ಕಸ ವಿಲೇವಾರಿಗೆ ವಿರೋಧ

sri westa
ಮೆಣಸೆ ಗ್ರಾಪಂ ಕುಂತೂರು ಗ್ರಾಮದ ರಂಜದತೋಟದಲ್ಲಿ ಕಸದರಾಶಿ.
Published on

ಶೃಂಗೇರಿ: ಹಲವು ವರ್ಷಗಳಿಂದ ಮೆಣಸೆ ಗ್ರಾಪಂ ವ್ಯಾಪ್ತಿಯ ತ್ಯಾಜ್ಯವನ್ನು ಕುಂತೂರು ಗ್ರಾಮದ ರಂಜದತೋಟದ ಸರ್ವೇ ನಂ.75*58ರಲ್ಲಿ ಅನಧಿಕೃತವಾಗಿ ಕಸ ವಿಲೇವಾರಿಮಾಡುತ್ತಿರುವುದನ್ನು ವಿರೋಧಿಸಿ ಸ್ಥಳೀಯರು ಮಂಗಳವಾರ ಕಸದ ವಾಹನ ತಡೆಗಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ಕಸವನ್ನು ತಿಂದ ಬಹಳಷ್ಟು ಜಾನುವಾರು ಮೃತಪಟ್ಟಿವೆ. ಮಳೆ ನೀರಿನಲ್ಲಿ ಕಸ ಕೊಚ್ಚಿಕೊಂಡು ಬಂದು ತೋಟ, ಜಮೀನು ಹಾಗೂ ಕುಡಿಯುವ ನೀರಿನ ಮೂಲಗಳಿಗೆ ಸೇರಿಕೊಳ್ಳುತ್ತಿದೆ. ಕಸ ವಿಲೇವಾರಿ ಮಾಡಬಾರದು ಎಂದು ಆಗ್ರಹಿಸಿದರು. ಸ್ಥಳಕ್ಕೆ ಆಗಮಿಸಿದ ಮೆಣಸೆ ಗ್ರಾಪಂ ಜನಪ್ರತಿನಿಧಿಗಳು ಕಸವನ್ನು ಸ್ಥಳಕ್ಕೆ ತರುವುದಿಲ್ಲ ಎಂದು ಭರವಸೆ ನೀಡಿದರು. ಸ್ಥಳೀಯರಾದ ಅರುಣಾ ಭಟ್, ಉದಯ್ ಭಟ್, ಶಶಿಕ್, ಲಕ್ಷಣ, ರತ್ನಾಕರ್ ಕುಂತೂರು, ಅವಿನಾಶ್ ಹೊಸಕೊಪ್ಪ, ಜನಪ್ರತಿನಿಧಿಗಳಾದ ಕವಿತಾ ಕಣದಮನೆ, ಶ್ಯಾಮಣ್ಣ ಹಿಂಡ್ರವಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net