೆಟ್ಟಿ, ಗುರು ಕರಡಿ, ಗಣೇಶ ಕರಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net