

ಚನ್ನಮ್ಮನ ಕಿತ್ತೂರು: ವಿದ್ಯಾರ್ಥಿಗಳು ತಮಗೆ ದೊರೆಯುವ ಅವಕಾಶಗಳನ್ನು ಸದುಪಯೋಗ ಪಡೆದು ಬದುಕು ರೂಪಿಸಿಕೊಳ್ಳಬೇಕು ಎಂದು ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಮಹಾಂತೇಶ ಕಂಬಾರ ಕರೆ ನೀಡಿದರು.
ಪಟ್ಟಣದ ಕಿನಾವಿವ ಸಂದ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಪ್ರಸಕ್ತ ಸಾಲಿನ ವಿದ್ಯಾರ್ಥಿ ಒಕ್ಕೂಟ, ಎನ್ಎಸ್ಎಸ್, ಎನ್ಸಿಸಿ, ಕ್ರೀಡಾ ಚಟುವಟಿಕೆ ಹಾಗೂ ಇತರ ವಿಭಾಗಗಳ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಲಭ್ಯ ಸಂಪನ್ಮೂಲ, ಅವಕಾಶ ಬಳಸಿ ಸಾಧನೆ ಮಾಡಬೇಕು ಎಂದರು. ಪ್ರಾಚಾರ್ಯ ನಾಗರಾಜ ಎಚ್.ಕೆ ಪ್ರಾಸ್ತಾವಿಕ ಮಾತನಾಡಿ, ವಿದ್ಯಾರ್ಥಿಗಳು ಸುಪ್ತಪ್ರತಿಭೆಯ ವ್ಯಕ್ತಿತ್ವ ವಿಕಸನಕ್ಕೆ ಕಾಲೇಜಿನ ವಿದ್ಯಾರ್ಥಿ ಟಕಗಳು ಸಹಕಾರಿಯಾಗಲಿವೆ ಎಂದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮಹಿಳಾ ವಾಲಿಬಾಲ್ ತಂಡಕ್ಕೆ ಆಯ್ಕೆಯಾದ ಕ್ರೀಡಾಪಟು ವೆಷ್ಣವಿ ದೇಗಾವಿ ಹಾಗೂ ಜುಡೋದಲ್ಲಿ ವಿಶ್ವವಿದ್ಯಾಲಯಕ್ಕೆ ಮೂರನೇ ಸ್ಥಾನಗಳಿಸಿದ ರಾಣಿ ಕೋಟೆ ಅವರನ್ನು ಸನ್ಮಾನಿಸಲಾಯಿತು. ಅಧ್ಯತೆವಹಿಸಿ ಕಿತ್ತೂರು ನಾಡ ವಿದ್ಯಾವರ್ಧಕ ಸಂದ ಚೇರ್ಮನ್ ಜಗದೀಶ ವಸ್ತ್ರದ ಮಾತನಾಡಿದರು. ಪ್ರದಿಪ ಮೇಲಿನಮನಿ, ಸಂದ ಉಪಾಧ್ಯ ಅರುಣಕುಮಾರ ಬಿಕ್ಕಣ್ಣವರ, ಜೆ.ಎಸ್. ಬಿಕ್ಕಣ್ಣವರ, ಎಂ.ಬಿ. ದಳವಾಯಿ, ಜೆ.ಬಿ. ಟ್ನಟ್ಟಿ, ವಿ.ಆರ್. ಪಾಟೀಲ ಐಕ್ಯೂಎಸಿ ಚೇರ್ಮನ್ ಆರ್.ಬಿ.ಹವಿನಾಳೆ, ವಿದ್ಯಾಶ್ರೀ ಶಟೋಜಿ, ಎಂ.ಜಿ. ಹಿರೇಮಠ, ಕೀರ್ತಿ ಪಟ್ಟಣಶೆಟ್ಟಿ, ಡಾ. ಕೆ.ಆರ್.ಮೆಳವಂಕಿ, ರೂಪಾ ಹುಣಶಿಮರದ, ಅಶ್ವಿನಿ ಹಾಲಗಿಮರಡಿ, ಹನುಮಂತ ಶೀಗಿಹಳ್ಳಿ, ಚೆತ್ರಾ ಪಠಾಣೆ ಇತರರಿದ್ದರು.