

ಬೆಂಗಳೂರು: ವಿದೇಶಿದಿಂದ ಕರೆತರುವವರನ್ನು ಅವರವರ ತಾಲೂಕುಗಳಲ್ಲೇ ಕ್ವಾರಂಟೈನ್ ಮಾಡಬೇಕು.ಹಾಗೆಯೇ ಜಿಲ್ಲೆಯನ್ನು ಹಸಿರುವಲಯವಾಗಿ ೋಷಿಸುವಂತೆ ಸರ್ಕಾರಕ್ಕೆ ವರದಿ ಮಾಡಬೇಕು ಎಂದು ಜಿಪಂ ಅಧ್ಯಕ್ಷೆ ಜಯಮ್ಮ ಲಕ್ಷ್ಮಿನಾರಾಯಣ್ ಹೇಳಿದ್ದಾರೆ.
ಶುಕ್ರವಾರ ಜಿಲ್ಲಾಡಳಿತ ಭವನದ ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಪ್ರಸ್ತುತ ಯಾವುದೇ ಕರೊನಾ ಪ್ರಕರಣವಿಲ್ಲ. ನಾಲ್ಕೂ ತಾಲೂಕುಗಳು ಕರೊನಾ ಮುಕ್ತವಾಗಿದೆ. ಆದರೂ ಕೇಂದ್ರ ಸರ್ಕಾರ ಯಾವ ಮಾನದಂಡದ ಮೇಲೆ ಜಿಲ್ಲೆಯನ್ನು ಕೆಂಪುವಲಯ ಎಂದು ೋಷಿಸಿದೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಿದೇಶಗಳಿಂದ ರಾಜ್ಯಕ್ಕೆ ಬರವಂತವರನ್ನು ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲ ಪ್ರದೇಶದಲ್ಲಿ ಕ್ವಾರಂಟೈನ್ ಮಾಡುವ ನಿರ್ಧಾರ ಬದಲಿಸಬೇಕು ಎಂದು ಒತ್ತಾಯಿಸಿದರು.