ಅವೈಜ್ಞಾನಿಕ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ವಿರೋಧ

kls1 (3) (1)
Published on

ಕಳಸ: ಕಳಸ ತಾಲೂಕು ಕೇಂದ್ರವಾಗಿ ಘೋಷಣೆಯಾಗಿ ಐದು ವರ್ಷಗಳ ನಂತರ ಪಟ್ಟಣದಲ್ಲಿ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಸಿದ್ದತೆ ಆರಂಭವಾಗಿದೆ. ಅದರೆ ಆರಮಭದಲ್ಲೇ ಇದಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗುತ್ತಿದೆ.

ಈ ಹಿಂದೆ ಇದ್ದ ನಾಡ ಕಚೇರಿ ಹಾಗೂ ತಾಲೂಕು ಕಚೇರಿಯನ್ನು ಅವೈಜ್ಞಾನಿಕವಾಗಿ ತೆರವುಗೊಳಿಸಲಾಗಿದೆ ಹಾಗೂ ಈಗ ನಿರ್ಮಾಣಕ್ಕೆ ಮುಂದಾಗಿರುವ ಮಿನಿ ವಿಧಾನಸೌಧ ಕಟ್ಟಡವೂ ಕೂಡ ಅವೈಜ್ಷಾನಿಕವಾಗಿ ನಿರ್ಮಾಣ ಮಾಡಲಾಗುತ್ತಿದೆ. ಇದೊಂದು ಹಣ ಕೊಳ್ಳೆಹೊಡೆಯುವ ತಂತ್ರ ಎಂದು ಆರೋಪಿಸಲಾಗುತ್ತಿದೆ. ಈ ಬಗ್ಗೆ ಕಳಸ ಗ್ರಾಮಸಭೆಯಲ್ಲಿ ಪಂಚಾಯಿತಿ ಸದಸ್ಯ ಸಂತೋಷ್ ಹಿನಾರಿ ಧ್ವನಿ ಎತ್ತಿ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು, ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳು, ಪಂಚಾಯಿತಿ ಸದಸ್ಯರು ಅಧಿಕಾರಿಗಳ ನಡೆಗೆ ವಿರೋಧ ವ್ಯಕ್ತಪಡಿಸಿ ನಿರ್ಣಯ ಕೈಗೊಳ್ಳಲಾಗಿದೆ.

ಈ ಬಗ್ಗೆ ಈಗಾಗಲೇ ಸಿಪಿಐನಿಂದ ಕಂದಾಯ ಸಚಿವ ಕೃಷ್ಣೇಭೈರೇಗೌಡರಿಗೆ ಪತ್ರ ಬರೆದಿದ್ದು, ಒಂದು ಎಕರೆ ಪ್ರದೇಶದಲ್ಲಿ ಈ ಹಿಂದೆ ಸುಸಜ್ಜಿತವಾದ ತಾಲೂಕು ಕಚೇರಿ ಕಟ್ಟಡ ಜತೆಗೆ ನಾಡ ಕಚೇರಿ ಕಟ್ಟಡ, ಸಭೆ ನಡೆಸಲು ಸಣ್ಣ ಸಂಭಾಂಗಣ, ನೌಕರರ ಒಂದು ಕಟ್ಟಡ ಹಾಗು ನೀರುಗಂಟಿಯ ವಾಸದ ಮನೆ ಸೇರಿ ಐದೂ ಕಟ್ಟಡಗಳಿದ್ದವು. ಈ ಕಟ್ಟಡಗಳು ಮರ ಮತ್ತು ಹಂಚಿನಿಂದ ನಿರ್ಮಿಸಿದ ಈ ಕಟ್ಟಡಗಳು ಹಿಂದೆ ಸರ್ಕಾರಿ ಪ್ರವಾಸಿ ಮಂದಿರಗಳಾಗಿದ್ದವು. ಸರ್ಕಾರದಿಂದ ಅನುಮತಿ ಪಡೆದು ಕಂದಾಯ ಇಲಾಖೆ, ನಾಡ ಕಚೇರಿಗೆ ನೀಡಲಾಗಿತ್ತು. ಇನ್ನೊಂದು ಕಟ್ಟಡದಲ್ಲಿ ಗ್ರಾಪಂ ಕಚೇರಿ ನಡೆಸಲಾಗುತ್ತಿತ್ತು. ನಂತರ ಗ್ರಾಪಂಗೆ ನೂತನ ಕಟ್ಟಣಕ್ಕೆ ವರ್ಗಾವಣೆ ನಂತರ ಆ ಕಟ್ಟಡವನ್ನು ಕೂಡಾ ಕಂದಾಯ ಇಲಾಖೆಗೆ ಬಿಟ್ಟುಕೊಡಲಾಗಿತ್ತು.

ನೂತನ ವಿಧಾನಸೌಧ ನಿರ್ಮಾಣಕ್ಕೆ ಐದು ಕೋಟಿ ರೂ. ಮಂಜೂರಾಗಿದ್ದು, ಈಗ ನಿರ್ಮಾಣಕ್ಕೆ ಮುಂದಾಗಿರುವ ಕಳಸ ತಾಲೂಕು ಸೌಧದ ನಕ್ಷೆಯನ್ನು ಗಮನಿಸಿದರೆ ಇದು ತುರ್ತು ಹಣ ಕೊಳ್ಳೆ ಹೊಡೆಯಲು ಮಾಡಿದ ಯೋಜನೆಯಂತೆ ಕಾಣುತ್ತಿದೆ. ಈಗಿನ ನಕ್ಷೆಯನ್ನು ಅಂತಿಮಗೊಳಿಸಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ವೈಜ್ಞಾನಿಕವಾಗಿ ಕಟ್ಟಡ ನಿರ್ಮಾಣ ಮಾಡದಿದ್ದರೆ ಮುಂದೆ ತೊಂದರೆಯಾಗಲಿದೆ. ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವ ಪ್ರದೇಶದ ಮುಖ್ಯ ರಸ್ತೆಯಿಂದ ತಳಭಾಗದಲ್ಲಿದ್ದು, ರಸ್ತೆ ಮಟ್ಟಕ್ಕೆ ಮಣ್ಣನು ಸಮತಟ್ಟುಗೊಳಿಸಿ ಮೂರು ಅಂತಸ್ತಿನ ಕಟ್ಟಡ ನಿರ್ಮಿಸಿದರೆ ಪಾಕಿರ್ಂಗ್ ಅನುಕೂವಾಗಲಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net