

ತುಮಕೂರು: ನಗರದ ಕಂಟೇನ್ಮೆಂಟ್ ವಲಯ ಎಂದು ಗುರುತಿಸಿರುವ ಪಿಎಚ್ ಕಾಲನಿಯ ಜನರು ಶನಿವಾರ ಪ್ರತಿಭಟನೆ ನಡೆಸಲು
ಮುಂದಾಗಿದ್ದು, ಪಿಎಸ್‌ಐ ಸಮಯಪ್ರಜ್ಞೆಯಿಂದ ಪಾದರಾಯನಪುರ ಮಾದರಿ ಘಟನೆ ನಡೆಯುವುದು ತಪ್ಪಿದೆ.
ಗುಜರಾತ್‌ನಿಂದ ತುಮಕೂರಿಗೆ ಬಂದು ಪೂರ್‌ಹೌಸ್ ಕಾಲನಿಯಲ್ಲಿದ್ದ ತಬ್ಲಿಘಿಯೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಕಂಟೇನ್ಮೆಂಟ್ ವಲಯ ಎಂದು ಗುರುತಿಸಲಾಗಿತ್ತು, ಆದರೆ ಕಾಲನಿಯಲ್ಲಿ ನೂರಾರು ಜನರು ಶನಿವಾರ ದಿಢೀರ್ ಪ್ರತಿಭಟನೆ ನಡೆಸಿರುವ ವಿಡಿಯೋ ವೈರಲ್ ಆಗಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸುಮ್ಮನೆ ನಮ್ಮನ್ನು ಮನೆಯಲ್ಲಿ ಕೂಡಿ ಹಾಕಲಾಗಿದೆ, ತಿನ್ನಲು ಅನ್ನ ಸಿಗುತ್ತಿಲ್ಲ ಎಂದು ಮಹಿಳೆಯರು ಆಕ್ರೋಶ ಹೊರಹಾಕಿದ್ದು ಪಿಎಸ್‌ಐ ನವೀನ್ ಎಲ್ಲರನ್ನೂ ಸಮಾಧಾನಪಡಿಸುವಲ್ಲಿ ಯಶಸ್ವಿಯಾಗಿದ್ದರೂ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ.
ಪಿ.ಎಚ್.ಕಾಲನಿಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ಜಿಲ್ಲಾಡಳಿತ ಬಂದ್ ಮಾಡಿದೆ, ಆದರೆ ಒಳಗಿರುವವರಿಗೆ ಸರಿಯಾಗಿ ಆಹಾರ ಪದಾರ್ಥಗಳ ಪೂರೈಕೆ ಮಾಡುತ್ತಿಲ್ಲ ಎಂಬುದು ಸ್ಥಳೀಯರ ಆರೋಪ. ಆಹಾರ ಪದಾರ್ಥಗಳನ್ನು ಪೂರೈಕೆ ಮಾಡಲಾಗಿದೆಯಾದರೂ ಅದಕ್ಕೆ ಬೇಕಾದ ಪೂರಕ ಪದಾರ್ಥ, ಔಷಧ, ಮಕ್ಕಳಿಗೆ ಅಗತ್ಯವಾದ ಆಹಾರ, ತರಕಾರಿ, ಹಾಲು ಇನ್ನಿತರ ಪದಾರ್ಥಗಳ ಅಭಾವದಿಂದ ಬೀದಿಗಳಿದು ಆಕ್ರೋಶ ಹೊರಹಾಕಿದ್ದಾರೆ. ಹೆಸರೇ ಸೂಚಿಸುವಂತೆ ಪೂರ್‌ಹೌಸ್(ಬಡವರ ಮನೆ) ಕಾಲನಿಯಲ್ಲಿ ಬಹುತೇಕ ಕೂಲಿ ಕಾರ್ಮಿಕರು, ಸಣ್ಣ ಪುಟ್ಟ ವ್ಯಾಪಾರಿಗಳೇ ವಾಸವಾಗಿದ್ದು ಸೀಲ್‌ಡೌನ್ ಸಹಜವಾಗಿಯೇ ಆತಂಕ ಮೂಡಿಸಿದೆ.
ತುತ್ತು ಊಟಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹಸಿವಿನ ಆಕ್ರೋಶದ ಕಟ್ಟೆಯೊಡೆಯುತ್ತಿದ್ದು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ. ಕೋವಿಡ್-19 ಪರೀಕ್ಷೆಗೆ ಸಹಕಾರ ನೀಡುತ್ತಿರುವ ಇಲ್ಲಿನ ಸ್ಥಳೀಯರಿಗೆ ಹೊಟ್ಟೆ ತುಂಬಿಸಿಕೊಳ್ಳುವುದು ಸವಾಲಾಗಿದೆ. ಅಟೋಮೊಬೈಲ್, ಗ್ಯಾರೇಜ್, ಗುಜರಿ ಅಂಗಡಿ, ಸಣ್ಣಪುಟ್ಟ ವ್ಯಾಪಾರ ನಡೆಸುತ್ತಿರುವವರಿಗೆ ಊಟದ ವ್ಯವಸ್ಥೆ ಮಾಡುವ ಜವಾಬ್ದಾರಿ ಜಿಲ್ಲಾಡಳಿತದ ಮೇಲಿದೆ.
ರೆಡ್‌ಕ್ರಾಸ್ ಸಂಸ್ಥೆ ಸೇರಿ ವಿವಿಧ ಸಂಘ-ಸಂಸ್ಥೆಗಳ ನೆರವಿನಿಂದ ಜನರಿಗೆ ಆಹಾರ ಪದಾರ್ಥಗಳನ್ನು ಪೂರೈಸಲಾಗುತ್ತಿದೆ. ಸೀಲ್‌ಡೌನ್ ತೆರವುಗೊಳಿಸಿ ಎಂಬುದು ಅಲ್ಲಿನ ಜನರ ಬೇಡಿಕೆಯಾಗಿತ್ತು, ಅದನ್ನು ಜಿಲ್ಲಾಡಳಿತ ನಿರ್ಧರಿಸುತ್ತದೆ. ಜಿ.ವಿ.ಮೋಹನ್‌ಕುಮಾರ್ ತಹಸೀಲ್ದಾರ್, ತುಮಕೂರು ಈ ವಲಯದಲ್ಲಿ 450 ಮನೆ, 1900 ಜನರಿದ್ದು ಸೀಲ್‌ಡೌನ್ ಸಡಿಲಿಕೆ ಮಾಡಬೇಕು ಎಂಬುದು ಅವರ ಬೇಡಿಕೆಯಾಗಿತ್ತು, 28 ದಿನ ಅದಕ್ಕೆ ಅವಕಾಶವಿಲ್ಲ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಎಲ್ಲರೂ ಸಹಕಾರ ನೀಡುತ್ತಿದ್ದಾರೆ. ಯೋಗಾನಂದ್ ಇನ್ಸಿಡೆಂಟ್ ಕಮಾಂಡರ್, ಪಿಎಚ್ ಕಾಲನಿ ಲಾಕ್‌ಡೌನ್ ಹಾಗೂ ಆ ನಂತರದಲ್ಲಿನ ಸೀಲ್‌ಡೌನ್ ಕಾರಣಕ್ಕೆ ಜನರು ದುಡಿಮೆ ಇಲ್ಲದೆ ಕುಳಿತಿದ್ದಾರೆ, ಇಂತಹ ಸಮಯದಲ್ಲಿ ಊಟಕ್ಕೂ ತೊಂದರೆಯಾಗಿದೆ. ಜಿಲ್ಲಾಡಳಿತ ಎಲ್ಲರಿಗೂ ಸಮರ್ಪಕವಾಗಿ ದಿನಸಿ ಪೂರೈಸಬೇಕು. ಇಲ್ಲ ಎಲ್ಲರಂತೆ ನಮ್ಮನ್ನೂ ದುಡಿಯಲು ಬಿಡಬೇಕು. ಹಾಷಮ್ ಪೂರ್‌ಹೌಸ್ ಕಾಲನಿ