

ಕೋಲಾರ; ಕೋಲಾರ&ಚಿಕ್ಕಬಳ್ಳಾಪುರ ಕೇಂದ್ರ ಸಹಕಾರಿ ಬ್ಯಾಂಕಿನ (ಡಿಸಿಸಿ ಬ್ಯಾಂಕ್) ಚುನಾವಣೆ ಮೇ 28ಕ್ಕೆ ನಿಗದಿಯಾಗಿದ್ದು, ಕರಡು ಮತದಾರರ ಪಟ್ಟಿ ಪ್ರಕಟಿಸಿದ್ದು, ಆಕ್ಷೇಪಣೆಗಳಿದ್ದಲ್ಲಿ ಮೇ 5ರೊಳಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಪಟ್ಟಿಯಲ್ಲಿ ಒಟ್ಟು 1,129 ಮಂದಿ ಮತದಾರರ ಹೆಸರು ಘೋಷಿಸಿದ್ದು, ಅದರಲ್ಲಿ ಅನುಬಂಧ&1 ರಂತೆ 389 ಮಂದಿ ಮತದಾನದ ಹಕ್ಕನ್ನು ಹೊಂದಿದ್ದು, ಅವರು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಯಾವುದೇ ಸಮಸ್ಯೆ ಇಲ್ಲ.
ಆದರೆ ಅನುಬಂಧ&3 ರಂತೆ 105 ಮಂದಿ ಹೆಸರು ಪಟ್ಟಿಯಲ್ಲಿ ಪ್ರಕಟಗೊಂಡಿದ್ದು, ಅವರು ಬ್ಯಾಂಕಿನ ಸಾಲ ಸುಸ್ತಿಯಾಗಿರುವುದು, ಷೇರು ಹಣದ ಮೊಬಲಗು ಕೊರತೆ ಹಿನ್ನೆಲೆಯುಳ್ಳವರಾಗಿದ್ದು ಅವರು ಈ ಕೊರತೆಯನ್ನು 30 ದಿನಗಳಲ್ಲಿ ನೀಗಿಸಿದಲ್ಲಿ ಅವರೂ ಮತದಾನದ ಹಕ್ಕು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.
ಉಳಿದಂತೆ ಅನುಬಂಧ-&4 ರಲ್ಲಿನ 635 ಅನರ್ಹ ಸಹಕಾರ ಸಂಘಗಳ ಮತದಾರರಿಗೆ ಮತದಾನದಲ್ಲಿ ಪಾಲ್ಗೊಳ್ಳುವ ಅರ್ಹತೆ ಇಲ್ಲವಾದರೂ ಆಕ್ಷೇಪಣೆ ಸಲ್ಲಿಸಲು ಮೇ 5 ಕೊನೆಯ ದಿನಾಂಕವಾಗಿದ್ದು, ನಂತರ ಚುನಾವಣಾಧಿಕಾರಿಗಳು ಪರಿಗಣಿಸಿದಲ್ಲಿ ಮಾತ್ರವೇ ಮತದಾನದ ಹಕ್ಕು ಸಿಗಲಿದೆ ಇಲ್ಲವಾದಲ್ಲಿ ಇವರು ಮತದಾನದ ಹಕ್ಕು ಹೊಂದಿರುವುದಿಲ್ಲ. ಅನುಬಂಧ-&2ರಲ್ಲಿ ಯಾವುದೇ ಸಹಕಾರ ಸಂಘ, ಮತದಾರರ ಸಂಖ್ಯೆ ಇಲ್ಲ.