

ಮಂಡ್ಯ: ಹಿಂದೂಸ್ಥಾನ್ ಏರೋನ್ಯಾಟಿಕ್ಸ್ ಟೆಕ್ನಿಕಲ್ ಟ್ರೈನಿಂಗ್ ಇಸ್ಟಿಟ್ಯೂಟ್ ಬೆಂಗಳೂರು ವತಿಯಿಂದ ವಿವಿಧ ರೀತಿಯ ಅಪ್ರೆಂಟಿಸ್ ತರಬೇತಿ ನೀಡಲಾಗುತ್ತಿದೆ. ಆಸಕ್ತರು ನಗರದ ಆರ್‌ಟಿಒ ಕಚೇರಿ ಎದುರಿನ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಅರ್ಜಿ ಪಡೆದು ಸೆ.30ರೊಳಗೆ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವವರು ಐಟಿಐ ತೇರ್ಗಡೆ ಹೊಂದಿರಬೇಕು, ಕಡ್ಡಾಯವಾಗಿ ವೆಬ್‌ಸೈಟ್ apprenticeshipindia.org/candidate®istration ನಲ್ಲಿ ನೋಂದಾಯಿಸಿ ಅರ್ಜಿಯಲ್ಲಿ ಅಪ್ರೆಂಟಿಸ್ ನೋಂದಣಿ ಸಂಖ್ಯೆ ನಮೂದಿಸಬೇಕು. ಆಯ್ಕೆಯಾದವರಿಗೆ ಸ್ಟೈಫಂಡ್ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.