ತಮಿಳುನಾಡಿಗೆ ಕಾವೇರಿ ನೀರು ಹರಿಸಲು ವಿರೋಧ

05 LXR 4
Published on

ಲಕ್ಷ್ಮೇಶ್ವರ: ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗದ ವತಿಯಿಂದ ಪಟ್ಟಣದಲ್ಲಿ ಮಂಗಳವಾರ ತಹಸೀಲ್ದಾರ ಕೆ. ಆನಂದಶೀಲ್ ಅವರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯದಲ್ಲಿ ಮಳೆಯಾಗಿಲ್ಲ. ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಮಟ್ಟವು ಕುಸಿತವಾಗಿದೆ, ಆದರೂ ಸಹ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದು ರಾಜ್ಯದ ಜನತೆಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಕರವೇ ಸ್ವಾಭಿಮಾನಿ ಬಣದ ಪ್ರಮುಖರು ಆರೋಪಿಸಿದರು.

ತಾಲೂಕಾಧ್ಯಕ್ಷ ರವಿ ಲಿಂಗಶೆಟ್ಟಿ, ನಗರ ಘಟಕದ ಅಧ್ಯಕ್ಷ ಮಂಜುನಾಥ ಚಂದರಗಿ, ಸಾವಿತ್ರಿ ಕುರಿ, ಪುಷ್ಪ ಅಣ್ಣಿಗೇರಿ, ಶಿವಣ್ಣ, ಗಿಡಿಬಿಡಿ, ಸಿ.ಆರ್. ಚಾವಡಿ, ಮಾಂತೇಶ ಖಂಡೋಜಿ, ಲಕ್ಷ್ಮೀ ಕಲಿವಾಳ, ರಾಜು ಹಾದಿಮನಿ, ರಾಜೇಶ್ವರಿ ಮುಂಗೋಡಿ, ಬಸವರಾಜ ಗಿಡಿಬಿಡಿ (ದೇಸಾಯಿ), ಪ್ರವೀಣ ಕೊತಲಚಿಂತಿ, ಭೀಮಣ್ಣ ಶಿಶ್ಲೇಪನವರ, ಪ್ರದೀಶ ಜನಿವಾರದ, ಮಲ್ಲಿಕಾರ್ಜುನ ಹಡಪದ, ನೂರಹದ ಲೋಹಾರ, ಮಲ್ಲಿಕಾರ್ಜುನ ಉಣಕಲ್ಲ, ಪ್ರವೀಣ ತಡಸದ, ಶನಿಮಂತ ಪಡಗೇರಿ, ಮಂಜಯ್ಯ ಕಲಕೇರಿಮಠ, ಶಿವನಗೌಡ ಹುಲ್ಲೆಪ್ಪಗೌಡ, ಮಂಜುನಾಥ ಲಿಂಗಶೆಟ್ಟಿ, ಅನಂದ ಅಮರಶೆಟ್ಟಿ, ಜಮಾಲಸಾಬ ನದಾಪ, ಪ್ರಕಾಶ ಪಾಸ್ತೆ, ಈರಯ್ಯ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net