ರಸಗೊಬ್ಬರ ಚೀಲದಲ್ಲಿ ಬಿಜೆಪಿ ಚಿಹ್ನೆಗೆ ವಿರೋಧ

29Kush04
Published on


ಕುಶಾಲನಗರ : ಕುಶಾಲನಗರದ ನಂ.387 ನೇ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತದ ವಾರ್ಷಿಕ ಮಹಾಸಭೆ ಗುರುವಾರ ರೈತ ಸಹಕಾರ ಭವನದಲ್ಲಿ ಅಧ್ಯಕ್ಷ ಎಂ.ಎನ್.ಕುಮಾರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕುಶಾಲನಗರದ ಎಪಿಸಿಎಂಎಸ್ ಯಲ್ಲಿ ಮಾರಾಟ ಮಾಡುತ್ತಿರುವ ರಸಗೊಬ್ಬರ ಚೀಲದಲ್ಲಿ ನಮೂದಿಸಿರುವ ಹೆಸರು ಬಿಜೆಪಿ ಪಕ್ಷದ ಚಿಹ್ನೆ ಹೊಲುತ್ತಿರುವುದಕ್ಕೆ ಸದಸ್ಯರಾದ ವಿ.ಪಿ.ಶಶಿಧರ್ ಮತ್ತು ಕೆ.ಪಿ.ಚಂದ್ರಕಲಾ ವಿರೋಧಿಸಿ, ತೀವ್ರ ಚರ್ಚೆ ಮತ್ತು ವಾಗ್ವಾದಕ್ಕೆ ಕಾರಣವಾಯಿತು.

ಮಹಾಸಭೆಯ ಆರಂಭದಲ್ಲೇ ಚಂದ್ರಕಲಾ, ಗೊಬ್ಬರದ ಚೀಲದಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನುರ್ವಾರಕ್ ಪರಿಯೋಜನಾ ಎಂದು ಹೆಸರಿದೆ. ಅದು ಬಿಜೆಪಿ ಹೆಸರನ್ನು ಹೊಲುತ್ತಿದೆ ಎಂದು ಖಾಲಿ ಚೀಲ ಹಿಡಿದು ತೋರಿಸಿ, ಆಕ್ಷೇಪ ವ್ಯಕ್ತಪಡಿಸಿದರು. ಬೇರೆಡೆಯಕ್ಕಿಂತ ಒಂದು ಚೀಲಕ್ಕೆ 20 ರೂ. ದರ ನಿಗದಿ ಮಾಡಲಾಗಿದೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರದ ಬಿಜೆಪಿ ವತಿಯಿಂದ ಬ್ಯಾಗ್ ಒಂದಕ್ಕೆ 200 ರೂ. ಕಡಿಮೆ ಮಾಡಿ ಕೊಡಿಸಿ ಎಂದು ಸಲಹೆ ನೀಡಿದರು. ಆಗ ಎಂ.ಎನ್.ಕುಮಾರ್ ಮಾತನಾಡಿ, ಈಗ ಆಗಿರುವ ವಿಚಾರವನ್ನು ತಲುಪಿಸಬೇಕಾದ ಜಾಗಕ್ಕೆ ತಲುಪಿಸಿ ಸರಿಪಡಿಸಲು ಹೇಳುತ್ತೇವೆ ಎಂದರು.

ಸಂಸ್ಥೆಯು ಕುಶಾಲನಗರ, ಸುಂಟಿಕೊಪ್ಪ ವ್ಯಾಪ್ತಿಹೊಂದಿದೆ. 1972 ಸದಸ್ಯರನ್ನು ಹೊಂದಿದ್ದು, ಒಟ್ಟು 18.41 ಲಕ್ಷ ರೂ. ಪಾಲು ಬಂಡವಾಳವಿದೆ. ಸಂಸ್ಥೆಯು ವಿವಿಧ ವಾಣಿಜ್ಯ ಸಂಕೀರ್ಣಗಳ ಮೂಲಕ ಸದಸ್ಯರಿಗೆ ಮತ್ತು ಸದಸ್ಯರೇತರಿಗೆ ನಿಯಂತ್ರಿತ ಮತ್ತು ಅನಿಯಂತ್ರಿತ ಸಾಮಗ್ರಿ, ಗ್ರಾಹಕ ವಸ್ತು, ಗೊಬ್ಬರ, ಕ್ರಿಮಿನಾಶಕ, ಕೃಷಿಗೆ ಸಂಬಂಧಿಸಿದ ವ್ಯಾಪಾರ, ಔಷಧ ಅಂಗಡಿ ಮತ್ತು 2 ಸಭಾಂಗಣಗಳಿಂದ ಒಟ್ಟು ವಾರ್ಷಿಕ 7.88 ಕೋಟಿ ರೂ. ಬರುತ್ತದೆ. ಠೇವಣಿ 7.72 ಕೋಟಿ ರೂ. ಇದೆ. 7.15 ಕೋಟಿ ರೂ.ಗಳನ್ನು ವಿವಿಧ ರೂಪದಲ್ಲಿ ಸಾಲನೀಡಲಾಗಿದೆ. ಹೂಡಿಕೆ 4 ಕೋಟಿ ರೂ. ಮಾಡಲಾಗಿದೆ ಮತ್ತು ನಿಧಿಗಳು 6.84 ಕೋಟಿ ರೂ. ಯೊಂದಿಗೆ ಸಂಸ್ಥೆಯು ಈ ಬಾರಿ 89.43 ಕೋಟಿ ರೂ. ವಹಿವಾಟು ನಡೆಸಿದೆ. 37.43 ಲಕ್ಷ ಲಾಭಗಳಿಸಿದೆ. ಡಿವಿಡೆಂಡ್ ಶೇ. 20ರಷ್ಟು ಇದೆ ಘೋಷಣೆ ಮಾಡಲಾಯಿತು. ಮಹಾಸಭೆಯಲ್ಲಿ ಕೆಲವು ಸಾಲ ವಸೂಲಾತಿ ಬಗ್ಗೆಯೂ ಚರ್ಚೆ ನಡೆಸಲಾಯಿತು.

ಈಗಿರುವ ವಾಣಿಜ್ಯ ಕಟ್ಟಡ ಶಿಥಿಲಾವಸ್ಥೆಯಲ್ಲಿರುವ ಕಾರಣ ಅದನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡುವ ಉದ್ದೇಶವನ್ನು ಅಧ್ಯಕ್ಷರು ಸಭೆಯಲ್ಲಿ ಮಂಡಿಸಿದರು. ಅಂದಾಜು ಬಜೆಟ್ ತಯಾರು ಮಾಡಿಕೊಂಡು ಇನ್ನೊಂದು ಸಭೆ ನಡೆಸಿ ಅನುಮೋದನೆ ಪಡೆಯಲು ಸದಸ್ಯ ವಿ.ಪಿ.ಶಶಿಧರ್ ಸಲಹೆ ನೀಡಿದರು. ಸಂಸ್ಥೆಯ ಮಾಜಿ ಅಧ್ಯಕ್ಷ ಚಂದ್ರಪ್ಪ ಮಾತನಾಡಿ, ಕೃಷಿ ವಾಹನಗಳ ಮೇಲಿನ ಬಡ್ಡಿ ಕಡಿಮೆ ಮಾಡಲು ಕೇಳಿಕೊಂಡರು.

ಉಪಾಧ್ಯಕ್ಷ ಎಚ್.ಜೆ.ದೊಡ್ಡಯ್ಯ, ನಿರ್ದೇಶಕರಾದ ಕೆ.ಎಂ.ಪ್ರಸನ್ನ, ಎ.ಪಿ.ನೀಲಮ್ಮ, ಆರ್.ಕೆ.ಚಂದ್ರ, ಕೆ.ಎಸ್.ರತೀಶ, ಎಚ್.ಟಿ.ಮೋಹನ್, ಪಿ.ಪಿ.ತಿಲಕ್ ಕುಮಾರ್, ಎಚ್.ಟಿ.ನಾಗೇಶ್, ಸಿ.ಜಿ.ಲತಾ, ಮೊಹಮ್ಮದ್ ಸಾಲೇಹ್, ಸಿ.ಎನ್.ಲೋಕೇಶ್ ಇತರರು ಇದ್ದರು.

29ಏ02
ಕುಶಾಲನಗರದ ನಂ 387 ನೇ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತದ ವಾರ್ಷಿಕ ಮಹಾಸಭೆ ಗುರುವಾರ ರೈತ ಸಹಕಾರ ಭವನದಲ್ಲಿ ಅಧ್ಯಕ್ಷ ಎಂ.ಎನ್.ಕುಮಾರಪ್ಪ ಅಧ್ಯಕ್ಷತೆಯಲ್ಲಿ ಜರುಗಿತ್ತು. ಹೆಚ್.ಜೆ.ದೊಡ್ಡಯ್ಯ, ನಿರ್ದೇಶಕರಾದ ಕೆ.ಎಂ.ಪ್ರಸನ್ನ, ಎ.ಪಿ.ನೀಲಮ್ಮ, ಆರ್.ಕೆ.ಚಂದ್ರ, ಕೆ.ಎಸ್.ರತೀಶ, ಹೆಚ್.ಟಿ.ಮೋಹನ್, ಪಿ.ಪಿ.ತಿಲಕ್ ಕುಮಾರ್, ಹೆಚ್.ಟಿ.ನಾಗೇಶ್, ಸಿ.ಜಿ.ಲತಾ, ಮೊಹಮ್ಮದ್ ಸಾಲೇಹ್, ಸಿ.ಎನ್.ಲೋಕೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net